ನಂಜನಗೂಡಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮುಷ್ಕರ
1 min readನಂಜನಗೂಡಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಮುಷ್ಕರ
ಗ್ರಾಮಲೆಕ್ಕಾಧಿಕಾರಿಗಳಿಗೆ ರೈತ ಸಂಘದ ಬೆಂಬಲ
ಗ್ರಾಮ ಆಡಳಿತ ಅಧಿಕಾರಿಗೆ ಮೂಲ ಸೌಲಭ್ಯ ಕಲ್ಪಿಸಲು ಅಗ್ರಹ
ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಮೂಲ ಸೌಕರ್ಯಕ್ಕಾಗಿ ಅನಿರ್ದಿಷ್ಟವಾದಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ, ನಂಜನಗೂಡು ತಾಲೂಕಿನ ಗ್ರಾಮ ಲೆಕ್ಕಿಗರ ಮುಷ್ಕರಕ್ಕೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ನೇತೃತ್ವದಲ್ಲಿ ನಂಜನಗೂಡಿನ ತಾಲೂಕು ಕಚೇರಿ ಆವರಣದಲ್ಲಿ ಗ್ರಾಮ ಲೆಕ್ಕಿಗರ ಜೊತೆಗೂಡಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ವೇಳೆ ಇಮ್ಮಾವು ರಘು ಮಾತನಾಡಿ, ಇತ್ತೀಚಿನ ಕೆಲ ತಿಂಗಳುಗಳಿAದ ಕಂದಾಯ ಇಲಾಖೆಯಲ್ಲಿ ಬದಲಾವಣೆಗಳನ್ನು ತರಲು ಕಠಿಣವಾದ ಮೊಬೈಲ್ ಆಪ್‌ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಆದೇಶ ಮಾಡಿದ್ದಾರೆ. ಬರೋಬರಿ ೨೧ ಆ್ಯಪ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವುದರಿಂದ ಸುಲಲಿತವಾಗಿ ಕೆಲಸ ಕಾರ್ಯಗಳು ನಡೆಯುವುದಿಲ್ಲ.
ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳು ಬಿಸಿಲು ಮಳೆ ಲೆಕ್ಕಿಸದೆ ಗ್ರಾಮಗಳಿಗೆ ತೆರಳಿ ಕಂದಾಯ ಇಲಾಖೆಗೆ ಸಂಬ0ಧಿಸಿದ ಹಾಗೂ ವೃದ್ಧರು ಅಂಗವಿಕಲರ ಪಿಂಚಣಿ, ಜನನ ಮರಣಗಳ ದಾಖಲಾತಿ ಗಳನ್ನು ಶ್ರಮದಿಂದ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ರೈತರ ಮತ್ತು ಸಾರ್ವಜನಿಕರ ಕೆಲಸಗಳನ್ನೇ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಅವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಮುಖ್ಯಮಂತ್ರಿಗಳು ಗ್ರಾಮದ ಆಡಳಿತ ಅಧಿಕಾರಿಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ರೈತ ಸಂಘಟನೆಗಳು ಇವರ ಬೆಂಬಲಕ್ಕೆ ನಿಂತು ಅವರ ಬೇಡಿಕೆ ಈಡೇರುವವರೆಗೂ ರಾಜ್ಯದ್ಯಂತ ರೈತ ಸಂಘಟನೆ ಬೆಂಬಲವನ್ನ ವ್ಯಕ್ತಪಡಿಸಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗೆ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಯಾವುದೇ ವೃತಗಳಲ್ಲಿ ಕಚೇರಿ ಇರುವುದಿಲ್ಲ ಗ್ರಾಮದ ದೇವಾಲಯಗಳು ಅಂಗನವಾಡಿ ಕೇಂದ್ರಗಳು ಪಾಳು ಬಿದ್ದ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುವುದು ದುಸ್ಥಿತಿ ಎದುರಾಗಿದೆ. ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಪ್ರತಿಭಟನ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಗೌತಮಿ ಮಾತನಾಡಿದರು. ಈ ಸಂರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಮೂಲಕ ತಾಲೂಕು ಕಚೇರಿ ಶಿರಸ್ತೇದಾರ್ ರಾಜುರವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್, ಗ್ರಾಮ ಆಡಳಿತ ನೌಕರ ಸಂಘದ ಅಧ್ಯಕ್ಷ ನಿಂಗಯ್ಯ, ಉಪಾಧ್ಯಕ್ಷ ಗಿರಿಜಮ್ಮ, ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಎಂ ಎಸ್ ಸಂತೋಷ್ ಇದ್ದರು.