ಅರಸೀಕೆರೆಯಲ್ಲಿ ರಸ್ತೆಗೆ ಹರಿಯುತ್ತಿರುವ ತ್ಯಾಜ್ಯ ನೀರು
1 min readಅರಸೀಕೆರೆಯಲ್ಲಿ ರಸ್ತೆಗೆ ಹರಿಯುತ್ತಿರುವ ತ್ಯಾಜ್ಯ ನೀರು
ಸ್ಥಳೀಯ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಹಾಸನ ಜಿಲ್ಲೆ ಅರಸೀಕೆರೆ ನಗರದ ಹುಳಿಯಾರ್ ರಸ್ತೆಗೆ ಹೊಂದಿಕೊoಡಿರುವ ಸಂತೆ ಮೈದಾನ ರಸ್ತೆಗೆ ಚರಂಡಿ ಇಲ್ಲದ ಕಾರಣ ಕೊಳಚೆ ನೀರು, ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದ್ದು, ಸಮರ್ಪಕ ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿದು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಅರಸೀಕೆರೆ ನಗರದ ಹುಳಿಯಾರ್ ರಸ್ತೆಗೆ ಹೊಂದಿಕೊoಡಿರುವ ಸಂತೆ ಮೈದಾನ ರಸ್ತೆಗೆ ಚರಂಡಿ ಇಲ್ಲದ ಕಾರಣ ಕೊಳಚೆ ನೀರು, ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದ್ದು, ಸಮರ್ಪಕ ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹರಿದು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ರಸ್ತೆಯ ಮಾರ್ಗವಾಗಿ ಪ್ರಸಿದ್ಧ ದೇವಸ್ಥಾನ ತಿರುಪತಿ ಇರುವುದರಿಂದ ಸಾವಿರಾರು ಮಂದಿ ಭಕ್ತರು ಹೋಗುವ ದಾರಿಯೂ ಆಗಿದೆ.
ಅಲ್ಲದೆ ಮಸೀದಿ ಹಾಗೂ ಕೆಂಡದ ಗುಂಡಿಯಲ್ಲಿ ಬಾಬಯ್ಯ ಅವರನ್ನ ಕೂರಿಸಲಾಗುತ್ತದೆ. ಇಷ್ಟು ಧಾರ್ಮಿಕ ಸ್ಥಳಗಳಿಗೆ ಭಕ್ತರು ಓಡಾಡುವ ಜಾಗ ಆಗಿದ್ದರೂ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದು ವಾಣಿಜ್ಯ ಪ್ರದೇಶವಾದ ಕಾರಣ ಪ್ರತಿನಿತ್ಯ ಹಲವು ವಾಹನಗಳು ಓಡಾಡುವ ರಸ್ತೆಯಾಗಿದೆ. ಇಂತಹ ಸ್ಥಳದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ವಾಹನಗಳು ಚಲಿಸಿದರೆ ಚರಂಡಿ ನೀರು ಪಾದಚಾರಿಗಳ ಮೇಲೆ, ಅಂಗಡಿಗಳ ಮೇಲೆ ಸಿಡಿಯುತ್ತಿದೆ ಇದರಿಂದ ಜನರಿಗೆ ಬಹಳಷ್ಟು ಸಮಸ್ಯೆ ಎದರಾಗಿದೆ.
ಕೆಲ ತಿಂಗಳ ಹಿಂದೆ ಈ ವಿಷಯವಾಗಿ ಚರಂಡಿ ನೀರು ದಿನಸಿ ಅಂಗಡಿಗಳ ಒಳಗೆ ನುಗ್ಗಿ ಹಲವು ಅಂಗಡಿ ಮಾಲೀಕರು ನಷ್ಟ ಅನುಭವಿಸಿದ ಘಟನೆಯೂ ನಡೆದಿತ್ತು. ಆಗ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಸ್ಥಳಕ್ಕೆ ಆಗಮಿಸಿ ಈ ಚರಂಡಿ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಿರುವುದರಿಂದ ಸಂಪೂರ್ಣ ಹಾಳಾಗಿದೆ, ತಿರುಪತಿ ಜಾತ್ರೆ ನಂತರ ಹೊಸದಾಗಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಅಂದು ಹೋದವರು ಈವರೆಗೂ ಯಾವುದೇ ಕಾಮಗಾರಿ ನಡೆಸದ ಕಾರಣ. ಅಕ್ಕ ಪಕ್ಕದಲ್ಲಿ ಇರುವ ಜನರು ಅಧಿಕಾರಿಗಳ ವಿರುದ್ಧ ಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯು ಸಂಪೂರ್ಣ ಹಾಳಾಗಿದೆ, ಈ ರಸ್ತೆ ಮಾರ್ಗವಾಗಿ ಹಲವು ಶಾಲೆ ವಿದ್ಯಾರ್ಥಿಗಳು ವಾಹನಗಳಲ್ಲಿ ಓಡಾಡುವ ವೇಳೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು, ಹೊಸದಾಗಿ ಚರಂಡಿ ನಿರರ್ಮಿಸಿ, ಜನರ ಆರೋಗ್ಯ ರಕ್ಷಣೆ ಮಾಡಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.