ತಿಮ್ಮಸಂದ್ರದಲ್ಲಿ ವಕ್ಫ್ ಜಮೀನು ವಿವಾದ
1 min readತಿಮ್ಮಸಂದ್ರದಲ್ಲಿ ವಕ್ಫ್ ಜಮೀನು ವಿವಾದ
ಜಮೀನು ಕಳೆದುಕೊಳ್ಳುತ್ತಿರುವ ದಲಿತ ಕುಟುಂಬಗಳಿ0ದ ದಯಾಮರಣಕ್ಕೆ ಮನವಿ
ದಲಿತ ಕುಟುಂಬಗಳಿ0ದ ರಾಜ್ಯಪಾಲರಿಗೆ ದಯಾ ಮರಣಕ್ಕೆ ಮನವಿ
ತಿಮ್ಮಸಂದ್ರ ವಿವಾಧಿತ ಜಮೀನಿನಲ್ಲಿ ತಮ್ಮ ತಾತ, ಮುತ್ತಾನ ಕಾಲದಿಂದಲೂ ಉಳಿಮೆ ಮಾಡಿಕೊಂಡು, ಜೀವನ ಮಾಡುತ್ತಿದ್ದು, ಇದೀಗ ಇದು ವಕ್ಫ್ ಆಸ್ತಿ ಎಂದು ಜಮೀನು ಕಸಿದುಕೊಂಡು, ಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ, ನಮ್ಮ ಜಮೀನು ನಮಗೆ ಬೇಕು. ಇಲ್ಲವಾದಲ್ಲಿ ನಮ್ಮ ಜಮೀನಿನಲ್ಲಿಯೇ ನಾವು ಸಾಯಲು ರಾಜ್ಯಪಾಲರು ದಯಾಮರಣ ನೀಡಬೇಕೆಂದು ಜಮೀನು ಕಳೆದುಕೊಳ್ಳುತ್ತಿರುವ ತಿಮ್ಮಸಂದ್ರ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಚಿಂತಾಮಣಿ ನಗರದ ವಾರ್ಡನಂ 31 ರ ತಿಮ್ಮಸಂದ್ರದಲ್ಲಿನ ಸರ್ವೇ ನಂ 13/1. 13/3 ಮತ್ತು 20 ರಲ್ಲಿನ ಜಮೀನು ವಕ್ಫ್ ಆಸ್ತಿಗೆ ಸೇರಿದೆ ಎಂದು ಕಳೆದ ಎರಡು ತಿಂಗಳಿ0ದ ವಿವಾದ ನಡೆಯುತ್ತಿರುವ ಹಿನ್ನಲೆಯಲ್ಲಿ ಜಮೀನು ಕೆಳೆದುಕೊಳ್ಳುತ್ತಿರುವ ನೊಂದ ಕುಟುಂಬದವರಾದ ನಾಗೇಶ್, ಲಕ್ಷಮ್ಮ, ವೆಂಕಟರೆಡ್ಡಿ, ಚೆನ್ನಕೃಷ್ಣ, ನವೀನ್ ಕುಮಾರ್, ಸಹನ್, ರೂಪ ಮತಿತ್ತರರು ತಿಮ್ಮಸಂದ್ರ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ದಲಿತರಾಗಿದ್ದು, ಕಳೆದ 70 ವರ್ಷಗಳಿಂದ ಈ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ಮಾಡುತ್ತಿದ್ದೆವೆ, ಇದು ವಕ್ಫ್ ಅಸ್ತಿ ಎಂದು ಜಾಮಿಯಾ ಮಸೀದಿ ಕಮಿಟಿಯವರು ನಮ್ಮ ಜಮೀನಿನಲ್ಲಿ ಆಕ್ರಮ ಪ್ರವೇಶ ಮಾಡಿ ಬೇಲಿ ಹಾಕಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರಕೋಪಿಸಿದರು.
ಜಮೀನು ನಮ್ಮದು ಎಂಬುವುದಕ್ಕೆ ಎಲ್ಲಾ ದಾಖಲೆಗಳಿವೆ, ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಮಾಜಿ ಸಂಸದ ಎಸ್ ಮುನಿಸ್ವಾಮಿ ಅವರು ಬಂದರೆ, ಆನ್ಯಾಯವಾಗುತ್ತಿರುವ ನಮ್ಮ ಪರ ನಿಲ್ಲಬೇಕಾದ ದಲಿತಪರ ಸಂಘಟನೆಗಳ ಮುಖಂಡರು ರಾಜಕೀಯ ಬಳಿಸಿಕೊಂಡು ಸಚಿವರ ಬಳಿ ಬೇಷ್ ಅನಿಸಿಕೊಳ್ಳಲು ಆನ್ಯಾಯಗೊಳಗಾಗಿರುವ ದಲಿತರಿಗೆ ಮತ್ತಷ್ಟು ಆನ್ಯಾಯ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಅಳಲು ತೋಡಿಕೊಂಡರು.
ಈ ಜಮೀನು ನಂಬಿಕೊ0ಡು ಜೀವನ ಮಾಡುತ್ತಿದ್ದು, ಒಂದು ವೇಳೆ ನಮ್ಮ ಜಮೀನು ನಮಗೆ ಸಿಗದಿದ್ದರೆ ನಮ್ಮ ಜಮೀನಿನಲ್ಲೆ ನಮ್ಮ ಕುಟುಂಬದವರೆಲ್ಲಾ ಸಾಯಲು ರಾಜ್ಯಪಾಲರು ನಮಗೆ ದಯಾಮರಣ ನೀಡಬೇಕೆಂದು ಜಮೀನು ಕಳೆದುಕೊಳ್ಳುತ್ತಿರುವ ಕುಟುಂಬದವರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.