ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 23, 2024

Ctv News Kannada

Chikkaballapura

ಸಣ್ಣ ಆಪರೇಷನ್ ಅಂತ ಹೇಳಿ ಲಿಂಗ ಪರಿವರ್ತನೆ ಮಾಡಿಬಿಟ್ರು! ಪ್ರಜ್ಞೆ ಬಂದಾಗ ಯುವತಿಯಾಗಿದ್ದ 20ರ ಯುವಕ!

1 min read

ಆತನಿಗೆ ಇನ್ನೂ 20 ವರ್ಷ. ಸಣ್ಣ ಆಪರೇಷನ್​ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಹೇಳಿದಂತೆ ಶಸ್ತ್ರಚಿಕಿತ್ಸೆನೂ ಆಯ್ತು. ಆಪರೇಷನ್​ ಬಳಿಕ ಪ್ರಜ್ಞೆ ಬಂದಾಗ ಆ ಯುವಕನಿಗೆ ಶಾಕ್​ ಕಾದಿತ್ತು. ಕೆಲವೇ ಗಂಟೆಗಳಲ್ಲಿ ಆತ ಹೆಣ್ಣಾಗಿ ಬದಲಾಗಿ ಹೋಗಿದ್ದ. ಆತನ ಪುರುಷ ಜನನಾಂಗಳನ್ನು ಆಪರೇಷನ್​ ಮೂಲಕ ತೆಗೆದು ಹಾಕಲಾಗಿತ್ತು.

ಒಂದೇ ದಿನದಲ್ಲಿ ಆತ ಹೆಣ್ಣಾಗಿ ಬದಲಾಗಿ ಹೋಗಿದ್ದ. ತನಗೆ ಅರಿವಿಲ್ಲದೆಯೇ ಇಂತಹ ದೊಡ್ಡ ಮೋಸ ಮಾಡಿದಕ್ಕಾಗಿ ಆ ಯುವಕ ಈಗ ಕಣ್ಣೀರಿಡುತ್ತಿದ್ದಾರೆ. ಈ ಅಚ್ಚರಿಯ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ.

ಸಂಜಕ್ ಗ್ರಾಮದ ನಿವಾಸಿ 20 ವರ್ಷದ ಮುಜಾಹಿದ್‌ ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಅದು ಆತನ ಇಚ್ಛೆಗೆ ವಿರುದ್ಧವಾಗಿ. ಮೋಸದಿಂದ ಆತನನ್ನು ಆಸ್ಪತ್ರೆಗೆ ಕರೆತಂದು, ಆತನ ಸಮ್ಮತಿ ಇಲ್ಲದೆಯೇ ಆಪರೇಷನ್​ ಮಾಡಿಸಲಾಗಿದೆಯಂತೆ. ಜೂನ್ 3 ರಂದು ಓಂಪ್ರಕಾಶ್ ಎಂಬಾತ ಮುಜಾಹಿದ್‌ಗೆ ಶಸ್ತ್ರಚಿಕಿತ್ಸೆ ಮಾಡುವಂತೆ ವೈದ್ಯಕೀಯ ಕಾಲೇಜಿನ ವೈದ್ಯರಿಗೆ ಮನವರಿಕೆ ಮಾಡಿದ್ದಾನೆ. ಆತನ ಜನನಾಂಗಗಳನ್ನು ತೆಗೆದುಹಾಕುವುದು ಮತ್ತು ಲಿಂಗ ಬದಲಾವಣೆ ಮಾಡಬೇಕೆಂದು ವೈದ್ಯರಿಗೆ ಹೇಳಿದ್ದಾನೆ. ಆದರೆ ಈ ಬಗ್ಗೆ ಖುದ್ದು ಮುಜಾಹಿದ್‌ ಗೆ ಮಾಹಿತಿ ಇರಲಿಲ್ಲ. ಓಂಪ್ರಕಾಶ್ ಸುಳ್ಳು ಹೇಳಿ ಆಪರೇಷನ್​ ಆಗುವಂತೆ ನೋಡಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ಕಿರುಕುಳ ನೀಡುತ್ತಿದ್ದ ಎಂದು ಮುಜಾಹಿದ್ ಆರೋಪಿಸಿದ್ದಾರೆ. ಮುಜಾಹಿದ್‌ಗೆ ವೈದ್ಯಕೀಯ ಸಮಸ್ಯೆಯಿದ್ದು, ಆಸ್ಪತ್ರೆ ತಪಾಸಣೆಯ ಅಗತ್ಯವಿದೆ ಎಂದು ಸುಳ್ಳು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗೆ ಹೇಳಿ ಅರಿವಳಿಕೆ ನೀಡಿ ಲಿಂಗ ಬದಲಾವಣೆಯ ಆಪರೇಷನ್ ಮಾಡಿಸಿದ್ದಾನಂತೆ.

ನಾನು ಅವನೊಂದಿಗೆ ಬದುಕಬೇಕು ಎಂದು ಓಂಪ್ರಕಾಶ್ ಹೇಳಿದ್ದಾನೆ. ಇನ್ನು ಮುಂದೆ ನನ್ನ ಕುಟುಂಬ ಅಥವಾ ಸಮುದಾಯದಿಂದ ಯಾರೂ ನನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾನಂತೆ. ಮುಜಾಹಿದ್‌ನ ತಂದೆಗೆ ಗುಂಡು ಹಾರಿಸಿ ಕುಟುಂಬದ ಪಾಲಿನ ಜಮೀನನ್ನು ವಶಪಡಿಸಿಕೊಳ್ಳುವುದಾಗಿ ಓಂಪ್ರಕಾಶ್ ಬೆದರಿಕೆ ಹಾಕಿದ್ದಾನಂತೆ. ನಾನು ನಿನ್ನನ್ನು ಪುರುಷನಿಂದ ಹೆಣ್ಣಾಗಿ ಬದಲಾಯಿಸಿದ್ದೇನೆ, ಈಗ ನೀವು ನನ್ನೊಂದಿಗೆ ಬದುಕಬೇಕು, ನಾನು ವಕೀಲರನ್ನು ಸಿದ್ಧಪಡಿಸಿದ್ದೇನೆ. ನಮಗಾಗಿ ನ್ಯಾಯಾಲಯದ ಮದುವೆಯನ್ನು ಸಿದ್ಧಪಡಿಸಿದ್ದೇನೆ ಎಂದು ಹೇಳಿದ್ದಾನಂತೆ.

About The Author

Leave a Reply

Your email address will not be published. Required fields are marked *