ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಅಯೋಧ್ಯೆ ರಾಮಮಂದಿರದ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳ ವಿಶೇಷತೆ ಏನು? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ

1 min read

ದೇ ಜನವರಿ 22 ರಂದು ವಿದ್ಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ (PM Modi) ಉದ್ಘಾಟನೆಗೊಳ್ಳಲಿರುವ ಅಯೋಧ್ಯೆಯ ರಾಮಮಂದಿರವು ಐತಿಹಾಸಿಕಾಗಿ ಹಾಗೂ ಆಧ್ಯಾತ್ಮಿಕವಾಗಿ ಜನಮಾನಸದಲ್ಲಿ ಗುರುತನ್ನುಂಟು ಮಾಡಲಿದೆ. ರಾಮಲಲ್ಲಾನ ಪ್ರಾಣಪ್ರತಿಷ್ಠಾ (Pranapratistha of Ramlalla) ಕಾರ್ಯಕ್ರಮ ಕೂಡ ಇದೇ ಸಮಯದಲ್ಲಿ ಜರುಗಲಿದ್ದು ದೇಶಕ್ಕೆ ದೇಶವೇ ಈ ಅಭೂತಪೂರ್ವ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದೆ.

 

ರಾಮಮಂದಿರದ ನಿರ್ಮಾಣ ಕಲ್ಲುಗಳಿಂದಲೇ ಮಾಡಲಾಗಿದೆ

ಅಯೋಧ್ಯೆಯ ರಾಮಮಂದಿರದ ಕುರಿತು ಅನೇಕ ಆಸಕ್ತಿಕರ ಅಂಶಗಳಿದ್ದು ಅದರಲ್ಲಿ ಅತ್ಯಂತ ಕುತೂಹಲಕಾರಿಯಾಗಿರುವಂತಹದ್ದು ರಾಮನ ಮಂದಿರದ ನಿರ್ಮಾಣವನ್ನು ಬರಿಯ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ ಎಂಬುದಾಗಿದೆ.

ಅದು ಕೂಡ ಅಂತಿಂತಹ ಕಲ್ಲುಗಳಲ್ಲ ಕೋಲಾರದ ಗಣಿಗಳಲ್ಲಿ ನೆಲೆಸಿರುವ ಭಾರತದ ಅಗ್ರಗಣ್ಯ ಭೂವೈಜ್ಞಾನಿಕ ಪರೀಕ್ಷಾ ಪ್ರಯೋಗಾಲಯದಲ್ಲಿ ಅವುಗಳ ಶಕ್ತಿಯನ್ನು ವಿಶೇಷವಾಗಿ ಮತ್ತು ಪ್ರತ್ಯೇಕವಾಗಿ ಆಯ್ಕೆಮಾಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

ಹೀಗೆ ಎಚ್ಚರಿಕೆಯಿಂದ ಪರಿಶೀಲಿಸಿ ಆಯ್ದ ಕಲ್ಲುಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಬೆಂಗಳೂರಿನ ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ ಸಂಸ್ಥೆಯ (ಎನ್‌ಐಆರ್‌ಎಮ್) ನಿರ್ದೇಶಕ ಡಾ.ಎಚ್.ಎಸ್.ವೆಂಕಟೇಶ್ ಹೇಳುತ್ತಾರೆ

ಇನ್ನು ಕಲ್ಲುಗಳ ಪರೀಕ್ಷೆಯನ್ನು ಭೌತಿಕ-ಯಾಂತ್ರಿಕ ವಿಶ್ಲೇಷಣೆಯನ್ನು ಬಳಸಿಕೊಂಡು ಮಾಡಲಾಗಿದೆ. ಎನ್‌ಐಆರ್‌ಎಮ್ ಭಾರತೀಯ ಅಣೆಕಟ್ಟುಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳಿಗೆ ಕಲ್ಲುಗಳನ್ನು ಪರೀಕ್ಷಿಸುವ ಏಜೆನ್ಸಿಯಾಗಿಯೂ ಕೆಲಸ ಮಾಡುತ್ತದೆ.

ಅಯೋಧ್ಯೆ ರಾಮ ಮಂದಿರ

ವಿಶೇಷವಾಗಿ ಆಯ್ಕೆಮಾಡಿರುವ ವಸ್ತುಗಳು

ರಾಮಮಂದಿರದ ನಿರ್ಮಾಣಕ್ಕೆ ಅತ್ಯಂತ ವಿಶೇಷವಾಗಿ ಆಯ್ಕೆ ಮಾಡಿದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ವೆಂಕಟೇಶ್ ಹೇಳುತ್ತಾರೆ.

