ಕ್ರೀಡೆಗಳ ಮೂಲಕ ಪರಿಪೂರ್ಣ ವ್ಯಕ್ತಿತ್ವ ಅನಾವರಣ
1 min readಕ್ರೀಡೆಗಳ ಮೂಲಕ ಪರಿಪೂರ್ಣ ವ್ಯಕ್ತಿತ್ವ ಅನಾವರಣ
ಕಬಡ್ಡಿ ಪಂದ್ಯಾವಳಿ ಉದ್ಘಾಟಡಿಸಿದ ಡಾ. ಪ್ರೀತಿ ಸುಧಾಕರ್
ಕ್ರೀಡಾ ಅಭ್ಯಾಸಗಳು ಶಾರೀರಿಕ ಸದೃಢತೆ ರೂಪಿಸಲಿದೆ, ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಲಿದೆ. ವಿದ್ಯಾರ್ಥಿ ಹಂತದಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕೆಂದು ಪೆರೇಸಂದ್ರ ಶಾಂತಾ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪ್ರೀತಿ ಸುಧಾಕರ್ ಕರೆ ನೀಡಿದರು.
ಕ್ರೀಡಾ ಅಭ್ಯಾಸಗಳು ಶಾರೀರಿಕ ಸದೃಢತೆ ರೂಪಿಸಲಿದೆ, ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಲಿದೆ. ವಿದ್ಯಾರ್ಥಿ ಹಂತದಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಬೇಕೆಂದು ಶಾಂತಾ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪ್ರೀತಿ ಸುಧಾಕರ್ ಕರೆ ನೀಡಿದರು. ರಾಜ್ಯ ಐಸಿಎಸ್‌ಇ ಶಾಲೆಗಳ ಒಕ್ಕೂಟದ ಪ್ರಾದೇಶಿಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಶಾಂತಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಶಾಂತಾ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪ್ರೀತಿ ಸುಧಾಕರ್ ಮಾತನಾಡಿದರು.
ವ್ಯಕ್ತಿಯಲ್ಲಿ ಸುಪ್ತವಾಗಿರುವ ಶಕ್ತಿ, ಸಾಮರ್ಥ್ಯ, ಕೌಶಲ, ಗುಣ, ಮೌಲ್ಯ ಹಾಗೂ ಕನಸುಗಳನ್ನು ಹೊರಹೊಮ್ಮಿಸಲು ಶಾಲಾ ಹಂತದ ಕ್ರೀಡಾ ಚಟುವಟಿಕೆಗಳು ಅಗತ್ಯ ನೆಲೆ ಹಾಗೂ ಪ್ರೇರಣೆ ಒದಗಿಸುತ್ತವೆ. ಕ್ರೀಡೆಗಳಿಂದ ಉತ್ತಮ ಶಿಕ್ಷಣ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗಿ ನಿಮ್ಮ ಮುಂದಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೆರ್ಯ ಬೆಳೆಯುತ್ತದೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಮೌಲ್ಯಗಳು, ಸಂಘಟನಾಶಕ್ತಿ, ನಾಯಕತ್ವ, ಕಾರ್ಯನಿರ್ವಹಣಾ ಶಕ್ತಿ ಸೇವಾಭಾವ ಮತ್ತು ಸಹ ಮಾನವರ ಬಗೆಗಿನ ಕಾಳಜಿ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕಬಡ್ಡಿ ಕ್ರೀಡೆಗೆ ಒಂದು ಸಾಂಸ್ಕೃತಿಕ ಪರಂಪರೆ ಇದ್ದು, ಇದರಿಂದ ಲಿಂಗ ಸಂವೇದನೆಯೊoದಿಗೆ ಯುವಕರು ಉದಾತ್ತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ. ಸೋಲು ಗೆಲುವುಗಳನ್ನು ಸ್ಪರ್ಧಾತ್ಮಕವಾಗಿ ಭಾವಿಸಿ ಸೋಲಿಗೆ ಕಾರಣಗಳನ್ನು