‘ತಂದೆ ಭೇಟಿ ಮಾಡು, ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲ್ಲ’; ಪ್ರತಾಪ್ಗೆ ವಿನಯ್ ಕಿವಿಮಾತು
1 min readಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ದಿನ ಕಳೆದಂತೆ ಅಭಿಮಾನಿ ವರ್ಗ ಹೆಚ್ಚುತ್ತಿದೆ. ಅವರ ಚಾಣಾಕ್ಷತೆಯ ಆಟವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಅವರು ಪಾಲಕರನ್ನು ಭೇಟಿ ಮಾಡದೇ ಹಲವು ಸಮಯ ಕಳೆದಿದೆ. ಈ ಬಗ್ಗೆ ದೊಡ್ಮನೆಯಲ್ಲಿ ಅವರು ಮಾತನಾಡಿದ್ದಾರೆ. ವಿನಯ್ ಗೌಡ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹೊರ ಹೋದ ತಕ್ಷಣ ಅವರನ್ನು ಮೀಟ್ ಮಾಡುವಂತೆ ವಿನಯ್ ಅವರು ಪ್ರತಾಪ್ಗೆ ಕಿವಿಮಾತು ಹೇಳಿದ್ದಾರೆ. ಪ್ರತಾಪ್ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಬಗ್ಗೆ ಪ್ರತಾಪ್ಗೂ ಅರಿವಿದೆ. ಈಗ ತಂದೆಯ ವಿಚಾರಕ್ಕೆ ವಿನಯ್ ಅವರು ಪ್ರತಾಪ್ಗೆ ಕಿವಿಮಾತು ಹೇಳಿದ್ದಾರೆ.
‘ತಂದೆಯನ್ನು ಭೇಟಿ ಮಾಡದೇ ಎಷ್ಟು ಸಮಯ ಆಯಿತು’ ಎಂದು ಪ್ರತಾಪ್ಗೆ ಕೇಳಲಾಯಿತು. ಇದಕ್ಕೆ ಅವರು ಮೂರು ವರ್ಷ ಎಂದರು. ಮೂರು ವರ್ಷವೇ ಎಂದು ಕೆಲವರು ಉದ್ಘಾರ ತೆಗೆದರು. ‘ನಾನು ತಂದೆ ತಾಯೀನ ಭೇಟಿ ಮಾಡುತ್ತೇನೆ. ಇದನ್ನು ಬಿಗ್ ಬಾಸ್ಗೆ ಕೇಳಿದ್ದೇನೆ’ ಎಂದರು ಪ್ರತಾಪ್. ಆಗ ವಿನಯ್ ಅವರು ಕಿವಿಮಾತು ಹೇಳಿದರು.
‘ನಾನು ನನ್ನ ತಂದೆಯನ್ನು 16 ವರ್ಷ ನೋಡಿರಲಿಲ್ಲ. ಆಮೇಲೆ ಅವರು ಸತ್ತು ಹೋದರು. ನೋಡಬೇಕು ಎಂದರೂ ಆಗಲಿಲ್ಲ. ಒಮ್ಮೆ ಕಳೆದುಕೊಂಡರೆ ಆ ಬಳಿಕ ಬೇಕು ಎಂದರೂ ಭೇಟಿ ಮಾಡೋಕೆ ಆಗಲ್ಲ. ಅವರು ಬಿಗ್ ಬಾಸ್ನ ಖಂಡಿತವಾಗಿಯೂ ನೋಡುತ್ತಾ ಇರುತ್ತಾರೆ. ನಿನಗೆ ಉತ್ತಮ ಸಿಕ್ಕಿದ್ದು ಅವರಿಗೆ ಖುಷಿ ನೀಡಿರುತ್ತದೆ’ ಎಂದರು ವಿನಯ್. ಇದನ್ನು ಕೇಳಿ ಪ್ರತಾಪ್ ಖುಷಿಪಟ್ಟಿದ್ದಾರೆ.