ಬೆಳ್ಳಂಬೆಳಗ್ಗೆ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳರು
1 min readಬೆಳ್ಳಂಬೆಳಗ್ಗೆ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳರು
ಕಾರಿನಲ್ಲಿ ಚೇಸ್ ಮಾಡಿ, ಬೈಕ್‌ಗೆ ಡಿಕ್ಕಿ ಹೊಡೆದ ಮಾಜಿ ಕಾರ್ಪೊರೇಟರ್
ಲಾಂಗ್‌ನಿ0ದ ಬೆದರಿಸಿ, ಮೊಬೈಲ್ ಬಿಸಾಡಿ ಪರಾರಿಯಾದ ಕಳ್ಳರು
ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಜೊತೆಗೆ ಮೊಬೈಲ್ ಕಳ್ಳರ ಹಾವಳಿಯೂ ಹೆಚ್ಚಾಗಿದ್ದು, ಬೆಳ್ಳಂ ಬೆಳಗ್ಗೆ ಬೈಕಿನಲ್ಲಿ ಹೋಗುವವರ ಮೊಬೈಲ್ ಕದ್ದು ಹೋಗಿರುವ ಪ್ರಕರಣವೊಂದು ಇದೀಗ ವೈರಲ್ ಆಗುತ್ತಿದೆ. ಮೊಬೈಲ್ ಕಳ್ಳರನ್ನು ಕಾರಿನಲ್ಲಿ ಹಿಂಬಾಳಿಸಿದ ಕಾರಣಕ್ಕೆ ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಕಳ್ಳರು, ಯಾವ ಮಟ್ಟಕ್ಕೆ ಅಟ್ಟಹಾಸ ಮೆರೆದಿದ್ದಾರೆ ಎಂಬುದು ಆತಂಕಕಾರಿಯಾಗಿದೆ.
ಗೌರಿಬಿದನೂರು ಮೂಲಕ ಗಣೇಶ್‌ರೆಡ್ಡಿ ಎಂಬುವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇವರು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆಗಿದ್ದಾರೆ. ಇವರು ಬೆಳಗಿನ ವೇಳೆ ಜಿಮ್‌ಗೆ ಹೋಗುತ್ತಿದ್ದಾಗ ಸುಮಾರು ೫ ಗಂಟೆ ಸಮಯದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಸಿದು ಕಳ್ಳರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಇದು ಗಣೇಶ್‌ರೆಡ್ಡಿ ಸಾಗುತ್ತಿದ್ದ ಕಾರಿನ ಮುಂದೆಯೇ ನಡೆದಿದ್ದು, ಕೂಡಲೇ ಎಚ್ಚೆತ್ತ ಗಣೇಶರೆಡ್ಡಿ, ತನ್ನ ಕಾರಿನಲ್ಲಿ ಮೊಬೈಲ್ ಕಳೆದುಕೊಂಡವರನ್ನು ಕೂರಿಸಿಕೊಂಡು, ಕಳ್ಳರ ಬೈಕ್ ಚೇಸ್ ಮಾಡಿದ್ದಾರೆ.
ಬೆಂಗಳೂರಿನ ಎಚ್‌ಎಸ್‌ಬಿಆರ್ ೮ನೇ ಕ್ರಾಸ್ ನಲ್ಲಿ ಕಳ್ಳರನ್ನು ಹಿಂಬಾಳಿಸಿದ್ದು, ಕಾರಿನಿಂದ ಕಳ್ಳರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಬೈಕಿನಲ್ಲಿದ್ದ ಕಳ್ಳರು ನೆಲಕ್ಕೆ ಉರುಳಿ ಬಿದ್ದಿದ್ದು, ನೆಲಕ್ಕೆ ಬಿದ್ದ ಕಳ್ಳರು ಲಾಂಗ್‌ನೊ0ದಿಗೆ ಬಂದು ಗಣೇಶ್‌ರೆಡ್ಡಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಆಗ ಬಡವರ ಮೊಬೈಲ್ ಅವರಿಗೆ ವಾಪಸ್ ಕೊಡಿ ಎಂದು ಹೇಳಿದ್ದು, ಕೂಡಲೇ ಅವರು ಮೊಬೈಲ್ ಬಿಸಾಡಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.