ನವೀನ್ ಕಿರಣ್ ೪೬ನೇ ಹುಟ್ಟುಹಬ್ಬಕ್ಕೆ ವಿವಿಧ ಕಾರ್ಯಕ್ರಮಗಳು
1 min readನವೀನ್ ಕಿರಣ್ ಹುಟ್ಟುಹಬ್ಬಕ್ಕೆ ಹರಿದು ಬಂದ ಅಭಿಮಾನಿಗಳು
ನವೀನ್ ಕಿರಣ್ ೪೬ನೇ ಹುಟ್ಟುಹಬ್ಬಕ್ಕೆ ವಿವಿಧ ಕಾರ್ಯಕ್ರಮಗಳು
ಸಮಾಜ ಸೇವೆಯ ಮೂಲಕವೇ ನಾಕನಿಗೆ ಶುಭಾಶಯ
ಅಭಿಮಾನಿಗಳ ಪ್ರೀತಿಗೆ ನವೀನ್ ಕಿರಣ್ ಮೆಚ್ಚುಗೆ
ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿ ಮತ್ತು ಪಂಚಾಗಿರಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ೪೬ನೇ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಅನ್ನದಾನಕ್ಕಿಂತ ಅಕ್ಷರ ದಾನವೇ ಮುಖ್ಯ ಎಂದು ಹೇಳಲಾಗಿದೆ. ಅಂತಹ ಅಕ್ಷರ ದಾಸೋಹವನ್ನೇ ನಿರಂತರವಾಗಿ ಮಾಡುತ್ತಿರುವ ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬಕ್ಕೆ ಒಂದು ವಾರಕ್ಕೂ ಮೊದಲೇ ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ನೆಚ್ಚಿನ ನಾಯಕರಿಗೆ ಗೌರವ ಸಲ್ಲಿಸಿದ್ದು, ನವೀನ್ ಕಿರಣ್ ಸಾಮಾಜಿಕ ಸೇವಾ ಸಪ್ತಾಹವನ್ನು ಆಯೋಜಿಸಿ, ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿ ವಿತರಣೆ, ಮಕ್ಕಳಿಗೆ ತಟ್ಟೆ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಅಭಿಮಾನಿಗಳ ಸಪ್ತಾಹ ಕಾರ್ಯಕ್ರಮ ಶನಿವಾರಕ್ಕೆ ಮುಕ್ತಾಯವಾಗಿದ್ದು, ಇಂದು ಅವರ ಹುಟ್ಟುಹಬ್ಬವನ್ನು ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಸಿವಿವಿ ಕ್ಯಾಂಪಸ್‌ನಲ್ಲಿ ಅವರ ಅಭಿಮಾನಿಗಳಿಂದಲೇ ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಗಳು ಹಮ್ಮಿಕೊಂಡಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಅಲ್ಲದೆ ಅಭಿಮಾನಿಗಳು ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮಗಳಿಗೂ ನವೀನ್ ಕಿರಣ್ ಅವರು ಭೇಟಿ ನೀಡಿ, ಅಭಿಮಾನಿಗಳ ಅತಿಥ್ಯವನ್ನು ಸ್ವೀಕರಿಸಿದರು. ನಂತರ ಮಾತನಾಡಿದ ನವೀನ್ ಕಿರಣ್, ತಮ್ಮ ಹುಟ್ಟು ಹಬ್ಬ ಆಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕೈಗೊಂಡಿರುವ ಈ ಸಾಮಾಜಿಕ ಕಾರ್ಯಗಳೇ ಶ್ರೀರಕ್ಷೆ , ಎಷ್ಟೇ ಹಣ, ಆಸ್ತಿ ಸಂಪಾದಿಸಿದರೂ ಅಭಿಮಾನಿಗಳ ಹೃದಯದಲ್ಲಿ ನಾನಿದ್ದಾನೆಂದರೆ ಅವೆಲ್ಲವೂ ನಾನು ಮಾಡಿರುವ ಪುಣ್ಯದ ಫಲ ಎಂದರು.
