ಹಂದೂ ರಾಷ್ಟವಾಗಿ ಉಳಿಸಲು ಎಲ್ಲರ ಒಗ್ಗಟ್ಟು ಅಗತ್ಯ
1 min readಹಂದೂ ರಾಷ್ಟವಾಗಿ ಉಳಿಸಲು ಎಲ್ಲರ ಒಗ್ಗಟ್ಟು ಅಗತ್ಯ
ವಕ್ಫ್ ಭೂಮಿ ಕಬಳಿಸಲು ಬಿಡುವುದಿಲ್ಲ ಎಂದು ಶಪಥ
ಹಿಂದೂ ರಾಷ್ಟವನ್ನ ಕಾಪಾಡಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬೆಳ್ಳಾವಿ ಮಠದ ಕಾರದ ವೀರಬಸವೇಶ್ವರ ಸ್ವಾಮೀಜಿ ಕೋರಿದರು. ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಶ್ರೀಕೋಡಿ ಕೆಂಪಮ್ಮ ದೇವಿ ನೂತನ ದೇವಾಲಯ ಪ್ರವೇಶ, ಮೂಲ ವಿಗ್ರಹ ಪ್ರತಿಷ್ಠಾಪನೆ ನೂತನ ವಿಮಾನ ಗೋಪುರ ಕಳಶ ರೋಹಣ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ದೇಶದಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲದ ಸ್ಥಿತಿ ನಿರ್ಮಾಣವಾಗಿರುವುದು ದೇಶದ ಭವಿಷ್ಯಕ್ಕೆ ಕಂಟಕವಾಗಿದೆ. ವಕ್ಫ್ ಬೋರ್ಡ್ ನಮ್ಮ ಭಮಿ ಕಬಳಿಸಲು ಮುಂದಾಗಿದೆ. ಎಲ್ಲಾ ಶ್ರೀಗಳು ಇದರ ವಿರುದ್ಧ ಹೋರಾಟಕ್ಕೆ ನಿಂತಿದ್ದು, ಮಠಮಾನ್ಯಗಳು, ದೇವಾಲಯಗಳು, ರೈತರ ಭಮಿ ಕಬಳಿಸಲು ಮುಂದಾದರೆ ರಕ್ತ ಕೊಟ್ಟರು ನಮ್ಮ ಭಮಿ ಬಿಡುವುದಿಲ್ಲ ಎಂದು ತಿಳಿಸಿದ್ದೇವೆ ಎಂದರು.
ಎಲ್ಲರೂ ಒಟ್ಟಾಗಿರಬೇಕು, ದೇಶ ನಮ್ಮದು ಎಂಬುದನ್ನ ಮರೆಯಬಾರದು ಎಂದು ಎಚ್ಚರಿಕೆ ನೀಡಿದರು. ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ದೇಶಿ ಕೇಂದ್ರ ಮಹಾಸ್ವಾಮಿಜಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ದೇವಾಲಯಗಳು ನಿರ್ಮಾಣವಾದಾಗ ಶಾಂತಿ ಸಹಬಾಳ್ವೆ, ನಮ್ಮ ಸಂಸ್ಕೃತಿ ಉಳಿಯಲು ಕಾರಣವಾಗಲಿದೆ. ದೇವಾಲಯ ನಿರ್ಮಾಣವಾದಾಗ ಇರುವ ಹುಮ್ಮಸ್ಸು ನಂತರ ಇರುವುದಿಲ್ಲ. ಪ್ರತಿನಿತ್ಯ ದೇವರಿಗೆ ಅರ್ಪಣೆಯಾಗಬೇಕು ಆಗ ಮಾತ್ರ ನೆಮ್ಮದಿ ಸಾಧ್ಯ ಎಂದರು.
ತಮ್ಮಡಿಹಳ್ಳಿ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾಸ್ವಾಮಿಜಿ, ಶಿಡ್ಲಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಮಹಾಸ್ವಾಮೀಜಿ, ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿ, ಕೋಡಿ ಕೆಂಪಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲ್ ಟಿ ಎಂ ರಾಜಶೇಖರಯ್ಯ ಇದ್ದರು.