ಸಬ್ಬೇನಹಳ್ಳಿಯಲ್ಲಿ ವಿಜೃಂಬಣೆಯ ಕನ್ನಡ ರಾಜ್ಯೋತ್ಸವ.
1 min read
ಚಿಕ್ಕಬಳ್ಳಾಪುರ ತಾಲ್ಲೂಕು ಸಬ್ಬೇನಹಳ್ಳಿ ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದಿಂದ ಪ್ರತಿ ವರ್ಷದಂತೆ ಈ ಭಾರಿಯೂ ನವೆಂಬರ್ ಒಂದರಂದು ವಿವಿಧ ಕಾರ್ಯಕ್ರಮಗಳ ವಿಜೃಂಬಣೆಯ ಕನ್ನಡ ರಾಜ್ಯೋತ್ಸವ ಆಚರಿಸಲಾಗುತಿದೆ ಎಂದು ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಶಿವಶಂಕರ್ ಚಿಕ್ಕಬಳ್ಳಾಪುರ ತಾಲ್ಲೂಕು ಸಬ್ಬೇನಹಳ್ಳಿ ಕಸ್ತೂರಿ ಕನ್ನಡ ಕಲಾಭಿಮಾನಿಗಳ ಬಳಗದಿಂದ ಕಳೆದ ಹದಿನೈದು ವರ್ಷಗಳಿಂದ ನವೆಂಬರ್ ಒಂದರಂದು ವಿಜೃಂಬಣೆಯ ಕನ್ನಡ ರಾಜ್ಯೋತ್ಸವ ಆಚರಿಸಲಾಗುತಿದ್ದು ಈ ಭಾರಿ 6 ಜನ ಮಾಜಿ ಸೈನಿಕರಿಗೆ ಗೌರವ ಸೂಚಿಸುವ ಮೂಲಕ ನಾಡಹಬ್ಬ ಆಚರಿಸಲಾಗುವುದು.
ಬೆಳಿಗ್ಗೆ ಯೋದರಿಂದ ದ್ವಜಾರೋಹಣ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು