ದೀಪ ಹಚ್ಚಿ ಬುದ್ಧನ ಮೂರ್ತಿ ಬರಮಾಡಿಕೊಂಡ ಗ್ರಾಮಸ್ಥರು
1 min readದೀಪ ಹಚ್ಚಿ ಬುದ್ಧನ ಮೂರ್ತಿ ಬರಮಾಡಿಕೊಂಡ ಗ್ರಾಮಸ್ಥರು
ನಂಜನಗೂಡಿನಲ್ಲಿ ದೀಪ ಯಾನ ಕಾರ್ಯಕ್ರಮ
ನ0ಜನಗೂಡು ತಾಲ್ಲೂಕಿನ ಚುಂಚನಹಳ್ಳಿಯಲ್ಲಿ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿಯಿಂದ ದೀಪ ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊಳ್ಳೇಗಾಲ ಚೇತನವನದ ಬೌದ್ಧ ವಿಹಾರದ ಪೂಜ್ಯ ಶ್ರೀ ಸುಗತಪಾಲ ಬಂತೇಜಿ, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ ನೇತೃತ್ವದಲ್ಲಿ ದೀಪಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಚುಂಚನಹಳ್ಳಿಯ ವಿಮೋಚನಾ ಯುವಕರ ಸಂಘದ ಸಹಯೋಗದಲ್ಲಿ ನಡೆದ ನಮ್ಮ ದೀಪ ಪಯಣ ಕಾರ್ಯಕ್ರಮವನ್ನು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಮ್ಮ ದೀಪ ಪಯಣಕ್ಕೆ ಕೊಳ್ಳೇಗಾಲದ ಚೇತನ ವನದ ಬೌದ್ಧ ವಿಹಾರದ ಸುಗತಪಾಲ ಬಂತೇಜಿ ಚಾಲನೆ ನೀಡಿದರು.
ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗೆ ಮಹಿಳೆಯರು, ಮಕ್ಕಳು ಹಾಗೂ ಯುವಕರು ಪುಷ್ಪಾರ್ಚನೆ ಮಾಡಿ, ದೀಪ ಹಚ್ಚಿ ಬುದ್ಧನ ಸ್ಮರಿಸಿದರು.
ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸುಮಾರು 10 ಸಾವಿರ ಮನೆಗಳಲ್ಲಿ ದೀಪ ಹಚ್ಚುವ ಕಾರ್ಯಕ್ರಮ ರೂಪಿಸಲಾಗಿದೆ. ೧೦೦ ಮೈಲಿಗ ¼ ಪಯಣದಲ್ಲಿ ಪ್ರತಿ ಗ್ರಾಮಗಳ ಮನೆ ಮತ್ತು ಮನಗಳಲ್ಲಿ ದೀಪ ಯಾನ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಅಕ್ಟೋಬರ್ 14 ರಂದು ಬೌದ್ಧ ಧರ್ಮವನ್ನು ಸ್ವೀಕರಿಸಿದ ದಿನವಾಗಿದೆ ಎಂದರು.
ಇ0ದಿಗೆ 68 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ನಾವು ದೀಪ ಹಚ್ಚುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಪ್ರತಿ ಮನೆಗಳಲ್ಲಿ ಅಂಬೇಡ್ಕರ್ ಅವರನ್ನು ನೆನೆದು ಅ.೧೪ರ ತನಕ ದೀಪ ಹಚ್ಚಿ ಭಗವಾನ್ ಗೌತಮ ಬುದ್ಧರಿಗೆ ಪ್ರಾರ್ಥನೆ ಸಲ್ಲಿಸಬೇಕು. ಯುವಕರು ಮತ್ತು ಮಹಿಳೆಯರು ಬುದ್ಧ ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.