ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ವರನಟಿ ಡಾ.ಲೀಲಾವತಿ ದೇಗುಲ ಲೋಕಾರ್ಪಣೆ

1 min read

ವರನಟಿ ಡಾ.ಲೀಲಾವತಿ ದೇಗುಲ ಲೋಕಾರ್ಪಣೆ

ಸೋಲದೇವನಹಳ್ಳಿಯ ತೋಟದಲ್ಲಿ ನಿರ್ಮಿಸಿರುವ ದೇಗುಲ

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರಿಂದ ಚಾಲನೆ

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ ಎಂದು ವಿನೋದ್ ರಾಜ್ ಹೆಸರಿಟ್ಟಿದ್ದಾರೆ. ಇಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಸ್ಮಾರಕಕ್ಕೆ ಪೂಜೆ ನೆರವೇರಿಸಲಾಯಿತು.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದಲ್ಲಿ ಹಿರಿಯ ನಟಿ ದಿವಂಗತ ಡಾ.ಎಂ.ಲೀಲಾವತಿದೇಗುಲ ಶೀರ್ಷಿಕೆ ಯಡಿ ನಿರ್ಮಾಣ ಮಾಡಿದ್ದ ಲೀಲಾವತಿ ಸ್ಮಾರಕವನ್ನು ಉದ್ಘಾಟಿಸಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಬಹುಭಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ ೬೦ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ ಎಂದರು. ಈ ಸಂದರ್ಭದಲ್ಲಿ ಚಲನಚಿತ್ರರಂಗದ ಹಿರಿಯ ಕಲಾವಿದರು ಮತ್ತು ಕಿರಿಯ ನಟರು ಹಾಜರಿದ್ದರು.

 

 

 

 

About The Author

Leave a Reply

Your email address will not be published. Required fields are marked *