ಮಹಾಮಾರಿ ಡೆಂಘೀಗೆ ಇಬ್ಬರು ಬಾಲಕಿಯರ ಬಲಿ
1 min readಮಹಾಮಾರಿ ಡೆಂಘೀಗೆ ಇಬ್ಬರು ಬಾಲಕಿಯರ ಬಲಿ
ಸ್ಥಳೀಯ ಶಾಸಕರಿಂದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ
ಜಿಲ್ಲೆಯಲ್ಲಿ ಆತಂಕ ಮೂಡಿಸಿದ ಭೀಕರ ಡೆಂಘೀ ಜ್ವರ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮಹಾಮಾರಿ ಡೆಂಘೀ ತೀವ್ರ ರೂಪ ತಾಳಿದೆ. ಭಯಾನಕ ಡೆಂಘೀ ಜ್ವರದ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಮಾರಕ ಡೆಂಘೀ ರೋಗಕ್ಕೆ ಇಬ್ಬರು ಬಾಲಕಿಯರು ಬಲಿಯಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮಹಾಮಾರಿ ಡೆಂಘೀ ತೀವ್ರ ರೂಪ ತಾಳಿದೆ. ಭಯಾನಕ ಡೆಂಘೀ ಜ್ವರದ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಮಾರಕ ಡೆಂಘೀ ರೋಗಕ್ಕೆ ಇಬ್ಬರು ಬಾಲಕಿಯರು ಬಲಿಯಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿದ್ದಾರೆ. ಅರಸೀಕೆರೆಯ ಜಯ ಚಾಮರಾಜೇಂದ್ರ ಸಾರ್ವಜನಿಕರ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡರು ಬೇಟಿ ನೀಡಿ ಡೆಂಘೀ ರೋಗದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.
ಶಾಸಕ ಶಿವಲಿಂಗೇಗೌಡರು ಅರಸೀಕೆರೆಯ ಜಯ ಚಾಮರಾಜೇಂದ್ರ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸುವ ಜೊತೆಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಡೆಂಘೀ ಜ್ವರದ ರೋಗಿಗಳಿಗೆ ಹೆಚ್ಚಿನ ನಿಗಾ ವಹಿಸಿ, ಚಿಕಿತ್ಸೆ ನೀಡುವ ಜೊತೆಗೆ ಅವರು ಶೀಘ್ರ ಗುಣಮುಖರಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಜೊತೆಗೆ ಆಸ್ಪತ್ರೆ ಸ್ವಚ್ಛತೆ ಕಾಪಾಡುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.