ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಬಾಲಕುಂಟಹಳ್ಳಿಯಲ್ಲಿ ಕೃಷಿ ವಿದ್ಯಾರ್ಥಿಗಳ ಕಾರ್ಯಾನುಭವ

1 min read

ಬಾಲಕುಂಟಹಳ್ಳಿಯಲ್ಲಿ ಕೃಷಿ ವಿದ್ಯಾರ್ಥಿಗಳ ಕಾರ್ಯಾನುಭವ

ಮೂರು ತಿಂಗಳಿ0ದ ಗ್ರಾಮದಲ್ಲೇ ಇದ್ದ ಕೃಷಿ ವಿದ್ಯಾರ್ಥಿಗಳು

ಬಾಲಕುಂಟಹಳ್ಳಿಯಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿಜ್ಞಾನ ವಿದ್ಯಾರ್ಥಿಗಳು ಮೂರು ತಿಂಗಳ ಕಾರ್ಯಾನುಭವ ಮುಗಿದು ತಾವು ಮೂರು ತಿಂಗಳಲ್ಲಿ ಕಲಿತು ೨೦ ಗುಂಟೆಯಲ್ಲಿ ೫೨ ಬಗೆಯ ಬೆಳೆಗಳನ್ನು ಬೆಳೆದು ರೈತರ ಪ್ರದರ್ಶನಕ್ಕಿಟ್ಟು ಗಮನ ಸೇಳೆದರು.

ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, ವ್ಯಾಪ್ತಿಯ ಬಾಲಕುಂಟಹಳ್ಳಿಯಲ್ಲಿ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ  ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಮೂರು ತಿಂಗಳು ಶಿಬಿರದ ಅಂಗವಾಗಿ ವಾಸವಾಗಿದ್ದಾರೆ. ಇಂದಿಗೆ ಮೂರು ತಿಂಗಳು ಪೂರ್ಣಗೊಂಡಿದ್ದು, ಇಂದು ಕೃಷಿ ವೈಭವ ಹೆಸರಿನಲ್ಲಿ ಬೆಳೆ ಕ್ಷೇತ್ರೋತ್ಸವ ಮತ್ತು ರೈತರ ವಿಜ್ಞಾನಿಗಳ ಸಂವಾದ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ ಎನ್ ಕೇಶವರೆಡ್ಡಿ ಆಗಮಿಸಿದ್ದು, ವಿದ್ಯಾರ್ಥಿಗಳು ಮೂರು ತಿಂಗಳಿ0ದ ಬೆಳೆದ ಪೌಷ್ಠಿಕ ಕೈತೋಟ, ವಿದೇಶಿ ಪ್ರಭೇದಗಳು, ಅಣಬೆ ಬೆಸಾಯ, ಜಲ ಕೃಷಿ, ಕೃಷಿ ಹೊಂಡ, ಜೇನು ಸಾಗಾಣಿಕೆ, ಮೌಲ್ಯವರ್ಧಿತ ಆಹಾರಗಳು, ಡ್ರೋನ್ ಪದ್ಧತಿ ಪ್ರಾತ್ಯಕ್ಷತೆ ವೀಕ್ಷಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸತತ ಮೂರು ತಿಂಗಳಿ0ದ ಕೃಷಿ ವಿದ್ಯಾರ್ಥಿಗಳು ಬಾಲಕುಂಟಹಳ್ಳಿಯಲ್ಲಿದ್ದು, ರೈತರ ಜೊತೆ ಬೆರೆತು ಕೃಷಿ ಬಗ್ಗೆ ಅರಿತು, ತೋರಿಸಿ ಕೊಟ್ಟಿರುವುದು ರೈತರಿಗೆ ಉಪಯೋಗವಾಗಿದೆ ಎಂದರು.

ಅ0ತಿಮ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಸತತ ಮೂರು ತಿಂಗಳಿನಿ0ದ ಬಾಲಕುಂಟಹಳ್ಳಿಯಲ್ಲಿದ್ದು, ಅದೇ ಗ್ರಾಮದ ರೈತರ ಜೊತೆ ಬೆರೆತು ಅವರಿಂದ ಕೃಷಿ ವಿಚಾರಗಳು ತಿಳಿದು, ವಿದ್ಯಾರ್ಥಿಗಳಿಂದ ರೈತರಿಗೆ ಕೃಷಿ ಬಗ್ಗೆ ಬೆಳೆಯುವ ವಿಧಾನಗಳನ್ನು ತಿಳಿಸಿ, 20 ಗುಂಟೆಯಲ್ಲಿ 52 ಬಗೆಯ ಬೆಳೆಗಳನ್ನು ಬೆಳೆದು ರೈತರ ಪ್ರದರ್ಶನಕ್ಕೆ ಇಟ್ಟಿದ್ದು, ಇಂದು ಕೃಷಿ ವಿದ್ಯಾರ್ಥಿಗಳ ಮೂರು ತಿಂಗಳ ಅವಧಿ ಮುಗಿದು, ಕೃಷಿ ವೈಭವ ಮಾಡಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕೆ ವಿ ನಾಗರಾಜ್, ಎಂ ಸಿ ವೆಂಕಟೇಶ್, ಎಸ್ ಆರ್‌ಎಸ್ ದೇವರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *