ವಿದ್ಯುತ್ ಕಂಬಗಳಿಗೆ ಕೇಬಲ್ ಎಳೆಯುವ ಸಮಸ್ಯೆ ಪರಿಹಾರಕ್ಕೆ ಒತ್ತಾಯ
1 min readಕೇಬಲ್ ಆಪರೇಟರ್‌ಗಳ ಸಮಸ್ಯೆ ಪರಿಹಾರಕ್ಕೆ ಮನವಿ
ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ
ವಿದ್ಯುತ್ ಕಂಬಗಳಿಗೆ ಕೇಬಲ್ ಎಳೆಯುವ ಸಮಸ್ಯೆ ಪರಿಹಾರಕ್ಕೆ ಒತ್ತಾಯ
ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಕೇಬಲ್ ನೆಟ್‌ವರ್ಕ್ ಎಂಬುದು ಜನರಿಗೆ ಮನರಂಜನೆಯ ಮೂಲವಾಗಿದೆ. ಡಿಟಿಎಚ್ ಮತ್ತು ಇಂಟರ್ನೆಟ್ ಬರುವವರೆಗೂ ಕೇಬಲ್ ಎಂಬುದು ಜನರ ಏಕೈಕ ಮನರಂಜನಾ ಸಾಧನವಾಗಿತ್ತು. ಇಂಟರ್ನೆಟ್ ಮತ್ತು ಡಿಟಿಎಚ್‌ಗಳು ಬಂದರೂ ಇಂದಿಗೂ ಕೇಬಲ್ ತನ್ನ ಚಾರ್ಮ್ ಉಳಿಸಿಕೊಂಡಿರುವುದು ಮಾತ್ರವಲ್ಲ, ಲಕ್ಷಾಂತರ ಮಂದಿಗೆ ಉದ್ಯೋಗವಕಾಶ ಕಲ್ಪಿಸಿದೆ ಎಂಬುದು ಗಮನಾರ್ಹ ವಿಚಾರವಾಗಿದ್ದು, ಇಂಧನ ಇಲಾಖೆಯಿಂದ ಕೇಬಲ್ ಆಪರೇಟರ್‌ಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಇಂದು ಇಂಧನ ಸಚಿವರಿಗೆ ಮನವಿ ಮಾಡಲಾಯಿತು.
ಹೌದು, ದೇಶದಲ್ಲಿ ತಂತ್ರಜ್ಞಾನ ಕ್ರಾಂತಿಯಾಗುವುದಕ್ಕೂ ಮುನ್ನ ಜನರ ಮನರಂಜನೆಗಾಗಿ ಇದ್ದ ಏಕೈಕ ಸಾಧನ ಕೇಬಲ್. ಅದೇ ಕೇಬಲ್ ಮೂಲಕ ವಿವಿಧ ವಾಹಿನಗಳನ್ನು ಮನೆ ಮನೆಗೆ ತಲುಪಿಸಿ ಜನರಿಗೆ ಮನರಂಜನೆ ನೀಡುವ ಜೊತೆಗೆ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ನೀಡುವ ಆಸರೆಯಾಗಿದ್ದು ಇದೇ ಕೇಬಲ್. ಪ್ರಸ್ತುತ ಇಂಟರ್ನೆಟ್ ಯುಗದಲ್ಲಿಯೂ ಕೇಬಲ್ ತನ್ನ ಚಾರ್ಮ್ ಉಳಿಸಿಕೊಂಡಿದೆ. ಮಾತ್ರವಲ್ಲ, ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ನೀಡಿದ ಖ್ಯಾತಿಗೂ ಪಾತ್ರವಾಗಿದೆ. ಆದರೆ ಪ್ರಸ್ತುತ ಬೆಸ್ಕಾಂನಿ0ದ ಕೇಬಲ್ ಆಪರೇಟರ್‌ಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಕೇಬಲ್ ಆಪರೇಟರ್‌ಗಳು ಸಚಿವರಿಗೆ ಮೊರೆ ಇಟ್ಟರು.
ಇಂತಹ ಕೇಬಲ್ ಇದೀಗ ಬೆಸ್ಕಾಂಗಳೊ0ದಿಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಪ್ರತಿಯೊಂದು ಕಡೆ ವಿದ್ಯುತ್ ಸಂಪರ್ಕ ನೀಡಲು ನೆಟ್ಟಿರುವ ವಿದ್ಯುತ್ ಕಂಬಗಳ ಮೂಲಕವೇ ಕೇಬಲ್ ಎಳೆಯುವುದು ಗ್ರಾಮೀಣ ಪ್ರದೇಶದಲ್ಲಿ ಸಹಜಪ್ರಕ್ರಿಯೆಯಾಗಿದೆ. ಆದರೆ ಹಾಗೆ ವಿದ್ಯುತ್ ಕಂಬಗಳಿಗೆ ಕೇಬಲ್ ಕಟ್ಟಬಾರದು ಎಂಬುದು ಕಾನೂನು. ಇದರಿಂದ ವಿದ್ಯುತ್ ಕಂಬಗಳಿಗೆ ಪರ್ಯಾಯವಾಗಿ ಕೇಬಲ್ ಎಳೆಯಲು ಸಾಧ್ಯವಾಗದ ಸ್ಥಿತಿ ಕೇಬಲ್ ಆಪರೇಟರ್‌ಗಳಿಗೆ ಎದುರಾಗಿದ್ದು, ಪರಿಹಾರ ಒದಗಿಸಲು ಇದೀಗ ಇಂಧನ ಸಚಿವರಿಗೆ ಕೇಬಲ್ ಆಪರೇಟರ್‌ಗಳು ಮೊರೆ ಹೋದರು.
ಕೇಬಲ್ ನಂಬಿಯೇ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಮೇಲಿರುವ ಕೇಬಲ್ ತೆರವು ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆ0ದು ಕೇಬಲ್ ಆಪರೇಟರ್‌ಗಳು ಮನವಿ ಮಾಡಿದರು. ಇದರಿಂದ ಸಾವಿರಾರು ಮಂದಿ ಕೇಬಲ್ ಆಪರೇಟರ್‌ಗಳು ಮತ್ತು ಲಕ್ಷಾಂತರ ಮಂದಿ ಸಿಬ್ಬಂದಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಇದಕ್ಕೆ ಪರಿಹಾರ ನೀಡಲು ಸಚಿವರಲ್ಲಿ ಕೋರಲಾಯಿತು.
ಕೇಬಲ್ ಆಪರೇಟರ್‌ಗಳ ಮನವಿ ಆಲಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಈ ಸಂಬ0ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿ, ರಾಜ್ಯದ ಕೇಬಲ್ ಸಂಘಟನೆಯೊ0ದಿಗೆ ಸಭೆ ಕರೆಯಲು ದಿನ ನಿಗಧಿ ಮಾಡುವ ಭರವಸೆ ನೀಡಿದ್ದಾರೆ. ಈ ವೇಳೆ ಕೇಬಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಆನಂದಕುಮಾರ್, ಖಜಾಂಚಿ ನರಸಿಂಹಮೂರ್ತಿ, ಕೈವಾರ ರಾಮಕೃಷ್ಣ, ಕೆ. ಕುಮಾರಸ್ವಾಮಿ, ಅಫೀಜುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.