ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಎಸ್‌ಟಿಪಿ ಪ್ಲಾಂಟ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಭೇಟಿ, ಪರಿಶೀಲನೆ

1 min read

ಎಸ್‌ಟಿಪಿ ಪ್ಲಾಂಟ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಭೇಟಿ, ಪರಿಶೀಲನೆ

ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಎಸ್‌ಟಿಪಿ ಪ್ಲಾಂಟ್

ಕಳೆ ಗಿಡಗಳು ಬೆಳೆದು ನೀರು ಶುದ್ಧೀಕರಣಕ್ಕೆ ಅಡ್ಡಿ

ಕೂಡಲೇ ತೆರುವು ಮಾಡಲು ಗುತ್ತಿಗೆದಾರರಿಗೆ ಸೂಚನೆ

ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರು ಶುದ್ಧೀಕರಿಸುವ ಘಟಕ ಪ್ರಸ್ತುತ ಕಳೆ ಬೇಸಾಯ ಭೂಮಿಯಂತಾಗಿದೆ. ಕಳೆದ ಎರಡು ವರ್ಷಗಳಿಂದ ಈ ಘಟಕದಲ್ಲಿ ಬೆಳೆದ ಕಳೆ ಗಿಡಗಳನ್ನು ಸ್ವಚ್ಛಗೊಳಿಸದ ಕಾರಣ ನೀರಿನ ಶುದ್ಧೀಕರಣಕ್ಕೂ ಹಿನ್ನೆಡೆಯಾಗಿದೆ. ಇದರಿಂದಾಗಿ ಇಂದು ನಗರಸ`ೆ ಅಧ್ಯಕ್ಷ, ಉಪಾಧ್ಯಕ್ಷರು ಈ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಹೌದು, ಚಿಕ್ಕಬಳ್ಳಾಪುರ ನಗರದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಮನೆಗಳಿವೆ. ಈ ಎಲ್ಲ ಮನೆಗಳಿಂದ ಪ್ರತಿನಿತ್ಯ ಹೊರ ಬಿಡುವ ತ್ಯಾಜ್ಯ ನೀರು ಒಳ ಚರಂಡಿ ಮೂಲಕ ಎಸ್‌ಟಿಪಿ ಪ್ಲಾಂಟ್‌ಗೆ ಸೇರುತ್ತದೆ. ಹೀಗೆ ಬಂದ ಈ ತ್ಯಾಜ್ಯ ನೀರು ಶುದ್ಧೀಕರಿಸಿ, ಮರು ಬಳಕೆ ಮಾಡುವ ಉದ್ಧೇಶದಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ರಾಷ್ಟಿಯ ಹೆದ್ದಾರಿ ೪೪ಕ್ಕೆ ಹೊಂದಿಕೊ0ಡಿರುವ ಪ್ರದೇಶದಲ್ಲಿ ಎಸ್‌ಟಿಪಿ ಪ್ಲಾಂಟ್ ಮಾಡಲಾಗಿದೆ. ಇಲ್ಲಿ ಪ್ರತಿನಿತ್ಯ ಬರುವ ತ್ಯಾಜ್ಯ ನೀರು ಶುದ್ಧೀಕರಿಸಿ, ಮರು ಬಳಕೆಗೆ ಅನುಕೂಲ ಮಾಡಲಾಗುತ್ತದೆ.

ಇಲ್ಲಿಗೆ ಬರೋದೇ ತ್ಯಾಜ್ಯ ನೀರು, ಅದರಲ್ಲಿ ಅನೇಕ ರೀತಿಯ ತ್ಯಾಜ್ಯ ಇರೋದರಿಂದ ಆ ನೀರಿನಲ್ಲಿ ಚಿತ್ರ ವಿಚಿತ್ರವಾದ ಕಳೆ ಗಿಡಗಳು ಬೆಳೆಯುವುದು ಸಹಜ. ಹಾಗೆ ಬೆಳೆದ ಗಿಡಗಳು ನೀರು ಸರಾಗವಾಗಿ ಹರಿಯದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತವೆ. ಇಲ್ಲಿಯೂ ಅದೇ ಆಗಿದ್ದು, ಈ ಗಿಡಗಳು ಬೆಳೆದ ಪರಿಣಾಮ ನೀರು ಸರಾಗವಾಗಿ ಹರಿಯದೆ ನೀರಿನ ಶುದ್ಧೀಕರ ತಡವಾಗುತ್ತಿದೆ. ಪ್ರತಿನಿತ್ಯ ಬರುವ ನೀರಿನ ಪ್ರಮಾಣ ಹೆಚ್ಚಿದ್ದು, ಶುದ್ಧೀಕರಣ ಮಾಡುವುದು ತಡವಾದ ಪರಿಣಾಮ ಅಪಾರ ಪ್ರಮಾಣದ ತ್ಯಾಜ್ಯ ನೀರು ಶುದ್ಧೀಕರಿಸಲಾಗದೆ ಹಾಗೆಯೇ ಹರಿಸಬೇಕಾದ ಸ್ಥಿತಿ ಎದುರಾಗಿತ್ತು.

