ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಂಭ್ರಮದ ಶ್ರೀರಾಮನವಮಿ

ನೆಚ್ಚಿನ ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಬೀಳ್ಕೊಡುಗೆ

ಜಿಲ್ಲೆಯಾದ್ಯಂತ ಅದ್ಧೂರಿ ಶ್ರೀರಾಮ ನವಮಿ

ಶ್ರೀರಾಮ ನವಮಿ ಪ್ರಯುಕ್ತ ಜಿಲ್ಲೆಯಾದ್ಯಂತ ರಾಮ ಜಪ

April 8, 2025

Ctv News Kannada

Chikkaballapura

ಸಲ್ಮಾನ್ ಖಾನ್ ‘ಟೈಗರ್ 3’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ

1 min read
ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಚಿತ್ರಕ್ಕೆ ಚಲನಚಿತ್ರ ಪ್ರಮಾಣಿಕೃತ ಮಂಡಳಿ (ಸೆನ್ಸರ್) (Censor) ಯು/ಎ ಪ್ರಮಾಣ ಪತ್ರ ನೀಡಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಹಾದಿ ಸುಗಮವಾಗಿದೆ. ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ.
ಮೊನ್ನೆಯಷ್ಟೇ ಹುನಿರೀಕ್ಷಿತ ಟೈಗರ್ 3 (Tiger 3) ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಲ್ಮಾನ್ ಖಾನ್ (Salman Khan) ನಟನೆಯ ಆಯಕ್ಷನ್ ಪ್ಯಾಕ್ಡ್ ಈ ಟ್ರೈಲರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ನಾನಾ ಕಾರಣಗಳಿಂದಾಗಿ ಕ್ರೇಜ್ ಕ್ರಿಯೇಟ್ ಮಾಡಿದೆ. ದೀಪಾವಳಿಗೆ ಈ ಸಿನಿಮಾ ಭರ್ಜರಿ ಪಟಾಕಿ ಹಚ್ಚೋದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.ಸಾಲು ಸಾಲು ಸೋಲು ಕಂಡಿರುವ ಭಜರಂಗಿ ಭಾಯ್‌ಜಾನ್‌ಗೆ ಬಾಕ್ಸಾಫೀಸ್‌ನಲ್ಲಿ ಅಬ್ಬರದ ಗೆಲುವೊಂದು ಸಿಗದೇ ಅನೇಕ ವರ್ಷಗಳೇ ಉರುಳಿದೆ. ಒಂದು ಕಾಲದಲ್ಲಿ ಸಲ್ಲುಭಾಯ್ ಸಿನಿಮಾ ಅಂದ್ರೆ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಆಗುತ್ತಿತ್ತು. ಆದರೆ ಈಗ ಸೋತಲ್ಲೇ ಗೆಲ್ಲಲು ಸಲ್ಮಾನ್ ಯೋಚಿಸಿದಂತಿದೆ. ಹಿಂದಿನ ಏಕ್ ಥಾ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಸಲ್ಮಾನ್‌ಗೆ ನಿರಾಸೆ ಮಾಡಿರಲಿಲ್ಲ. ಇದೀಗ ಅದಕ್ಕಿಂತಲೂ ಅಡ್ವಾನ್ಸ್ಡ್ ಆಗಿ ಬರುತ್ತಿದೆ ಟೈಗರ್ 3 ಸಿನಿಮಾ.

About The Author

Leave a Reply

Your email address will not be published. Required fields are marked *