ಗೌನಿಪಲ್ಲಿ ಪುರಸಭೆ ಮಾಡಲು ಆಗ್ರಹಿಸಿ ಪಾದಯಾತ್ರೆ
1 min readಗೌನಿಪಲ್ಲಿ ಪುರಸಭೆ ಮಾಡಲು ಆಗ್ರಹಿಸಿ ಪಾದಯಾತ್ರೆ
ಶ್ರೀನಿವಾಸಪುರದಿಂದ ಬೆಳಗಾವಿಗೆ ಪಾದಯಾತ್ರೆ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯತಿಯನ್ನು ಪುರಸಭೆ ಮಾಡಬೇಕೆಂದು ಒತ್ತಾಯಿಸಿ ಗೌನಿಪಲ್ಲಿ ಅಮ್ಜದ್ ಖಾನ್ ಎಂಬುವರು ಗೌನಿಪಲ್ಲಿ ಯಿಂದ ಬೆಳಗಾವಿಗೆ ಪಾದಯಾತ್ರೆ ಹೊರಟಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯತಿಯನ್ನು ಪುರಸಭೆ ಮಾಡಬೇಕೆಂದು ಒತ್ತಾಯಿಸಿ ಗೌನಿಪಲ್ಲಿ ಅಮ್ಜದ್ ಖಾನ್ ಎಂಬುವರು ಗೌನಿಪಲ್ಲಿ ಯಿಂದ ಬೆಳಗಾವಿಗೆ ಪಾದಯಾತ್ರೆ ಹೊರಟಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರ ಹಾಗೂ ಸಂಬ0ಧ ಪಟ್ಟ ಸಚಿವರಿಗೆ ಮನವಿ ನೀಡಲು ಪಾದಯಾತ್ರೆ ಮೂಲಕ ಹೊರಟಿದ್ದಾರೆ .
ಈ ವೇಳೆ ಮಾತನಾಡಿದ ಅಮ್ಜದ್ ಖಾನ್, ಗೌನಿಪಲ್ಲಿ ಗ್ರಾಮ ಪಂಚಾಯತಿ ಪುರಸಭೆಗೆ ಎಲ್ಲಾ ರೀತಿಯಲ್ಲಿಯೂ ಅರ್ಹತೆ ಹೊಂದಿದ್ದು, ಕಳೆದ 2023ರ ಅಧಿವೇಶನದ ವೇಳೆಯೂ ಪಾದಯಾತ್ರೆ ಮೂಲಕ ಹೊರಟು ಸಂಬ0ಧ ಪಟ್ಟ ಪೌರಾಡಳಿತ ಸಚಿವರಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ 2011ರ ಜನಗಣತಿ ಪರಿಗಣಿಸಿ ಕಾರಣಾಂತರಗಳಿ0ದ ತಡೆಹಿಡಿಯಲಾಗಿದೆ. 2021 ರ ಜನಗಣತಿ ಪರಿಗಣಿಸಬೇಕಿತ್ತು ,ಯಾವ ಕಾರಣದಿಂದ 2011 ರ ಜಾತಿಗಣತಿ ಪರಿಗಣನೆಗೆ ತೆಗೆದುಕೊಡಿದ್ದಾರೋ ಗೊತ್ತಿಲ್ಲ. ಹಾಗಾಗಿ ಪುನಃ ಸರ್ಕಾರದ ಗಮನ ಸೆಳೆಯಲು ೨ನೇ ಬಾರಿಗೆ ಪಾದಯಾತ್ರೆ ಮಾಡುತ್ತಿರುವುದಾಗಿ ಹೇಳಿದರು.
ಗೌನಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲರ ಸಹಕಾರ ಆಶೀರ್ವಾದ ಇದ್ದು, ಅಧಿವೇಶನದ ವೇಳೆಗೆ ಬೆಳಗಾವಿ ತಲುಪಿ ಸಂಬ0ಧ ಪಟ್ಟ ಪೌರಾಡಳಿತ ಸಚಿವರು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಗೌನಿಪಲ್ಲಿ ಗ್ರಾಮ ಹಾಗು ಸುತ್ತ ಮುತ್ತಲಿನ ಗ್ರಾಮಗಳ ಹಲವರು ಬೇಟಿ ಮಾಡಿ ಶುಭ ಹಾರೈಸಿದರು.