ಇದಕ್ಕೆ ಕಾರಣ ಪ್ರತಿ ವರ್ಷ ತ್ಯಾಜ್ಯ ನೀರಿನಲ್ಲಿ ಬೆಳೆಯುವ ಕಳೆ ಗಿಡಗಳನ್ನು ತೆರುವು ಮಾಡಬೇಕು. ಆದರೆ ಈ ಎಸ್‌ಟಿಪಿ ಪ್ಲಾಂಟ್‌ನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಕಳೆ ಗಿಡಗಳ ತೆರುವು ಕಾರ್ಯ ನಡೆದಿಲ್ಲ. ಇದಕ್ಕೆ ಕಾರಣ ಕಳೆದ ಎರಡು ವರ್ಷಗಳಿಂದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲವಾಗಿದ್ದು, ಅಧಿಕಾರಿಗಳೇ ಎಲ್ಲವೂ ಆಗಿದ್ದರು. ಹಾಗಾಗಿ ಈ ಎಸ್‌ಟಿಪಿ ಪ್ಲಾಂಟ್ ಶುದ್ಧೀಕರಣ ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಪರಿಣಾಮ ಕಳೆ ಅತಿಯಾಗಿ ನೀರು ಹರಿಯಲು ಅಡ್ಡಿಯುಂಟಾಗಿದೆ.

ಈ ಸಂಬ0ಧ ದೂರುಗಳು ಬಂದ ಕಾರಣ ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್, ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಸೇರಿದಂತೆ ಅಮೃತ-೨ ಅಧಿಕಾರಿಗಳ ತಂಡ ಇಂದು ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಎಸ್‌ಟಿಪಿ ಪ್ಲಾಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕಲೆ ಹೆಚ್ಚಾಗಿರುವ ಕಾರಣ ನೀರು ಹರಿಯುವಿಕೆ ತಡವಾಗಿದ್ದು, ಕೂಡಲೇ ಬೆಳೆದಿರುವ ಎಳ್ಲ ಕಳೆ ತೆಗೆಯುವಂತೆ ಸಂಬ0ಧಿಸಿದ ಗುತ್ತಿಗೆದಾರರಿಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ಎಸ್‌ಟಿಪಿ ಪ್ಲಾಂಟ್‌ಗೆ ಉಪಾಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಇತ್ತೀಚಿಗೆ ಹೆಚ್ಚಾಗಿ ಮಳೆಯಾದ ಕಾರಣ ಮತ್ತು ಕಳೆದ ಎರಡು ವರ್ಷಗಳಿಂದ ಕಳೆ ತೆರುವು ಮಾಡದ ಕಾರಣ ಈ ಪ್ರದೇಶದಲ್ಲಿ ಹೆಚ್ಚಾಗಿ ಕಳೆ ಗಿಡಗಳು ಬೆಳೆದಿವೆ. ಇದರಿಂದ ನೀರು ಶುದ್ಧೀಕರಿಸಲು ಸಮಸ್ಯೆ ಎದುರಾಗಿದೆ. ಶೀಘ್ರದಲ್ಲಿಯೇ ಗುತ್ತಿಗೆದಾರನ ಮೂಲಕ ಈ ಕಳೆ ತೆರುವು ಮಾಡಲಾಗುವುದು, ಅಲ್ಲದೆ ಕೇಂದ್ರದ ಅಮೃತ್-೨ ಅಧಿಕಾರಿಗಳೂ ಆಗಮಿಸಿದ್ದು, ಅವರೂ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.

ಇನ್ನು ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ಮಾತನಾಡಿ, ಅಮೃತ-2 ನಿಂದ ಇಬ್ಬರು ಎಂಜಿನಿಯರ್‌ಗಳು ಬಂದಿದ್ದಾರೆ. ಕಳೆ ಗಿಡಗಳನ್ನು ತೆರುವು ಮಾಡಿದ್ದರೂ ಮತ್ತೆ ಆವರಿಸಿಕೊಂಡಿದೆ, ಗುತ್ತಿಗೆದಾರರನ್ನು ಕರೆಯಿಸಿ ತೆರುವು ಮಾಡಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಹೇಳಿದ್ದಾರೆ, ಕಳೆ ಹೆಚ್ಚಾಗಿ ಇರೋದರಿಂದ ಶುದ್ಧೀಕರಣ ತಡವಾಗುತ್ತಿದೆ, ಹಾಗಾಗಿ ಕಳೆ ತೆರುವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಬೆ ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ಉಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *