ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಆಕ್ರೋಶ

ನಾಳೆ ನಡೆಲಿದೆಯೇ ನಗರಸಭೆ ಅಂಗಡಿಗಳ ಹರಾಜು

ಊರದೇವತೆ ಜಾಲಾರಿ ಗಂಗಮಾAಬದೇವಿ ಕರಗಮಹೋತ್ಸವ

ಚಿಕ್ಕಕಾಡಿಗೇನಹಳ್ಳಿಯಲ್ಲಿ ಅದ್ಧೂರಿ ಅಂಬೇಡ್ಕರ್ ಜಯಂತಿ

April 17, 2025

Ctv News Kannada

Chikkaballapura

ವ್ಯವಹಾರ ಜ್ಞಾನ ತಿಳಿಯಲು ಬ್ಯಾಂಕ್ ಗಳಿಗೆ ಭೇಟಿ

1 min read

ವ್ಯವಹಾರ ಜ್ಞಾನ ತಿಳಿಯಲು ಬ್ಯಾಂಕ್ ಗಳಿಗೆ ಭೇಟಿ

ಮಕ್ಕಳಿಗೆ ಗಣಿತ ವ್ಯವಹಾರದ ಬಗ್ಗೆ ಪ್ರಾಯೋಗಿಕ ಅರಿವು

ಬಾಲ್ಯದಲ್ಲಿ ಕಲಿತ ಪ್ರಾಯೋಗಿಕ ಜ್ಞಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಸಾಂಪ್ರದಾಯಿಕ ಶಿಕ್ಷಣದ ಬದಲ ಪ್ರಾಯೋಗಿಕ ಶಿಕ್ಷಣ ಆಯ್ಕೆ ಮಾಡಿಕೊಂಡು ಘಂಟವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯ ೮ನೇ ತರಗತಿ ಮಕ್ಕಳು ನಿತ್ಯ ಜೀವನದಲ್ಲಿ ಗಣಿತದ ವ್ಯವಹಾರ ತಿಳಿಯಲು ವಿವಿಧ ಬ್ಯಾಂಕು ಹಾಗೂ ವಾಣಿಜ್ಯ ವ್ಯಾಪಾರ ಕೇಂದ್ರಗಳಿಗೆ ಇಂದು ಭೇಟಿ ನೀಡಿದ್ದರು.

ಬಾಗೇಪಲ್ಲಿ ಪಟ್ಟಣದ ಎಸ್‌ಬಿ.ಐ ಬ್ಯಾಂಕ್, ಕೆನರಾ ಬ್ಯಾಂಕ್, ಗಿರಿಯಾಸ್ ಶೋರೂಮ್, ನಂದಗೋಕುಲ ಹೋಟೆಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರುಣ್ ಅಡ್ಡ ಸೇರಿದಂತೆ ಇತರೆ ವಾಣಿಜ್ಯ ಕೇಂದ್ರಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಣಿತ ಶಿಕ್ಷಕ ಜಿ.ವಿ. ಚಂದ್ರಶೇಖರ್ ಮಾತನಾಡಿ, ಶಿಕ್ಷಣದಲ್ಲಿ ದಿನನಿತ್ಯದ ಗಣಿತ ವಿಷಯದಲ್ಲಿ ಬರುವ ಪಾಠಗಳನ್ನು ಪ್ರಾಯೋಗಿಕವಾಗಿ ಮಕ್ಕಳು ಗಣಿತದ ಬಗ್ಗೆ ಮಾಹಿತಿ ಮತ್ತು ಜ್ಞಾನ ಪಡೆಯಲು ವಾಣಿಜ್ಯ ಕೇಂದ್ರಗಳಿಗೆ ಇಂದು ಭೇಟಿ ನೀಡಿ ಪ್ರತ್ಯೇಕವಾಗಿ ರಿಯಾಯಿತಿ, ಮಾರುವ ಬೆಲೆ, ಕೊಳ್ಳುವ ಬೆಲೆ, ಲಾಭ, ನಷ್ಟ, ಬ್ಯಾಂಕಿ0ಗ್ ವ್ಯವಹಾರ, ವಿವಿಧ ಸೌಲಭ್ಯಗಳು ಬಗ್ಗೆ ತಿಳಿದುಕೊಂಡರು ಎಂದರು.

ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಇವೆಲ್ಲದರ ಬಗ್ಗೆ ಅರಿವು ಮೂಡಿಸಲಾಯಿತು. ಪ್ರತಿ ವಾಣಿಜ್ಯ ಕೇಂದ್ರದಲ್ಲಿ ವ್ಯವಸ್ಥಾಪಕರು ಹಾಗೂ ಅಂಗಡಿ ಮಾಲಿಕರು ಮಾಹಿತಿ ನೀಡಿ ಮಕ್ಕಳಿಗೆ ವ್ಯವಹಾರ, ವ್ಯಾಪಾರದ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಆಂಗ್ಲಭಾಷೆ ಶಿಕ್ಷಕ ಕೆ ಬಿ ಆಂಜನೇಯ ರೆಡ್ಡಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *