ಮೈಸೂರಿಗೆ ಪೊಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆ : ಯತೀಂದ್ರ ಹೇಳಿದ್ದ ‘ವಿವೇಕಾನಂದ’ ಇವರೇನಾ?
1 min readಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ಬೆನ್ನಲ್ಲೇ ರಾಜ್ಯ ಸರ್ಕಾರ 71 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ್ದು , ವರ್ಗಾವಣೆ ಲಿಸ್ಟ್ ನಲ್ಲಿರುವ ‘ವಿವೇಕಾನಂದ’ ಹೆಸರು ಚರ್ಚೆಗೆ ಬಂದಿದೆ.
ಪೊಲೀಸ್ ಇಲಾಖೆ 71 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ್ದು, ಇದರಲ್ಲಿ ವಿವೇಕಾನಂದ ಎಂಬುವವರನ್ನು ಮೈಸೂರು ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇತ್ತೀಚೆಗೆ ವೈರಲ್ ಆದ ಯತೀಂದ್ರ ವಿಡಿಯೋದಲ್ಲಿ ವಿವೇಕಾನಂದ ಎಂಬ ಹೆಸರು ಪ್ರಸ್ತಾಪವಾಗಿದ್ದು, ಯಾವ ವಿವೇಕಾನಂದ ಎಂದು ಯತೀಂದ್ರ ಮಹಾದೇವ್ ಅವರನ್ನು ಕೇಳಿದ್ದರು. ಆ ಹೆಸರು ಇದೇನಾ ಎಂಬ ಚರ್ಚೆ ವ್ಯಾಪಕವಾಗಿದೆ.
ಯತೀಂದ್ರ ಹೇಳಿದ್ದ ವಿವೇಕಾನಂದ ಹಾಗೂ ವರ್ಗಾವಣೆ ಲಿಸ್ಟ್ ( N.4) ನಲ್ಲಿರುವ ವಿವೇಕಾನಂದ ಒಬ್ಬರೇನಾ..? ಎಂಬ ಚರ್ಚೆ ಶುರುವಾಗಿದೆ .
ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ಯತೀಂದ್ರ ಜನ ಸಂಪರ್ಕ ಸಭೆ ನಡೆಸಿದ್ದು, ಎಲ್ಲರ ಮನವಿ ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ ಯತೀಂದ್ರ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಕರೆ ಮೂಲಕ ಯತೀಂದ್ರ ಮಾತನಾಡಿದ್ದಾರೆ. ಅಪ್ಪ ಹೇಳಿ ಎಂದು ಮಾತು ಆರಂಭಿಸುವ ಅವರು ತಾನು ನೀಡಿದ ಪಟ್ಟಿಯ ಬಗ್ಗೆ ಮಾತನಾಡಿ ವಿವೇಕಾನಂದರ ಹೆಸರು ಪ್ರಸ್ತಾಪಿಸಿ ಇದಕ್ಕೆ ಯಾರು ಎಂದು ಕೇಳಿದ್ದಾರೆ. ಬೇರೊಂದು ಲಿಸ್ಟ್ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹಾದೇವರಿಗೆ ಫೋನ್ ನೀಡುವಂತೆ ಸಿದ್ದರಾಮಯ್ಯರಿಗೆ ತಿಳಿಸುತ್ತಾರೆ. ನಂತರ ಮಹದೇವ ಜೊತೆ ಮಾತನಾಡಿ, ಯಾಕೆ ಯಾವುದ್ಯಾವುದೋ ಕೊಡ್ತೀಯಾ? ಮತ್ತೆ ಇದೆಲ್ಲ ಯಾರು ಕೊಡ್ತಿರೋದು ಯಾರು.? ವಿವೇಕಾನಂದ ಯಾರು..? . ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.