ಶ್ರೀನಿವಾಸ ಜಲಾಶಯಕ್ಕೆ ಮುಗಿಬಿದ್ದು ಬರುತ್ತಿರುವ ಪ್ರವಾಸಿಗರು
1 min readಇದು ಭೂಲೋಕವಾ ಅಥವಾ ದೇವಲೋಕವ
ಪ್ರಕೃತಿಯಿಂದ ಸೃಷ್ಠಿಯಾದ ಜಲಪಾತ
ಹಾಲಿನ ನೊರೆಯಂತೆ ಹುಕ್ಕಿ ಹರೆಯುತ್ತಿರುವ ಶ್ರೀನಿವಾಸ ಜಲಾಶಯ
ಶ್ರೀನಿವಾಸ ಜಲಾಶಯಕ್ಕೆ ಮುಗಿಬಿದ್ದು ಬರುತ್ತಿರುವ ಪ್ರವಾಸಿಗರು
ಇತ್ತಿಚ್ಚೇಗೆ ಸುರಿಯುತ್ತಿರುವ ಬಾರೀ ಮಳೆಗೆ ಕೆರೆ ಕುಂಟೆ ಗಳು ತುಂಬಿತುಳುಕುತ್ತಿದ್ದು ಸಾಕಷ್ಟು ಸ್ವಯಂ ಜಲಪಾತಗಳು ಉದ್ಭವಿಸಿ ಥೇಟ್ ದೇವಲೋಕದಂತೆ ಭಾವಿಸುತ್ತಿರುವ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಬರಪೀಡಿತ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮಳೆ ಬರುವುದೇ ವಿಪರ್ಯಾಸವೆಂದರೆ ಅದರಲ್ಲೂ ಜಲಪಾತಗಳು ಕಂಡು ಬರುತ್ತಿರುವುದು ಮಳೆ ನಾಡ ಪ್ರದೇಶದಂತೆ ಭಾಸವಾಗುವ ವಾತಾವರಣ ಎಲ್ಲರ ಮನಸೆಳೆಯುತ್ತಿದೆ.
ಹೌದು ವರುಣನಿಂದ ಸೃಷ್ಟಿಯಾದ ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿರುವ ಜನಸಾಮಾನ್ಯರು. ಹಾಲನ್ನೊರೆಯಂತೆ ಹುಕ್ಕಿ ಹರಿಯುತ್ತಿರುವ ನೀರು, ನೀರಿನಲ್ಲಿ ಆಟವಾಡುತ್ತಿರುವ ಜನಸಾಮಾನ್ಯರು ಥೇಟ್ ದೇವಲೋಕದಂತೆ ಕಂಡು ಬರುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರದಲ್ಲಿ.
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಹಲವೆಡೆ ಕೆರೆಗಳು ತುಂಬಿ ತುಳುಕುತ್ತಿದ್ದು ಇನ್ನೂ ಹಲವೆಡೆ ಚಿಕ್ಕಚಿಕ್ಕ ಜಲಪಾತಗಳು ಸೃಷ್ಟಿ ಯಾಗಿ ಎಲ್ಲರ ಗಮನ ಸೆಳೆದುಕೊಂಡು ನಾವು ಮಳೆನಾಡಿಗೆ ಏನಾದ್ರು ಬಂದಿದ್ದೀವಾ ಎಂಬ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ತಾಲೂಕಿನ ಶ್ರೀನಿವಾಸ ಸಾಗರ ಹಾಲಿನನೊರೆಯಂತೆ ಹುಕ್ಕಿಹರಿಯುತ್ತಿದ್ದು ಜಿಲ್ಲೆಯ ಜನರನ್ನು ಅಷ್ಟೇ ಅಲ್ಲದೇ ನೆರೆಯ ಜಿಲ್ಲೆಯ ಜನತೆಯನ್ನು ಆಕರ್ಷಿಸಿಕೊಳ್ಳು ಮುಂದಾಗುತ್ತಿದೆ.
ಇನ್ನೂ ಇತಂಹ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕಾದ್ರೆ ಮಡಿಕೇರಿ, ಚಿಕ್ಕಮಂಗಳೂರು, ಮಳೆನಾಡು ಪ್ರದೇಶಗಳಿಗೆ ಹೋಗಲು ಸುಮಾರು 300 -400 ಕ್ಕೂ ಅಧಿಕ ಕಿಲೋ ಮೀಟರ್ ಸಂಚರಿಸಿ ದೃಶ್ಯಗಳನ್ನು ನೋಡಬಹುದು ಆದರೆ ಈಗ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಬಳ್ಳಾಪುರ ತಾಲೂಕು ಸಹಾ ಮಲೆನಾಡಿನಂಗೆ ಬಾಸವಾಗುತ್ತಿದೆ. ಅದರಲ್ಲೂ ಶ್ರೀನಿವಾಸ ಸಾಗರ ತುಂಬಿಹರಿಯುತ್ತಿದ್ದು ಎಲ್ಲರನ್ನು ಆಕರ್ಷಿಸಿಕೊಳ್ಳುತ್ತಿದ್ದು ನೋಡಲು ಸ್ವರ್ಗದಂತೆ ಬಾಸವಾಗುತ್ತಿದ್ದು ಕುಟುಂಬದ ಜೊತೆ ಬಂದು ನೋಡಲು ಸಾಕಷ್ಟು ಸಂತಸ ವಾಗಿದೆ ಎಂದು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ತುಂಬಿ ದೇವಲೋಕದ ಸ್ವರ್ಗದಂತೆ ನಾಚುತ್ತಿದ್ದು ಎಲ್ಲರನ್ನು ಇತ್ತ ಆಕರ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
ನಂದಕುಮಾರ್ ಸಿಟಿವಿ ನ್ಯೂಸ್ ಚಿಕ್ಕಬಳ್ಳಾಪುರ