ಅಶ್ಲೀಲ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ.ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾದ ಬಿಜೆಪಿ ಮುಖಂಡೆ ಮಗಳು
1 min readಮೂವರು ಯುವಕರ ಕಿರುಕುಳದಿಂದ ನೊಂದ ಬಿಜೆಪಿ ಮುಖಂಡೆಯೊಬ್ಬರ ಪುತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಇಂಟರ್ ಕಾಲೇಜಿನಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಶಾಲೆಗೆ ಬರುವಾಗ ಯುವಕರು ದಿನ ನಿತ್ಯ ಕಿರುಕುಳ ನೀಡುತ್ತಿದ್ದರು. ಈ ಕುರಿತು ಮಂಗಳವಾರ ಸಂಬಂಧಿಕರಿಗೆ ದೂರು ನೀಡಿದಾಗ ಆರೋಪಿಗಳು ಸ್ಟಾಂಪ್ ಪೇಪರ್ ಮೇಲೆ ಬರೆದು ಕ್ಷಮೆಯಾಚಿಸಿದ್ದಾರೆ.
ಬಳಿಕ ಮನೆಯಲ್ಲಿದ್ದ ಬಾಲಕಿಯನ್ನು ಸುತ್ತುವರಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಬಿಜೆಪಿ ಮುಖಂಡನ ಮಗ. ತಡರಾತ್ರಿ ಪೊಲೀಸರು ಕುನಾಲ್ ಗುಪ್ತಾ, ಓಂ ವಶಿಷ್ಠ ಮತ್ತು ಅಭಿಷೇಕ್ ಚಂದ್ರ ವಿರುದ್ಧ ಅತ್ಯಾಚಾರ ಯತ್ನದ ದೂರು ದಾಖಲಿಸಿದ್ದಾರೆ. ತನ್ನ ಮಗಳಿಗೆ ಬಹಳ ದಿನಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ನಾಯಕಿ ಆರೋಪಿಸಿದ್ದಾರೆ. ಆರೋಪಿಗಳ ಸಂಬಂಧಿಕರಿಗೆ ಹಲವು ಬಾರಿ ದೂರು ನೀಡಿದ ನಂತರ ಹೆಚ್ಚು ಕಿರುಕುಳ ನೀಡಲಾರಂಭಿಸಿದರು. ಅಷ್ಟೇ ಅಲ್ಲ, ಮಗಳ ಫೋಟೋವನ್ನು ಎಡಿಟ್ ಮಾಡಿ ಅವಾಚ್ಯ ಶಬ್ದಗಳಿಂದ ಅಂತರ್ಜಾಲ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ಯುವಕರು ಮತ್ತು ಅವರ ಸಂಬಂಧಿಕರು ಕ್ಷಮೆಯಾಚಿಸಿದರು. ಸ್ಟಾಂಪ್ ಪೇಪರ್ ನಲ್ಲಿ ಅಗ್ರಿಮೆಂಟ್ ಕೂಡ ಬರೆಯಲಾಗಿತ್ತು. ಆದರೆ ಮಧ್ಯಾಹ್ನ ಮೂವರು ಯುವಕರು ತಮ್ಮ ಸ್ನೇಹಿತರೊಂದಿಗೆ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಬಾಲಕಿ ಒಬ್ಬಳೇ ಇದ್ದಳು. ಆಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಆಕೆ ವಿರೋಧ ವ್ಯಕ್ತಪಡಿಸಿದಾಗ ಅಶ್ಲೀಲ ವಿಡಿಯೋ ಮಾಡಿ ಅಂತರ್ಜಾಲ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಅಲ್ಲಿಂದ ತೆರಳಿದ್ದಾರೆ. ಯುವಕರ ಕೃತ್ಯದಿಂದ ಬೇಸತ್ತ ಬಾಲಕಿ ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡಿದ್ದಾಳೆ. ಮನೆಗೆ ಬಂದ ಬಾಲಕಿಯ ಅಣ್ಣ ತಂಗಿ ನೇಣು ಬಿಗಿದುಕೊಂಡಿರುವುದನ್ನು ನೋಡಿದ್ದಾನೆ. ಸಿವಿಲ್ ಲೈನ್ಸ್ ಕೊತ್ವಾಲಿ ಪ್ರಭಾರಿ ಅಜಯ್ ಮಿಶ್ರಾ ಪ್ರಕಾರ, ಎಫ್‌ಐಆರ್ ದಾಖಲಿಸಲಾಗಿದೆ.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnews