ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಕೆಆರ್‌ಎಸ್ ಪಣ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗಲಿ

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚಿಂತಾಮಣಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರುವು

December 27, 2024

Ctv News Kannada

Chikkaballapura

ಚೇಳೂರು ತಾಲೂಕಿನಲ್ಲಿ ನಿಧಿಗಳ್ಳರ ಅಟ್ಟಹಾಸ

1 min read

ಚೇಳೂರು ತಾಲೂಕಿನಲ್ಲಿ ನಿಧಿಗಳ್ಳರ ಅಟ್ಟಹಾಸ
ಚಿಲಕಲನೇರ್ಪು ಗ್ರಾಮದ ಬಳಿ ಭೂಮಿ ಅಗೆದ ದುಷ್ಕರ್ಮಿಗಳು
ಜೆಸಿಬಿಯಿಂದ ನಿಧಿ ಶೋಧನೆ ಮಾಡಿರುವ ಭೂಪರು

ನಿಧಿ ಆಸೆಗಾಗಿ ದುಷ್ಕರ್ಮಿಗಳು ಭೂಮಿ ಅಗೆದು ಓಡಿ ಹೋಗಿರುವ ಘಟನೆ ಚೇಳೂರು ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ನಡೆದಿದೆ. ಚಿಲಕಲನೇರ್ಪು ಗ್ರಾಮದ ಎಂ.ಎನ್ ವೆಂಕಟರವಣಪ್ಪ ಎಂಬವರ ಜಮೀನಿನಲ್ಲಿ ನಿಧಿಯಿರುವ ಗಾಳಿ ಸುದ್ದಿ ಹಬ್ಬಿದ್ದು, ಇದನ್ನು ನಂಬಿ ನಿಧಿ ತೆಗೆಯಲು ಬಂದ ಅಪರಿಚಿತರು ವಾಮಾಚಾರ ನಡೆಸಿ ಭೂಮಿ ಅಗೆದು ನಿಧಿ ಹುಡುಕಾಟ ನಡೆಸಿರುವ ಬಗ್ಗೆ ಕುರುಹುಗಳು ಕಂಡುಬAದಿದೆ.

ನಿಧಿ ಆಸೆಗಾಗಿ ದುಷ್ಕರ್ಮಿಗಳು ಭೂಮಿ ಅಗೆದು ಓಡಿ ಹೋಗಿರುವ ಘಟನೆ ಚೇಳೂರು ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ನಡೆದಿದೆ. ಚಿಲಕಲನೇರ್ಪು ಗ್ರಾಮದ ಎಂ.ಎನ್ ವೆಂಕಟರವಣಪ್ಪ ಎಂಬವರ ಜಮೀನಿನಲ್ಲಿ ನಿಧಿಯಿರುವ ಗಾಳಿ ಸುದ್ದಿ ಹಬ್ಬಿದ್ದು, ಇದನ್ನು ನಂಬಿ ನಿಧಿ ತೆಗೆಯಲು ಬಂದ ಅಪರಿಚಿತರು ವಾಮಾಚಾರ ನಡೆಸಿ ಭೂಮಿ ಅಗೆದು ನಿಧಿ ಹುಡುಕಾಟ ನಡೆಸಿರುವ ಬಗ್ಗೆ ಕುರುಹುಗಳು ಕಂಡುಬoದಿದೆ. ಜಮೀನು ಮಾಲೀಕ ಬೆಳಿಗ್ಗೆ ಹೊಲಕ್ಕೆ ಹೋದಾಗ ತೆಂಗಿನ ಕಾಯಿ ಸೇರಿದಂತೆ ಮೊಟ್ಟೆ ಒಡೆದು, ಕೋಳಿ ಕೊಯ್ದು, ಕುಂಕುಮ ಮಿಶ್ರಿತ ನಿಂಬೆ ಹಣ್ಣು ಇಟ್ಟು ಪೂಜೆ ಮಾಡಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ ಜೆಸಿಬಿ ಮೂಲಕ ಭೂಮಿಯನ್ನು ಸುಮಾರು ಹತ್ತು ಅಡಿ ಆಳವಾಗಿ ಗುಂಡಿ ತೆಗೆದು ಹುಡುಕಾಟ ನಡೆಸಿದ ಕುರುಹುಗಳು ಕಂಡುಬAದಿದೆ. ಅಪರಿಚಿತರು ನಿಧಿ ಇರುವ ಸಂಶಯದಲ್ಲಿ ಈ ಕೃತ್ಯ ನಡೆಸಿರಬಹುದು ಎಂದು ತಿಳಿದ ಮಾಲೀಕ ಎಂ.ಎನ್. ವೆಂಕಟರವಣಪ್ಪ, ಕೆಂಚರ್ಲಹಳ್ಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಜಮೀನು ಚಿಲಕಲನೇರ್ಪು ಗ್ರಾಮದ ಎಂ.ಎನ್.ವೆoಕಟರವಣಪ್ಪ ಎಂಬುವರಿಗೆ ಸೇರಿದೆ. ನಿಧಿಗಾಗಿ ಇಲ್ಲಿ ಭೂಮಿ ಅಗೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ನಿಧಿಗಳ್ಳರು ಪೂಜೆ ಸಲ್ಲಿಸಿ ತಗ್ಗುಗಳನ್ನು ತೋಡಿದ್ದ ಘಟನೆಗಳು ನಡೆದಿತ್ತು ಎಂದು ಪಕ್ಕದ ಜಮೀನು ಮಾಲಿಕ ರಾಮು ತಿಳಿಸಿದ್ದಾರೆ. ನಮ್ಮ ಜಮೀನು ಗಢಿಭಾಗದ ಆಂಧ್ರ ಹಾಗೂ ಚಿಲಕಲನೇರ್ಪು ಗ್ರಾಮದ ಸರಹದ್ದಿನಲ್ಲಿರುವುದರಿಂದ ಈ ಜಮೀನಿನಲ್ಲಿ ನಿಧಿ ಇದೆ ಎಂದು ಗ್ರಾಮದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ಇದನ್ನು ನಂಬಿದ ದುಷ್ಕರ್ಮಿಗಳು ನಿಧಿಯಾಸೆಗಾಗಿ ಇಲ್ಲಿ ಭೂಮಿ ಅಗೆದಿದ್ದಾರೆ ಎಂದು ಮಾಲೀಕ ಎಂ.ಎನ್.ವೆoಕಟರವಣಪ್ಪ ಹೇಳಿದ್ದಾರೆ.
ನಿಧಿ ಆಸೆಗಾಗಿ ಭೂಮಿ ಅಗೆದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಅಕ್ಕಪಕ್ಕದ ಜಮೀನುಗಳ ರೈತರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *