ಗುಬ್ಬಿ ಲಿಂಕ್ ಕೆನಾಲ್ ವಿರುದ್ದ ಡಿ.7ರಂದು ಪಾದಯಾತ್ರೆ
1 min read
ಗುಬ್ಬಿ ಲಿಂಕ್ ಕೆನಾಲ್ ವಿರುದ್ದ ಡಿ.7ರಂದು ಪಾದಯಾತ್ರೆ
ಶಾಸಕರೇ ರಾಜೀನಾಮೆ ಕೊಟ್ಟು, ಜನರಿಗೆ ನ್ಯಾಯ ಕೊಡಿಸಿ
ಹೇಮಾವತಿ ಲಿಂಕ್ ಕೇನಾಲ್ ವಿರುದ್ಧದ ಹೋರಾಟದ ಸಾದಕ ಭಾದಕಗಳ ಕುರಿತು ಚರ್ಚೆ ನಡೆದಿದ್ದು, ಪಕ್ಷಾತೀತವಾಗಿ ರೈತರಿಗೆ ಕರೆ ನೀಡಲಾಗಿದೆ. ಈ ಹೋರಾಟ ಯಶಸ್ವಿಯಾಗಬೇಕು ಎಂದು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಹೇಳಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ಶಾಸಕರೇ ರಾಜೀನಾಮೆ ಕೊಟ್ಟು ನಿಮಗೆ ಮತ ನೀಡಿದ ಜನರ ಕಷ್ಟ ನೋಡಿ. ಹೇಮಾವತಿ ನೀರು ಬೇರೆಯವರ ಪಾಲಾಗುತ್ತಿದೆ, ಅದನ್ನು ತಪ್ಪಿಸಿ, ಇಲ್ಲವಾದಲ್ಲಿ ಡಿಸೆಂಬರ್ ೭ರಂದು ಸಾವಿರಾರು ರೈತರು ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಲಿದ್ದಾರೆ ಎಂದರು.
ನಿರಾವರಿ ಸಚಿವರೇ ನೀವು ನೀರು ತೆಗೆದುಕೊಂಡು ಹೋಗುಲು ನಾವು ಬಿಡುವುದಿಲ್ಲ. ಸಾವಿರಾರು ರೈತರ ಪಾದಯಾತ್ರೆ ಮೂಲಕ ಲಿಂಕ್ ಕೇನಾಲ್ ಚಾನಲ್ ಮೇಲೆ ನಿಂತು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಸಾಗರನಹಳ್ಳಿ ಗೆಟ್ ನಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಮೂಲಕ ಉಗ್ರ ಪ್ರತಿಭಟನೆ ಮಾಡುತ್ತೇವೆ, ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ಪ್ರತಿಭಟನೆಗೆ ಸೇರುತ್ತಾರೆ, ಗುಬ್ಬಿ ತಾಲೂಕಿನಲ್ಲಿ ಅಡಿಕೆ ತೆಂಗು ಬೆಳೆಗಾರರು ಇದ್ದಾರೆ. ಎಲ್ಲಾ ರೈತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೃಷ್ಣಮೂರ್ತಿ. ಬಿಜೆಪಿ ತಾಲೂಕು ಅಧ್ಯಕ್ಷ ಷಡಕ್ಷರಿ, ಎಚ್ ಟಿ ಭೈರಪ್ಪ, ರೈತ ಮುಖಂಡ ಲೋಕೇಶ್ ಇದ್ದರು