ಕಂಡುಕೊಳ್ಳಬೇಕು, ಹಾಗೆಯೇ ಗೆಲುವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸುಸ್ಥಿರಗೊಳಿಸುವತ್ತ ಮುನ್ನಡೆಯಬೇಕು. ಕ್ರೀಡೆಗಳ ಮೂಲಕ ಸಮಾಜೀಕರಣ, ಉತ್ತರದಾತ್ವ, ನಾಯಕತ್ವ ಕಬಡ್ಡಿ ಕ್ರೀಡೆಯ ಶಾರೀರಿಕವಾಗಿ ಬಲಗೊಳಿಸುವುದಲ್ಲದೆ, ಸಂಘಟನೆ, ಸಮನ್ವಯ ಬಾಂಧತ್ವ ಬೆಳೆಸುತ್ತದೆ. ಕ್ರೀಡೆಗಳು ಶೈಕ್ಷಣಿಕ ಉತ್ಕೃಷ್ಟತೆ ವೃದ್ದಿಸಲು ಸಹಕಾರಿಯಾಗಿದ್ದು ಇದರಿಂದ ನಿಮ್ಮ ಬೌದ್ಧಿಕ ಉನ್ನತಿ ಹಾಗೂ ಸಾಮಾಜಿಕ ಬದ್ಧತೆ ಹೆಚ್ಚುತ್ತದೆ ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರ ಭಾಗಿಯಾಗುವ ಆಸಕ್ತಿ ಬೆಳೆಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು. ರಾಜ್ಯದ ವಿವಿಧ ಶಾಲೆಗಳಿಂದ ಪಂದ್ಯಾವಳಿಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಅಧ್ಯಾಪಕರವರ್ಗ, ದೈಕ ಶಿಕ್ಷಣ ಶಿಕ್ಷಕರು, ಸಂಘಟನಾಕಾರರು ಹಾಗೂ ತೀರ್ಪುದಾರರಿಗೆ ಅಭಿನಂದನೆ ತಿಳಿಸಿದರು. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಷಣ್ಮುಗಂ ಮಾತನಾಡಿ, ಕ್ರೀಡೆಗಳು ಹೇಗೆಲ್ಲ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗುತ್ತವೆಂಬ ಬಗ್ಗೆ ವಿವರಿಸಿದರು.
ಯೋಗ, ಪ್ರಾಣಾಯಾಮ, ಶಾರೀರಿಕ ಚಟುವಟಿಕೆಗಳು ಹಾಗೂ ಆರೋಗ್ಯಕರ ಹವ್ಯಾಸಗಳಿಂದ ವ್ಯಾಸಂಗದ ಬಗ್ಗೆ ಮಾನಸಿಕ ಏಕಾಗ್ರತೆ, ಆಸಕ್ತಿ, ಪ್ರೇರಣೆ ಮೂಡಿ ಉತ್ತಮ ಅಧ್ಯಯನದಿಂದ ಶೈಕ್ಷಣಿಕ ಉನ್ನತಿ ಸಾಧಿಸಬಹುದು. ಮಕ್ಕಳು ಶೈಕ್ಷಣಿಕವಾಗಿ, ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬೆಳೆಯುವುದರಿಂದ ಪರಿಪೂರ್ಣ ವ್ಯಕ್ತಿತ್ವ ಗಳಿಕೆಗೆ ಸೂಕ್ತ ನೆಲೆ ಒದಗುತ್ತದೆ ಎಂದರು.
ಕೆವಿ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಡಾ. ಅಮರೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಹೇಗೆಲ್ಲ ಕ್ರೀಡಾ ಚಟುವಟಿಕೆಗಳಿಗೆ ಅಭ್ಯಾಸ ಮಾಡಬೇಕು, ಅವರು ಪಾಲಿಸಬೇಕಾದ ನಿಯಮಗಳು ಹಾಗೂ ಶಿಸ್ತಿನ ಬಗ್ಗೆ ನಿದರ್ಶನಗಳ ಸಹಿತ ವಿವರಿಸಿ, ಕ್ರೀಡೆಗಳಿಗಾಗಿ ಇಷ್ಟೆಲ್ಲ ಸಹಕಾರ ನೀಡುತ್ತಿರುವ ಶಾಂತಾ ಕಾಲೇಜಿನ ಆಡಳಿತ ಮಂಡಲಿಯನ್ನು ಅಭಿನಂದಿಸಿದರು. ಇಂದಿನಿoದ 3 ದಿನಗಳು ನಡೆಯಲಿರುವ ಈ ಟೂರ್ನಿಮೆಂಟಿನಲ್ಲಿ ರಾಜ್ಯದ ಐಸಿಎಸ್‌ಸಿಯ ಸುಮಾರು ೫೦ ಕ್ಕೂ ಹೆಚ್ಚು ಶಾಲೆಗಳು 138 ತಂಡಗಳು, ಒಟ್ಟಾರೆ 1200 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಸಿದ್ದಾರೆ.