ಯೋಗಿ ನಾರೇಯಣ ಸೇವಾ ಟ್ರಸ್ಟ್ ದಶಮಾನೋತ್ಸವ
1 min readಯೋಗಿ ನಾರೇಯಣ ಸೇವಾ ಟ್ರಸ್ಟ್ ದಶಮಾನೋತ್ಸವ
ಗುಂಪು ಮರದ ಆನಂದ್‌ಗೆ ಯೋಗಿ ಸೇವಾರತ್ನ ಪ್ರಶಸ್ತಿ
ಶಿಕ್ಷಣ ಸೇವೆಯಲ್ಲಿ ಸತತ ಶ್ರಮದ ಫಲವಾಗಿ ಪ್ರಶಸ್ತಿ
ಸತತ ಪರಿಶ್ರಮ ಮತ್ತು ಜನಪರ ಕಾಳಜಿಯಿಂದ ಶ್ರಮಿಸಿದರೆ ಗೌರವ ಹುಡುಕಿಕೊಂಡು ಬರಲಿದೆ ಎಂಬುದಕ್ಕೆ ಗುಂಪು ಮರದ ಆನಂದ್ ನಿದರ್ಶನ. ಇವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿಯಾಗಿ ಖ್ಯಾತಿ ಪಡೆದಿದ್ದು, ಚಿಕ್ಕಬಳ್ಳಾಪುರದ ಪಂಚಗಿರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಈಗಾಗಲೇ ಹಲವು ಪ್ರಶಸ್ತಿಗಳು ಬಂದಿದ್ದು, ಇದೀಗ ಶ್ರೀ ಯೋಗಿನಾರೇಯಣ ಸೇವಾಟ್ರಸ್ಟ್ ಇವರ ಸೇವೆ ಗುರ್ತಿಸಿ ಯೋಗಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಹೌದು, ಸೇವೆ ಎಂಬುದು ಇದೀಗ ಪ್ರಚಾರದ ಸಾಧನವಾಗಿ ಪರಿಣಿಸಿದೆ. ಆದರೆ ಅದೇ ಸೇವೆಯನ್ನು ಮಡಾಉತ್ತಾ ಎಲೆಮರೆ ಕಾಯಿಯಂತೆ ಹಲವಾರು ಜನ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಇಂತಹ ಎಲೆ ಮರೆ ಕಾಯಿಯಂತೆ ಪರಿಸರ ಸೇವೆ ಮಾಡುತ್ತಿರುವವರಲ್ಲಿ ಗುಂಪು ಮರದ ಆನಂದ್ ಕೂಡಾ ಒಬ್ಬರು. ಇವರು ಚಿಕ್ಕಬಳ್ಳಾಪುರದ ಪಿಪಿಎಚ್‌ಎಸ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಪರಿಸರ ಉಳಿಸಲು ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಇವರಿಗೆ ಇಂದು ಯೋಗಿ ಸೇವಾರತ್ನ ಪ್ರಶಸ್ತಿ ನೀಡಿ ಯೋಗಿನಾರೇಯಣ ಸೇವಾ ಟ್ರಸ್ಟ್ ಗೌರವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಮೂರು ಲಕ್ಷಕ್ಕೂ ಅಧಿಕ ಗಿಡ ನೆಟ್ಟು ಪೋಷಿಸಿರುವ ಗುಂಪು ಮರದ ಆನಂದ್, ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಕಳೆದ 30 ವರ್ಷದಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಗುರ್ತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಸದ್ಗುರು ಶ್ರೀ ಯೋಗಿ ನಾರೇಯಣ ಸೇವಾ ಟ್ರಸ್ಟ್ 10ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವಾರ್ಷಿಕೋತ್ಸವದಲ್ಲಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್. ಕೃಷ್ಣ ಅಧ್ಯಕ್ಷತೆಯಲ್ಲಿ ಮಲ್ಲೇಶ್ವರಂ ಸೇವಾ ಸದನ ಸಭಾಂಗಣದಲ್ಲಿ ಇಂದು ಬ್ಯಾಟರಾಯನಪುರದ ಸಂಕೀರ್ತನ ಭಜನಾ ಮಂಡಳಿಯಿoದ ಕೈವಾರ ನಾರೇಯಣ ಯತೀಂದ್ರರ ಆರಾಧನೆ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಸೇವಾರತ್ನ ಪ್ರಶಸ್ತಿಯನ್ನು ವಿವಿಧ ಸೇವಾಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸುವ ಕಾರ್ಯವೂ ನಡೆಯಿತು.