ಮಾಡಿ ವಂಚನೆಗೊಳಗಾದ ಸಂತ್ರಸ್ಥರಿಗೆ ಅರ್ಜಿ ಸಲ್ಲಿಸಲು ಅವಕಾಶ
1 min readಮಾಡಿ ವಂಚನೆಗೊಳಗಾದ ಸಂತ್ರಸ್ಥರಿಗೆ ಅರ್ಜಿ ಸಲ್ಲಿಸಲು ಅವಕಾಶ
ಹಣಕಾಸು ಸಂಸ್ಥೆಗಳಿoದ ವಂಚನೆಗೊಳಗಾದವರಿಗೆ ಅವಕಾಶ
ವಿವಿದ ಹಣಕಾಸು ಸಂಸ್ಥೆಗಳಲ್ಲಿ ರೈತರು ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ಥರಿಗೆ ಬಡ್ಸ್ ಕಾಯ್ದೆಯಡಿ ವಂಚಿಸಿದ ಮೊತ್ತ ಪಾವತಿಗಾಗಿ ಹಕ್ಕು ಅರ್ಜಿ ಸಲ್ಲಿಸಲು ಜಿಲ್ಲೆಯ ತಾಲ್ಲೂಕು ಕಚೇರಿಯಲ್ಲಿ ಅವಕಾಶ ನೀಡಲಾಗಿದೆ ಎಂದು ವಂಚನೆ ಸಂತ್ರಸ್ಥ ಠೇವಣಿದಾರರ ಕುಟುಂಬ ಜಿಲ್ಲಾಧ್ಯಕ್ಷ ಜಿ ಸಿ ನಾರಾಯಣಸ್ವಾಮಿ ಹೇಳಿದರು.
ಮಾಲೂರು ಪಟ್ಟಣದ ಕರುನಾಡ ರೈತ ಜನಾಭಿವೃದ್ದಿ ಸಂಘದ ಕಛೇರಿಯಲ್ಲಿ ವಂಚನೆ ಸಂತ್ರಸ್ಥ ಠೇವಣಿದಾರರ ಕುಟುಂಬದಿoದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಕೋಲಾರ ಜಿಲ್ಲೆ ಮತ್ತು ಎಲ್ಲ ತಾಲೂಕಿನಾದ್ಯಂತ ವಿವಿದ
ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ಥರಿಗೆ ಬಡ್ಸ್ ಕಾಯ್ದೆಯಡಿ 7 ಸಾವಿರ ನಿಷೇಧ
ಯೋಜನೆಗಳ ಅನಿಯಂತ್ರಿತ ಠೇವಣಿ ಹೂಡಿಕೆದಾರರ ಹಿತಾಸಕ್ತಿ ಬಯಸಿ, ವಂಚಿಸಿದ ಮೊತ್ತದ ಪಾವತಿಗಾಗಿ ಹಕ್ಕು ಅರ್ಜಿ ಸ್ವೀಕರಿಸಲು
ಈ ಹಿಂದೆ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೌಂಟರ್ ಸ್ಥಾಪಿಸಿ, ಸುಮಾರು ಏಳು ಅರ್ಜಿಗಳನ್ನು ಪಡೆಯಲಾಗಿದೆ ಎಂದರು.
ಅಲ್ಲದೆ ಜಿಲ್ಲೆಯಲ್ಲಿ ಅನೇಕ ಸಂತ್ರಸ್ಥರು ಇನ್ನೂ ಅರ್ಜಿ ಸಲ್ಲಿಸಿಲ್ಲ. ಸಾರ್ವಜನಿಕ ಹಿತದೃಷ್ಠಿಯಿಂದ ತಾಲೂಕು ವಾರು ಅರ್ಜಿ ಸ್ವೀಕಾರ
ಕೌಂಟಗರ್‌ಳನ್ನು ಸ್ಥಾಪಿಸಲು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಸೂಚಿಸಲಾಗಿದೆ. ತಾಲ್ಲೂಕಿನ ರೈತರು ವಿವಿಧ ಹಣಕಾಸು ಸಂಸ್ಥೆಗಳಿoದ ವಂಚಿತವಾಗಿದ್ರೆ ತಾಲ್ಲೂಕು ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಲು ಮನವಿ ಮಾಡಿದರು.