ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು
1 min readವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು
ವೀಕೆ0ಡ್ ಹಿನ್ನೆಲೆ ಬೈಕ್, ಕಾರುಗಳಲ್ಲಿ ಆಗಮಿಸಿದ ಪ್ರವಾಸಿಗರು
ಬೆಳಗಿನಿಂದಲೇ ಗಿರಿಧಾಮದ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ವೀಕೆಂಡ್ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಕಾರಣ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುವಂತಾಯಿತು.
ಪ್ರಕೃತಿ ಸ್ವರ್ಗದ ತಾಣ, ಪ್ರೇಮಿಗಳಿಗೆ ಹಾಟ್ ಸ್ಪಾಟ್ ಆಗಿರುವ ನಂದಿ ಬೆಟ್ಟ ಸಿಲಿಕಾನ್ ಸಿಟಿಗೆ ಕೂಗಳತೆ ದೂರದಲ್ಲಿರುವ ಹಿನ್ನಲೇ ವೀಕ್ ಎಂಡ್ ಬಂದ್ರೆ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಇಂದು ನಂದಿ ಬೆಟ್ಟದ ಮೇಲೆ ಸಾವಿರಾರು ಸಂಖ್ಯೆಯ ಪ್ರಕೃತಿ ಪ್ರೇಮಿಗಳಿಂದ ಕಂಗೊಳಿಸುವತ್ತಿತ್ತು. ನಂದಿಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರು ಇಲ್ಲಿನ ವಾತಾವರಣಕ್ಕೆ ಫಿದಾ ಆಗಿದ್ದಾರೆ.
ಪ್ರತಿ ವೀಕ್ ಎಂಡ್ ನಂತೆ ನಂದಿಬೆಟ್ಟ ನೋಡಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ. ನಂದಿಬೆಟ್ಟದ ಚೆಕ್‌ಪೋಸ್ಟ್ನಿಂದಲೇ ವಾಹನಗಳು ತುಂಬಿತುಳುಕುತ್ತಿದ್ದ ದೃಶ್ಯ ಕಂಡುಬ0ದಿದೆ. ಸಾಕಷ್ಟು ಪ್ರಯಾಣಿಕರು ಟ್ರಾಫಿಕ್ ಜಾಮ್ ನಿಂದಲೇ ಪರದಾಟ ನಡೆಸಿದ್ರು. ಇಂದು ಮುಂಜಾನೆ ೫ ಗಂಟೆಯಿ0ದ ನಂದಿಬೆಟ್ಟದ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ನಂದಿಗಿರಿಧಾಮ ಪೊಲೀಸರು ವಾಹನ ಸಂಚಾರ ದಟ್ಟಣೆ ನಿಭಾಯಿಸಲು ಹೈರಾಣಾದರು.
ರಸ್ತೆ ಒಂದೇ ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತಿದ್ದು ನಂದಿಬೆಟ್ಟದಿ0ದ ವಾಪಾಸ್ ಬರುವವರು ಕೆಳಗೆ ಬರದಂತಾಯಿತು. ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಅತ್ತ ಮೇಲೂ ಹೋಗಲಾಗದೆ ಇತ್ತ ಕೆಳಗೆ ವಾಪಸ್ ಬರಲಾಗದೆ ಪರದಾಡಿದರು.
ನಂದಿಬೆಟ್ಟ ನೋಡಲು ಆಗಮಿಸಿರುವ ಪ್ರವಾಸಿಗರು ಗಂಟೆಗಟ್ಟಲೆ ರಸ್ತೆಯಲ್ಲೆ ಕಾಲ ಕಳೆಯುವಂತಾಗಿತ್ತು. ರಾಜಧಾನಿ ಬೆಂಗಳೂರಿನ ಜನವಂತೂ ಇಂದು ಬೆಳಗ್ಗೆ ಕಾರು ಬೈಕ್‌ಗಳ ಮೂಲಕ ಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದರು. ಒಂದೇ ಸಮಯದಲ್ಲಿ ಸಾವಿರಾರು ಮಂದಿ ಯುವಕ, ಯುವತಿಯರು ಗಿರಿಧಾಮಕ್ಕೆ ಲಗ್ಗೆ ಹಾಕಿದ್ದರಿಂದ ಪ್ರವಾಸಿತಾಣ ಗಿರಿಧಾಮದಲ್ಲಿ ಜನ ಜಂಗುಳಿ, ಜನಜಾತ್ರೆ ಕಂಡು ಬಂದಿತು.
ನಾಮು0ದು ತಾಮುಂದು ಅಂತಾ ಜನ ಪ್ರವೇಶ ದ್ವಾರದಲ್ಲಿ ಮುಗಿಬಿದ್ದ ದೃಶ್ಯ ಕಂಡು ಬಂದಿದೆ. ಸ್ವಲ್ಪ ತಡವಾದರೂ ಗಿರಿಧಾಮದಲ್ಲಿ ಪ್ರವೇಶ ಸಿಗುತ್ತದೋ ಇಲ್ಲವೋ ಎಂದು ಬೆಳಿಗ್ಗೆ 5 ಗಂಟೆಗೆ ಆಗಮಿಸಿ ಪ್ರಕೃತಿ ಸೊಬಗನ್ನು ಸವಿದರು. ಆದರೆ ಟ್ರಾಫಿಕ್ ಕಿರಿ ಕಿರಿಯಿಂದ ಹಲವು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು. ನಂದಿಗಿರಿಧಾಮ ರಸ್ತೆಯಲ್ಲಿ ಎಲ್ಲಿ ನೋಡಿದರೂ ಒಂದೆಡೆ ಜನ, ಮತ್ತೊಂದೆಡೆ ವಾಹನಗಳ ಸಂದಣಿ ಕಾಣಿಸಿದೆ. ಗಿರಿಧಾಮದ ಮಿರ್ಜಾ ವೃತ್ತದಿಂದ ಬೆಟ್ಟದ ಕ್ರಾಸ್‌ವರೆಗೂ ಐದಾರು ಕಿ.ಮೀ ದೂರ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಪ್ರವಾಸಿಗರು ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ಪರದಾಡುವಂತಾಗಿತ್ತು.