1:4 ದರ ನಿಗದಿಗೆ ಒತ್ತಾಯಿಸಿ ಟ್ರಾಕ್ಟರ್ ರ‍್ಯಾಲಿ
1 min read1:4 ದರ ನಿಗದಿಗೆ ಒತ್ತಾಯಿಸಿ ಟ್ರಾಕ್ಟರ್ ರ‍್ಯಾಲಿ
ವೈನಿಕ ಬೆಲೆ ಪರಿಹಾರಕ್ಕಾಗಿ ಕೆಐಎಡಿಬಿ ವಿರುದ್ಧ ರೈತರ ಹೋರಾಟ
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಬಳಿ ಕೆಐಎಡಿಬಿ ವಶಪಡಿಸಿಕೊಳ್ಳುತ್ತಿರುವ ರೈತರ ಜಮೀನಿಗೆ ನ್ಯಾಯಯುತ ಪರಹಾರ ನೀಡುವಲ್ಲಿ ಕೆಐಎಡಿಬಿ ಅಧಿಕಾರಿಗಳು ವಿಫಲರಾಗಿದ್ದು, ರೈತರು ನಡೆಸುತ್ತಿರುವ ಹೋರಾಟ ೧೭೫ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಬಳಿ ಕೆಐಎಡಿಬಿ ವಶಪಡಿಸಿಕೊಳ್ಳುತ್ತಿರುವ ರೈತರ ಜಮೀನಿಗೆ ನ್ಯಾಯಯುತ ಪರಹಾರ ನೀಡುವಲ್ಲಿ ಕೆಐಎಡಿಬಿ ಅಧಿಕಾರಿಗಳು ವಿಫಲರಾಗಿದ್ದು, ರೈತರು ನಡೆಸುತ್ತಿರುವ ಹೋರಾಟ ೧೭೫ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರದ ಎಸ್.ಆರ್ ಬೆಲೆ ಆಧಾರದ ಮೇಲೆ ಭೂ ದರ ೧:೪ ನಿಗದಿ ಮಾಡಿ ರೈತರನ್ನು ಉಳಿಸಿ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಧಿಕಾರಿಗಳಿಗೆ ಒತ್ತಾಯ ಮಾಡಿದರು.
ತಾಲ್ಲೂಕಿನ ಕೊನಘಟ್ಟದಿಂದ ತಾಲ್ಲೂಕು ಕಚೇರಿ ಮುತ್ತಿಗೆ ಹಾಕಲು ಟ್ರಾಕ್ಟರ್ ಮೂಲಕ ರ್ಯಾಲಿಯಲ್ಲಿ ಆಗಮಿಸಿದ ಬಳಿಕ ತಾಲ್ಲೂಕು ಕಚೇರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರೈತರು, ತಮ್ಮ ಜೀವನಕ್ಕಾಗಿ ಕಳೆದ ೧೭೫ ದಿನಗಳಿಂದ ಸತತವಾಗಿ ಹೋರಾಟ ನೆಡೆಸುತ್ತಿದ್ದರೂ ಯಾವುದೇ ರೀತಿಯ ಪರಿಹಾರ ನೀಡದ ಅಧಿಕಾರಿಗಳು ನಮ್ಮಲ್ಲಿರುವುದು ವಿಪರ್ಯಾಸ. ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಿಲ್ಲ. ಅದು ಒಂದು ರೀತಿಯ ದಾನ ಮಾಡಿದಂತೆ ಅದನ್ನು ಅಧಿಕಾರಿಗಳು ಅರಿತು ರೈತರ ಪರ ನಿಲ್ಲಬೇಕಿದೆ. ಅಧಿಕಾರಿಗಳ ಧೋರಣೆ ಬಗ್ಗೆ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ಬೆಂಬಲವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಐಎಡಿಬಿ ಭೂ ಪರಿಹಾರ ಧನ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ.
ನಮ್ಮ ರೈತರ ನಿಯೋಗ ಅವರನ್ನು ಸಂಪರ್ಕಿಸಿದ ದಿನವೇ ಕೆಐಎಡಿಬಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿ ಹೇಳಿ ರೈತರಿಗೆ ಉತ್ತಮ ಬೆಲೆ ನೀಡುವಂತೆ ತಿಳಿಸಿದ್ದಾರೆ ಎಂದರು. ಕೊನಘಟ್ಟ ರೈತ ಮುಖಂಡ ಆನಂದ್ ಮಾತನಾಡಿ, ಸರ್ಕಾರದ ಮಾನದಂಡಗಳನ್ನು ಉಲ್ಲಂಘಸಿ ಭೂ ದರ ನಿಗದಿ ಮಾಡಿರುವ ಹಿನ್ನಲೆ ರೈತರು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಸತತ ೧೭೫ ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟದಿಂದ ರೈತರ ಪ್ರತಿ ಎಕರೆ ಭೂಮಿಗೆ ಕೆಐಎಡಿಬಿ ಅಧಿಕಾರಿಗಳು ೨೦ ಲಕ್ಷ ರೂ. ಅಧಿಕ ಮೊತ್ತ ಘೋಷಣೆ ಮಾಡಿರುವುದು ನಮ್ಮ ಯಶಸ್ಸಿಗೆ ಪೂರಕವಾಗಿದೆ ಎಂದರು.
ಆದರೆ ಇದು ವೈನಿಕವಾಗಿಲ್ಲ. ಕಾನೂನಾತ್ಮಕವಾಗಿಯೇ ಸರ್ಕಾರದ ಮಾನದಂಡಗಳ ಪ್ರಕಾರ ೧:೪ ದರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿವೆ. ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪುನರ್ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ರೈತಾಪಿ ವರ್ಗಕ್ಕೆ ಅನುಕೂಲಮಾಡಿಕೊಳ್ಳಬೇಕು ಎಂದರು.