ದೇವಾಲಯವನ್ನು ನಿರ್ಮಿಸಲು ಬಳಸಿದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯ ಕಲ್ಲಿನ ಬ್ಲಾಕ್ಗಳನ್ನು ವೈಜ್ಞಾನಿಕ ತತ್ವಗಳು ಮತ್ತು ಸಾಧನಗಳನ್ನು ಬಳಸಿಕೊಂಡು ಅವುಗಳ ಸಮಗ್ರತೆ ಮತ್ತು ಸದೃಢತೆಗಾಗಿ ತುಂಬಾ ಜಾಗರೂಕತೆಯಿಂದ ವಿಮರ್ಶಾತ್ಮಕವಾಗಿ ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಐಎಸ್‌ಐ ಮಾನದಂಡಗಳನ್ನು ಒಳಗೊಂಡಿದೆ

ರಾಮಮಂದಿರದ ನಿರ್ಮಾಣಕ್ಕಾಗಿ 20,700 ದೊಡ್ಡ ಗ್ರಾನೈಟ್ ಬ್ಲಾಕ್‌ಗಳು, 32,800 ಮರಳುಗಲ್ಲು ಮತ್ತು 7,200 ಅಮೃತಶಿಲೆಯ ಬ್ಲಾಕ್‌ಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಲಾಗಿದ್ದು ಇವೆಲ್ಲವೂ ಭಾರತೀಯ ಮಾನದಂಡಗಳ ಸಂಸ್ಥೆ ಅಥವಾ ಐಎಸ್‌ಐ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ವೆಂಕಟೇಶ್ ಉಲ್ಲೇಖಿಸಿದ್ದಾರೆ.

ಬೂದು ಗ್ರಾನೈಟ್‌ಗಳನ್ನು ವಿನ್ಯಾಸಗೊಳಿಸಿದ ಅಡಿಪಾಯದ ಮೇಲೆ ಬಳಸಲಾಗಿದೆ ಮತ್ತು ದೇವಾಲಯಕ್ಕೆ 6.7 ಮೀಟರ್ ದಪ್ಪದ ಸ್ತಂಭವನ್ನು ಅಳವಡಿಸಲಾಗಿದೆ.

ಆಧುನಿಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ

ಗ್ರಾನೈಟ್‌ಗಳು ಕನಿಷ್ಠ 2,100 ಮಿಲಿಯನ್ ವರ್ಷಗಳಷ್ಟು ಹಳೆಯವು ಮತ್ತು ದಕ್ಷಿಣ ಭಾರತದಿಂದ ಒಂಗೋಲ್, ಚಿಮಕುರ್ತಿ, ವಾರಂಗಲ್ ಮತ್ತು ಕರೀಂನಗರದಲ್ಲಿನ ಎಚ್ಚರಿಕೆಯಿಂದ ಆಯ್ಕೆಮಾಡಿದ ಗಣಿಗಳಿಂದ ಪಡೆಯಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಇವುಗಳನ್ನು ಅಯೋಧ್ಯೆಗೆ ಸಾಗಿಸಲಾಗಿದ್ದು ಇವುಗಳ ದೃಢತೆಯನ್ನು ಇನ್ನಷ್ಟು ನಿರ್ಧರಿಸಲು ಸ್ಕಿಮಿಡ್ ಹ್ಯಾಮರ್‌ನಂತಹ ಆಧುನಿಕ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಲಾಯಿತು ಅಂತೆಯೇ ಅನುಮಾನಸ್ಪದವಾಗಿ ಕಂಡುಬಂದ ಬ್ಲಾಕ್‌ಗಳನ್ನು ಅಲ್ಲಿಯೇ ಕೈಬಿಡಲಾಯಿತು ಎಂದು ವೆಂಕಟೇಶ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಮರಳುಗಲ್ಲು, ಅಮೃತಶಿಲೆಯನ್ನು ಎಲ್ಲಿಂದ ತರಲಾಗಿದೆ

ದೇವಾಲಯದ ಸುಂದರ ರಚನೆಯನ್ನು ವಿಶೇಷವಾಗಿ ಆಯ್ಕೆಮಾಡಿದ ಮರಳುಗಲ್ಲಿನಿಂದ ಮಾಡಲಾಗಿದೆ ಇದಕ್ಕಾಗಿ ರಾಜಸ್ಥಾನದ ಪಿಂಕ್ ಬಂಸಿ ಪಹಾರ್ಪುರ್ ಕಲ್ಲುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳುತ್ತಾರೆ.

ಮರಳುಗಲ್ಲು ಕನಿಷ್ಠ 700-1,000 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂಬುದು ಮಿಶ್ರಾ ಮಾತಾಗಿದೆ. ಮರಳುಗಲ್ಲು ಒಂದು ಆದ್ಯತೆಯ ವಸ್ತುವಾಗಿದೆ ಏಕೆಂದರೆ ಇದು ಕೆತ್ತಲು ಸಾಕಷ್ಟು ಮೃದುವಾಗಿರುತ್ತದೆ ಆದರೆ ಗಾಳಿಯ ಸವೆತದಂತಹ ಹವಾಮಾನವನ್ನು ತಡೆದುಕೊಳ್ಳುವಷ್ಟು ಕಠಿಣವಾಗಿದೆ ಎಂದು ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಬಿಳಿ ಬಣ್ಣದ ಅಮೃತಶಿಲೆಯನ್ನು ರಾಜಸ್ಥಾನದ ಮಕ್ರಾನಾದ ಪ್ರಸಿದ್ಧ ಗಣಿಗಳಿಂದ ತರಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದು, ಅಮೃತಶಿಲೆಯನ್ನು ಗರ್ಭಗೃಹದಲ್ಲಿ ವಿಶೇಷವಾಗಿ ಭಾರ ಹೊರುವ ಶಿಲೆಯಾಗಿ ಬಳಸದೆ ಕೇವಲ ಅಲಂಕಾರಿಕ ವಸ್ತುವಾಗಿ ಬಳಸಲಾಗಿದೆ ಎಂದು ಹೇಳಿದ್ದಾರೆ.

►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura

About The Author

Leave a Reply

Your email address will not be published. Required fields are marked *