ನಾಮಪತ್ರ ಸಲಿಕೆ ಸಂಧರ್ಭದಲ್ಲಿ ಪ್ರಕ್ಷುಬ್ದ ವಾತಾವರಣ
1 min readಸರ್ಕಾರಿ ನೌಕರರ ಸಂಘದ ಚುನಾವಣೆ ವೇಳೆ ಮಾರಾಮಾರಿ
ನಾಮಪತ್ರ ಸಲಿಕೆ ಸಂಧರ್ಭದಲ್ಲಿ ಪ್ರಕ್ಷುಬ್ದ ವಾತಾವರಣ
ಸರ್ಕಾರಿ ನೌಕರರ ಸಂಘದ ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾ ಮಾರಿಗೆ ದಾರಿ ಮಾಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಅಲ್ಲದೆ ಮಾರಾ ಮಾರಿಗೆ ಕಾರಣ ಯಾರು ಎಂಬ ಬಗ್ಗೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
ಸರ್ಕಾರಿ ನೌಕರರ ಸಂಘದ ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ತಾವು ನಾಮಪತ್ರ ಸಲ್ಲಿಸಿದ ಕಾರಣಕ್ಜೆ ಅವರು ಗಲಾಟೆ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ ಆರೋಪಿಸಿದ್ದು, ಹಾಲಿ ಸರ್ಕಾರಿ ನೌಕರ ಸಂಘದ ಬೀದರ್ ಜಿಲ್ಲಾಧ್ಯಕ್ಷ ರಾಗಿರುವ ರಾಜೇಂದ್ರ ಕುಮಾರ್ ಗಂದಗೆ ಹಾಗೂ ಮತ್ತೊಬ್ಬ ಅಭ್ಯರ್ಥಿ ರಾಜಶೇಖರ್ ಚಿದ್ರಿ ಬೆಂಬಲಿಗರ ಮ`ೆ್ಯ ಮಾರಾಮಾರಿಯಾಗಿರುವ ಆರೋಪ ಕೇಳಿಬಂದಿದೆ.
ನಾವು ಶರಣರ ನಾಡಿನವರಾಗಿದ್ದು, ಯಾರ ಮೇಲೆಯೂ ಹಲ್ಲೆ ಮಾಡಿಲ್ಲ, ಮಾಡೋದು ಇಲ್ಲ, ಹಲ್ಲೆ, ರೌಡಿಸಂ ಮಾಡುವುದು ನಮ್ಮ ಗುಣಧರ್ಮದಲ್ಲಿ ಇಲ್ಲ, ಶರಣರ ಧರ್ಮ ಪಾಲಿಸುತ್ತೇವೆ ಎಂದು ಜಿಲ್ಲಾಧ್ಯಕ್ಷ ಹೇಳಿದ್ದಾರೆ. ಜೀವ ಬೆದರಿಕೆ ಹಾಕಿದ್ದಲ್ಲದೇ ರಾಜಶೇಖರ್ ಚಿದ್ರಿ ಹಾಗೂ ಅವರ ಬೆಂಬಲಿಗರಿ0ದ ಧಮ್ಕಿ ಹಾರುವುದಾಗಿ ಜಿಲ್ಲಾಧ್ಯಕ್ಷರು ಆರೋಪಿಸಿದ್ದಾರೆ.
ರಾಜಶೇರ್ಖ ಚಿದ್ರಿ ಸೇರಿದಂತೆ ಸುಮಾರು ೪೦ ಜನರ ವಿರುದ್ಧ ಎಐಆರ್ ದಾಖಲಾಗಿದ್ದು, ಸರ್ಕಾರಿ ನೌಕರರಲ್ಲದವರನ್ನ ಕಟ್ಟಿಕೊಂಡು ರೌಡಿಸಂ ಮಾಡೋಕೆ ಬಂದ್ರೆ ನಾವು ಬದುಕೋದು ಹೇಗೆ ಎಂದು ಜಿಲ್ಲಾಧ್ಯಕ್ಷರು ಅಳಲು ತೋಡಿಕೊಂಡಿದ್ದಾರೆ. ಈ ಸಂಬ0ಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರಾಜಶೇರ್ಖ ಚಿದ್ರಿ ಸೇರಿದಂತೆ ಹಲವರ ವಿರುದ್ದ ದೂರು ದಾಖಲಾಗಿದೆ.