ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ವೈಕುಂಠ ವೈಭವ
1 min readವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ವೈಕುಂಠ ವೈಭವ
ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತಸಾಗರ
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶ್ರೀ ಮಹದೇವ ತಾತ ಬಡಾವಣೆಯ ಶ್ರೀ ಅಲ ಮೇಲು ಮಂಗಮ್ಮ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಸ್ವಾಮಿ ವೈಕುಂಠ ವೈಭವ ಸಂಭ್ರಮದಿ0ದ ನಡೆಯಿತು.
ನಿನ್ನೆಯಿಂದಲೇ ದೇವಾಲಯದಲ್ಲಿ ಹೋಮ ಹವನಗಳು ನಡೆದು, ಇಂದು ಬೆಳಿಗ್ಗೆಯಿಂದಲೇ ಶ್ರೀ ಅಲಮೇಲು ಮಂಗಮ್ಮ ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿ ಅವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. ದೇವಾಲಯಕ್ಕೆ ಹುಲ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದು ತಮ್ಮ ಭಕ್ತಿ ಭಾವ ಮೆರೆದರು. ಇದೇ ಸಂದರ್ಭ ದೇವಾಲಯದಿಂದ ನಿರ್ಮಿಸಿದ್ದ ವೈಕುಂಠ ದ್ವಾರ ಪ್ರವೇಶಿಸಿ ವೈಕುಂಠ ಏಕಾದಶಿಯನ್ನು ಏಕಾಗ್ರತೆಯಿಂದ ಆಚರಿಸಿದ ಭಕ್ತರು ಶ್ರೀ ವೆಂಕಟೇಶ್ವರನಿಗೆ ತಮ್ಮ ಭಕ್ತಿ ನಮನ ಸಲ್ಲಿಸಿದರು.
ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯದ ಒಳ ಹಾಗು ಹೊರ ಆವರಣಗಳನ್ನು ಬಣ್ಣ ಬಣ್ಣದ ಹೂ ಹಾಗು ವಿದ್ಯುತ್ ದೀಪಗಳಿಂದ ಭವ್ಯವಾಗಿ ಅಲಂಕಾರಿಕ ಲಾಗಿತ್ತು. ಬಂದ ಎಲ್ಲಾ ಭಕ್ತರಿಗೆ ದೇವಾಲಯದ ವತಿಯಿಂದ ಲಾಡು ಸೇರಿದಂತೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯದ ಸಂಸ್ಥಾಪಕ ಸದಸ್ಯ ಶ್ರೀನಿವಾಸರೆಡ್ಡಿ ಮಾತನಾಡಿ, ಕಾರ್ಯಕ್ರಮದ ಬಗ್ಗೆ ವಿವರಿಸಿದರು. ದೇವಾಲಯದ ಸಂಸ್ಥಾಪಕ ವಿಜಯಲಕ್ಷಿ, ನಾರಾಯಣರೆಡ್ಡಿ, ಡಾ.ಕುಮಾರ್, ಸೇರಿದಂತೆ ಕುಟುಂಬ ವರ್ಗದವರು ಹಾಗೂ ಪುರ ಪ್ರಮುಖರು ಉಪಸ್ಥಿತರಿದ್ದರು