ಮಧ್ಯದ ಅಂಗಡಿ ತೆರೆಯಲು ಸಮಯ ಪಾಲನೇಯೇ ಇಲ್ಲ
1 min read
ಮಧ್ಯದ ಅಂಗಡಿ ತೆರೆಯಲು ಸಮಯ ಪಾಲನೇಯೇ ಇಲ್ಲ
ಬೆಳ್ಳಂ ಬೆಳಗ್ಗೆ ಓಪನ್ ಆದ ಬಾರ್
ಅಬಕಾರಿ ನಿಯಮಕ್ಕೆ ಸೆಡ್ಡು ಹೊಡೆದ ಮಾಲೀಕನ ವಿರುದ್ಧ ಎಫ್‌ಐಆರ್
ಬೆಳ್ಳಂ ಬೆಳಗ್ಗೆ ೭ಗಂಟೆಗೆ ನಗರ ವಾಸಿಗಳು ವಾಯು ವಿಹಾರಕ್ಕೆ ತೆರಳುತ್ತಿರುವ ಸಂರ್ಭದಲ್ಲಿ ನಗರದ ಹುಲ್ಲಹಳ್ಳಿ ವೃತ್ತದಲ್ಲಿರುವ ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಕ್ಯಾಶಿಯರ್ ಮಧ್ಯದ ಅಂಗಡಿ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿರುವುದನ್ನು ಗಮನಿಸಿದ ನಗರ ವಾಸಿಗಳು ಅಬಕಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ.
ಸಾರ್ವಜನಿಕರ ದೂರಿನಿಂದ ಎಚ್ಚೆತ್ತ ನಂಜನಗೂಡು ಅಬಕಾರಿ ಇಲಾಖೆ ಉಪನಿರೀಕ್ಷಕ ಅಪ್ಸಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ರಾಜ್ಯ ಅಬಕಾರಿ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬ0ದ ಕೂಡಲೇ ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕ ಹನುಮಂತೇಗೌಡ ಮತ್ತು ಕ್ಯಾಶಿಯರ್ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1966 ಕಾಲಂ 36 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಂಜನಗೂಡು ನಗರದ ಜನಸಂದಣಿ ಪ್ರದೇಶವಾಗಿರುವ ಹುಲ್ಲಹಳ್ಳಿಯ ವೃತ್ತದಲ್ಲಿ ದಿನನಿತ್ಯ ಏಳು ಗಂಟೆಗೆ ಬಾರ್ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು. ನಂಜನಗೂಡು ನಗರದಲ್ಲಿ ಇನ್ನೂ ಸಾಕಷ್ಟು ಬಾರ್ ಅಂಡ್ ರೆಸ್ಟೋರೆಂಟ್ ಅಬಕಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬದಿದೆ. ಪರಿಶೀಲಿಸಿ ಕ್ರಮಕ್ಕೆ ಮುಂದಾಗುವುದಾಗಿ ಅಬಕಾರಿ ಉಪನಿರೀಕ್ಷಕರು ತಿಳಿಸಿದರು.