ಬೀದರ್ ಜಿಲ್ಲೆಯ ಗಡಿ ಔರಾದ್‌ಗೂ ತಟ್ಟಿದ ವಕ್ಫ್ ಬಿಸಿ
1 min readಬೀದರ್ ಜಿಲ್ಲೆಯ ಗಡಿ ಔರಾದ್‌ಗೂ ತಟ್ಟಿದ ವಕ್ಫ್ ಬಿಸಿ
ಔರಾದ್‌ಪಟ್ಟಣದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ರಾಜ್ಯ ಸರ್ಕಾದ ನಿರ್ಲಕ್ಷ ಮತ್ತು ವಕ್ಫ್ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ರಾಜ್ಯದ ರೈತರಿಗೆ ನೀಡಿರುವ ನೋಟಿಸ್ ವಿರೋಧಿಸಿ ಬಿಜೆಪಿಯಿಂದ ರಾಜ್ಯದಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಬೀದರ್‌ನಲ್ಲಿ ಬಿಜೆಪಿ ಪ್ರತಿಭಟನೆ ಹಿನ್ನಲೆ ಔರಾದ್ ಪಟ್ಟಣದ ಅಮರೇಶ್ವರ ಮಂದಿರದಿ0ದ ತಹಸೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಶಾಸಕ ಪ್ರಭಾ ಚವ್ಹಾಣ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ರಾಜ್ಯ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಹಿಂಪಡೆಯುವ ಜೊತೆಗೆ ಗೆಜೆಟ್‌ನಲ್ಲಿ ಸೇರಿಸಿರುವ ವಕ್ಫ್ ಹೆಸರನ್ನು ಸಂಪೂರ್ಣವಾಗಿ ತೆಗೆಯುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಪ್ರಭಾ ಚವ್ಹಾಣ ಮಾತನಾಡಿ, ಮುಸ್ಲಿಂರು ಕೇಳದಿದ್ದರೂ ವಿನಾಕಾರಣ ಸರ್ಕಾರ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿರುವ ರಾಜ್ಯದ ರೈತರ ಜಮೀನು ಬಲವಂತವಾಗಿ ಕಸಿದು, ವಕ್ಫ್ ಬೋರ್ಡ್ಗೆ ನೀಡಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದೆ ಎಂದು ಆರೋಪಿಸಿದರು. ಔರಾದ್ ತಾಲೂಕಿನ ಎಕಂಬಾ ಹೊಬಳಿ ವ್ಯಾಪ್ತಿಯಲ್ಲಿ ಜ್ಮಲಾಪೂರ್ ಗ್ರಾಮದಲ್ಲಿ ಒಂದೂ ಮುಸ್ಲಿಂ ಕುಟುಂಬ ಇಲ್ಲ, ಆದರೆ ಈ ಗ್ರಾಮದ ನಾಲ್ಕು ಎಕರೆ ಜಮೀನು ವಕ್ಫ್ ಸಂಸ್ಥೆಗೆ ಹೇಗೆ ಸೇರಿಸಿದೆ ಎಂದು ಕಿಡಿಕಾರಿದರು. ಔರಾದ್ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.