ಹುಟ್ಟುಹಬ್ಬಕ್ಕೆ ಒಂದು ವಾರದ ಮೊದಲನಿಂದಲೇ ವಿವಿಧ ಸೇವೆಗಳನ್ನು ಸಲ್ಲಿಸಿರುವ ಅಭಿಮಾನಿ ವೃಂದ ರೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಬ್ರೆಡ್ಡು ಬಿಸ್ಕೆಟ್ ವಿತರಣೆ, ಆಶಾ ಕಾರ್ಯಕರ್ತರಿಗೆ ಸೀರೆ ವಿತರಣೆ, ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ, ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡಿ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಅಲ್ಲದೆ ಆಟೋ ಚಾಲಕರಿಗೆ ಸಮವಸ್ತç , ಶಾಲಾ ಮಕ್ಕಳಿಗೆ ಸಮವಸ್ತç ವಿತರಣೆ ಮಾಡಿ ತೋರಿಸಿದ ಅಭಿಮಾನಗಳ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ. ಹತ್ತು ವರ್ಷಗಳ ಹಿಂದೆ ಕೇವಲ ಮನೆಗೆ ಸೀಮಿತವಾಗಿದ್ದ ತಾವು ಇಂದು ಜನರ ಹೃದಯದಲ್ಲಿ ಸ್ಥಾನ ಸಂಪಾದಿಸಿ, ಪ್ರೀತಿ ಹರಿಸುತ್ತಿರುವುದು ಜನ್ಮ ಸಾರ್ಥಕವಾಗಲಿದೆ ಎಂದರು.
ನವೀನ್ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂಸದ ಡಾ.ಕೆ ಸುಧಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಕೊಚಿಮುಲ್ ಮಾಜಿ ಅಧ್ಯಕ್ಷ ಕೆವಿ ನಾಗರಾಜ್, ನಗರಭ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷನಾಗರಾಜ್ ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿ, ಹುಟ್ಟುಹಬ್ಬದ ಶುಭಶಯಗಳನ್ನು ಕೋರಿದರು.
ಸುಮಾರು 60 ಅಡಿ ಎತ್ತರದ ನವೀನ್ ಕಿರಣ್ ಕಟೌಟ್ ನಿರ್ಮಿಸಿ, ಅದರ ಮುಂಭಗಕ್ಕೆ ನವೀನ್ ಕಿರಣ್ ಅªರÀನ್ನ ಕರಿಸಿ ಆಟೋಗಳ ಮೂಲಕ ಮೆರವಣಿಗೆ ಮಾಡಿ, ಆಟೋ ಚಾಲಕರಿಗೆ ಸಮವಸ್ತç ವಿತರಿಸಿ ಮಾತನಾಡಿದ ನವೀನ್ ಕಿರಣ್ ಅಭಿಮಾನಿ ಅನು ಆನಂದ್, ನವೀನ್ ಕಿರಣ್ ಅವರು ಸಾಕಷ್ಟು ಸಮಾಜ ಸೇವೆ ಮಾಡಿ ಯುವ ಜನರ ಹೃದಯದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಕಡಿಮೆ ಮಾಡಿ ಶಿಕ್ಷಣಧತರಾಗಿದ್ದಾರೆ. ರಕ್ತ ದಾನ ಶಿಬರದ ಮೂಲಕ ಸಾವಿರಾರು ಜನರ ಜೀವ ಉಳಿಸಿದ್ದಾರೆ, ರಾಜಕೀಯವಾಗಿ ಲಾಭ ಪಡೆಯದೆ ಇಡೀ ಸೇವೆಯನ್ನ ಜನೆರಗಾಗಿ ಮುಡಿಪಾಗಿಟ್ಟ ನವೀನ್ ಕಿರಣ ಅವರನ್ನ ಯುವಕರು ಹೃದಯದಲ್ಲಿ ಆರಾಧಿಸುತ್ತಾರೆ ಎಂದರು.
ಒಟ್ಟಿನಲ್ಲಿ ನಾಯಕನೆಂದರೆ ಅಧಿಕಾರದಲ್ಲಿದ್ದು, ಬೆಂಬಲಿಗರಿಗೆ ಅನುಕೂಲ ಮಾಡಿಕೊಟ್ಟರೆ ಮಾತ್ರ ಅಭಿಮಾನ ತೋರುವ ಈ ಕಾಲದಲ್ಲಿ ನವೀನ್ ಕಿರಣ್ ಅವರನ್ನು ಆರಾಧಿಸುವ ವೃಂದವೇ ಇರುವುದು ಅವರ ಸೇವೆಗೆ ಹಿಡಿದ ನಿದರ್ಶನವಾಗಿದೆ. ಅವರಿಗೆ ಇಂದಿಗೆ ೪೬ ವಸಂತಗಳು ಪೂರೈಸಿದ್ದು, ನೂರು ವರ್ಷಗಳ ಕಾಲ ಆಯುಷ್ಯ, ಆರೋಗ್ಯ ಮತ್ತು ಸೇವೆ ಮಾಡುವ ಶಕ್ತಿಯನ್ನು ದೇವರು ಕರುಣಿಸಲಿದೆ ಎಂದು ಸಿಟಿವಿ ನ್ಯೂಸ್ ಹಾರೈಸುತ್ತದೆ.