ಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
1 min readಇದು ಸಿಟಿವಿ ನ್ಯೂಸ್ ಬಿಗ್ ಇಂಪ್ಯಾಕ್ಟ್
ಬಡವರ ಮನೆಯಲ್ಲಿ ಕೊನೆಗೂ ಬೆಳಗಿದ ವಿದ್ಯುತ್ ದೀಪ
ನೊಂದವರ ಮನೆಯಲ್ಲಿ ಬೆಳಕಾದ ದೀಪಾವಳಿ
ಶತಮಾನಗಳೇ ಕಳೆದರು ಬಡವರ ಮನೆಗೆ ಇನ್ನೂ ಬೆಳಕಿನ ಭಾಗ್ಯ ಸಿಕ್ಕಿರಲಿಲ್ಲ. ಕಗ್ಗತ್ತಿಲಿನಲ್ಲೆ ಕುಟುಂಬ ವಾಸ ಮಾಡುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಮೇಣದಬತ್ತಿ ಬೆಳಕೇ ಗತಿ ಎಂಬ ಸ್ಥಿತಿ ಇತ್ತು. ಈ ಸಂಬ0ಧ ಸಿಟಿವಿ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಡವರ ಮನೆಗೆ ಬೆಳಕಿನ ಭಾಗ್ಯ ಕಲ್ಪಿಸಿದ್ದಾರೆ. ಈ ಕುರಿತು ಒಂದು ವರಿದ
ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜುಲ್ಲೆ. ಅದೇ ಜಿಲ್ಲೆಯ ಬಡ ಕುಟುಂಬವೊ0ದಕ್ಕೆ ಈವರೆಗೂ ಬೆಳಕಿನ ಭಾಗ್ಯವೇ ಸಿಕ್ಕಿರಲಿಲ್ಲ. ಹಾಗಾಗಿಯೇ ಆ ಮನೆಯಲ್ಲಿ ಮೇಣದ ಬತ್ತಿಯೇ ಬೆಳಕು ನೀಡುತ್ತಿದ್ದರೆ, ಬೀದಿ ದೀಪದ ಬೆಳಕಿನಲ್ಲಿ ಮಕ್ಕಳು ಓದುತ್ತಿದ್ದರು. ಇದು ನಾಗರೀಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿತ್ತು. ನಂಜನಗೂಡು ಪಟ್ಟಣದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಮೇದರಬೀದಿ ಬಡಾವಣೆಯ ಚೆನ್ನಜಮ್ಮ ಎಂಬುವವರ ಮನೆಯ ದುಸ್ಥಿತಿಯ ಬಗ್ಗೆ ಸಿಟಿವಿ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು.
ನೊಂದ ಕುಟುಂಬ ಸರ್ಕಾರಿ ಕಛೇರಿಗೆ ಅಲೆದಾಡಿದರು ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿರಲಿಲ್ಲ. ವಿದ್ಯುತ್ ಸಂಪರ್ಕವಿಲ್ಲದೆ ಮಕ್ಕಳು ವಿದ್ಯಾಭ್ಯಾಸ ಮಾಡಲು ತೊಂದರೆಯಾಗಿತ್ತು. ಮೇಣದ ಬತ್ತಿಯ ಬೆಳಕು ಮತ್ತು ಬೀದಿ ದೀಪದ ಕೆಳಗೆ ವಿದ್ಯಾರ್ಥಿ ಓದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನಸಂಗ್ರಾಮ ಪರಿಷತ್ ಗೌರವಾಧ್ಯಾಕ್ಷ ನಗರ್ಲೆ ಎಂ. ವಿಜಯಕುಮಾರ್ ಅವರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಸಂಬ0ಧ ಸಿ.ಟಿವಿ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ದೀಪಾವಳಿ ಹಬ್ಬದ ದಿನವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದು ಸಿಟಿವಿ ನ್ಯೂಸ್ ವಾಹಿನಿಯ ಆಶಯವಾಗಿತ್ತು. ಈ ಸುದ್ದಿಯನ್ನು ವೀಕ್ಷಿಸಿದ ಚೆಸ್ಕಾಂ ಎಇಇ ಕಿರಣ್ ಕುಮಾರ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದರು. ರೈಲ್ವೆ ಗೂಡ್ಸ್ ಶೆಡ್ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರು ಸಿ.ಟಿವಿ ನ್ಯೂಸ್ ವರದಿ ವೀಕ್ಷಿಸಿ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ.
ದೀಪಾವಳಿ ಹಬ್ಬದ ದಿನವೇ ಚೆನ್ನಜಮ್ಮ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ನೊಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಟಿವಿ ನ್ಯೂಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಿ ಟಿವಿ ನ್ಯೂಸ್ ವರದಿಯ ಫಲಶೃತಿಯಾಗಿದೆ.