ಥಿಯೇಟರ್ನಲ್ಲಿ ‘ಟೈಗರ್’ 3 ಘರ್ಜನೆ: ಸಲ್ಲು ಸಿನಿಮಾಗೆ ಫ್ಯಾನ್ಸ್ ಫಿದಾ!
1 min readಬಹುನಿರೀಕ್ಷಿತ ಸಿನಿಮಾ ‘ಟೈಗರ್ 3’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದೀಪಾವಳಿ ಹಬ್ಬದ ಉಡುಗೊರೆಯಾಗಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟೈಗರ್ 3’ ಬಿಡುಗಡೆ ಆಗಿದೆ.
ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಅವರು ಸಲ್ಲು ವಿರೋಧಿಯಾಗಿ ಕಾಣಿಸಿಕೊಂಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಪವರ್ ಪ್ಯಾಕ್ಡ್ ಆಯಕ್ಷನ್ ಮೂವಿ ‘ಟೈಗರ್’ನ ಮೂರನೇ ಭಾಗ. ಇಂಡಿಯನ್ ಸೂಪರ್ ಸ್ಟಾರ್ನ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದೆ.
ನವೆಂಬರ್ 12, ಭಾನುವಾರ ‘ಟೈಗರ್ 3’ ತೆರೆಗಪ್ಪಳಿಸಿದೆ. ಈ ಸಿನಿಮಾ ವೀಕ್ಷಿಸಲು ಬಹು ದಿನಗಳಿಂದ ಕಾತರರಾಗಿದ್ದ ಅಭಿಮಾನಿಗಳು ಇಂದು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಡೆ ಹಲವೆಡೆ ಅದ್ಧೂರಿ ಸೆಲೆಬ್ರೇಷನ್ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರೇಷನ್ ವಿಡಿಯೋಗಳು ವೈರಲ್ ಆಗುತ್ತಿವೆ. ಆನ್ಲೈನ್ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದರಲ್ಲಿ ಅಭಿಮಾನಿಗಳು ಒಟ್ಟಿಗೆ ಸೇರಿ ಡೋಲು ಸದ್ದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಕಟೌಟ್ಗಳು ಕಂಡುಬಂದಿದೆ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆದರೆ, ಹಲವರು ಸಾಧಾರಣವಾಗಿದೆ ಎಂಬರ್ಥದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸೊಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ Xನಲ್ಲಿ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಕರೆದರೆ, ಕೆಲ ಪ್ರೇಕ್ಷಕರು ಪಠಾನ್ ಮತ್ತು ಇತರೆ ಸ್ಪೈ ಸಿನಿಮಾಗಳ ನಕಲು ಎಂದು ತಿಳಿಸಿದ್ದಾರೆ
ಆದಿತ್ಯ ಚೋಪ್ರಾರಿಂದ ರಚಿಸಲ್ಪಟ್ಟ ‘ಸ್ಪೈ ಯೂನಿವರ್ಸ್’ಗೆ ಟೈಗರ್ 3 ಹೊಸ ಸೇರ್ಪಡೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್ ಬಳಿಕ ಬಂದ ಮತ್ತೊಂದು ಸ್ಪೈ ಸಿನಿಮಾ. ಈ ಚಿತ್ರದಲ್ಲಿ ಸಲ್ಲು, ಕ್ಯಾಟ್ ಜೊತೆ ಇಮ್ರಾನ್ ಹಶ್ಮಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಅದ್ಭುತ ತಾರಾಗಣ ಸಿನಿಮಾದ ತೂಕ ಹೆಚ್ಚಿಸಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್ ಸೌಮಡ್ ಮಾಡಿತ್ತು. ಪ್ರಚಾರ ಕೂಡ ಜೋರಾಗೇ ನಡೆದಿದೆ. ನಿರೀಕ್ಷೆ ಹೆಚ್ಚಿಸುವ ಸಲುವಾಗಿ ಸ್ಪೆಷಲ್ ವಿಡಿಯೋ, ಟೀಸರ್, ಟ್ರೇಲರ್, ಸಾಂಗ್ಸ್ಗಳನ್ನು ಹಂತ ಹಂತವಾಗಿ ಅನಾವರಣಗೊಳಿಸಲಾಗಿತ್ತು. “ಲೇಕೆ ಪ್ರಭು ಕಾ ನಾಮ್” ಅಭಿಮಾನಿಗಳ ನಿರಿಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ ವರ್ಣರಂಜಿತ ನೃತ್ಯ ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಥಿಯೇಟರ್ಗಳಲ್ಲಿ ಟೈಗರ್ ಘರ್ಜಿಸುತ್ತಿದ್ದಾನೆ.