ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಗುಡಿಬಂಡೆ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

1 min read

ಗುಡಿಬಂಡೆ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಕಾಂಗ್ರೇಸ್ ಪಾಲಾದ ಗುಡಿಬಂಡೆ ಪಟ್ಟಣ ಪಂಚಾಯಿತಿ

ಗುಡಿಬAಡೆ ಪಟ್ಟಣ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿz್ದÁರೆ. ಅಧ್ಯಕ್ಷ ಸ್ಥಾನಕ್ಕೆ ವಿಕಾಸ್, ಉಪಾಧ್ಯಕ್ಷಸ್ಥಾನಕ್ಕೆ ಗಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿಗ್ಬತ್ತುಲ್ಲಾ ಘೋಷಿಸಿದರು.

ಗುಡಿಬಂಡೆ ಪಟ್ಟಣ ಪಂಚಾಯತಿ ಎರಡನೇ ಅವಧಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಸೆ.25 ರಂದು ಚುನಾವಣೆ ಘೋಷಣೆ ಮಾಡಿದ್ದು, ಅಧ್ಯಕ್ಷ ವಿಕಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಇಬ್ಬರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಕಾರಣದಿಂದ ಅಧ್ಯಕ್ಷಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದರು. ಪಕ್ಷೇತರ ಸದಸ್ಯ ರಾಜೇಶ್, ಜೆಡಿಎಸ್ ನ ಬರ್ಷೀ ಹಾಗೂ ಅನುಷಾ ಗೈರು ಹಾಜರಿಯಾಗಿದ್ದರು. ಪ.ಪಂ. ಎರಡನೇ ಅವಧಿಯ ಆಡಳಿತ ಕಾಂಗ್ರೇಸ್ ಪಕ್ಷದ ಪಾಲಾಗಿದೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್ ಪಕ್ಷದ ವಿಕಾಸ್ ಹಾಗೂ ಗಂಗರಾಜು ಅಧಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು
ಸಂತಸದ ವಿಚಾರ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಆಂಕಾಕ್ಷಿಗಳು ಹೆಚ್ಚಾಗಿದ್ದರು. ಆದರೆ ಎಲ್ಲರ ಮನವೊಲಿಸಿ ಮೂರನೇ ವಾರ್ಡಿನ ಕಾಂಗ್ರೆಸ್ ಸದಸ್ಯ ವಿಕಾಸ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಗಂಗರಾಜುರನ್ನು ಆಯ್ಕೆ ಮಾಡಲಾಗಿದೆ. ಒಂದು ವರ್ಷದಲ್ಲಿ ಗುಡಿಬಂಡೆಯನ್ನು ಮಾದರಿ ಗುಡಿಬಂಡೆಯನ್ನಾಗಿ ಅಭಿವೃದ್ದಿ ಮಾಡಬೇಕೆಂದು ತಿಳಿಸಿದ್ದಾನೆ ಎಂದರು.

ಬಳಿಕ ಗುಡಿಬಂಡೆ ಪಪಂ ನೂತನ ಅಧ್ಯಕ್ಷ ವಿಕಾಸ್ ಮಾತನಾಡಿ, ಶಾಸಕ ಸುಬ್ಬಾರೆಡ್ಡಿಯವರ ಮಾರ್ಗದರ್ಶನದಂತೆ ಗುಡಿಬಂಡೆ ಪಟ್ಟಣ ಪಂಚಾಯತಿಯನ್ನು ಅಭಿವೃದ್ದಿ ಮಾಡುತ್ತೇವೆ. ಬೆಂಬಲಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಡಿಬಂಡೆಯನ್ನು ಅಭಿವೃದ್ದಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಈ ವೇಳೆ ನೂತನ ಪ.ಪಂ. ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಇಸ್ಮಾಯಿಲ್ ಆಜಾದ್ ಬಾಬು, ಮಂಜುಳ, ರಾಜೇಶ್, ವೀಣಾ, ನಗೀನ್ ತಾಜ್, ಬಷೀರಾ, ಆದಿರೆಡ್ಡಿ, ಹೆಚ್.ಪಿ.ಲಕ್ಷ್ಮೀನಾರಾಯಣ, ಮಂಜುನಾಥ್, ರಿಯಾಜ್, ತಿರುಮಣಿ ಮಂಜುನಾಥ್, ರಮೇಶ್, ಅಜಯ್, ಸಂಜಯ್ ಇದ್ದರು.

About The Author

Leave a Reply

Your email address will not be published. Required fields are marked *