ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಜಿಲ್ಲಾ ರಕ್ಷಣಾಧಿಕಾರಿ ನಿವಾಸದ ಮುಂದೆಯೇ ಇಲ್ಲ ಬೀದಿ ದೀಪ!

1 min read

ಜಿಲ್ಲಾ ರಕ್ಷಣಾಧಿಕಾರಿ ನಿವಾಸದ ಮುಂದೆಯೇ ಇಲ್ಲ ಬೀದಿ ದೀಪ!

ಜಿಲ್ಲಾ ದಂಡಾಧಿಕಾರಿ ನಿವಾಸದ ಮುಂದೆಯೂ ಆವರಿಸಿದ ಕತ್ತಲು!

ಜಿಲ್ಲೆಯ ಶಕ್ತಿ ಸ್ಥಾನದಲ್ಲಿಯೇ ಉರಿಯುತ್ತಿಲ್ಲ ಬೀದಿ ದೀಪ

ಗುತ್ತಿಗೆದಾರನಿಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ

ಅದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸ, ಅಷ್ಟೇ ಅಲ್ಲ, ಜಿಲ್ಲಾ ದಂಡಾಧಿಕಾರಿಗಳಿದ್ದಾರಲ್ಲ, ಅದೇ ಜಿಲ್ಲಾಧಿಕಾರಿಗಳು. ಅವರ ನಿವಾಸವೂ ಅಲ್ಲಿಯೇ ಇದೆ. ಇನ್ನು ನಗರ ಪ್ರವೇಶ ಮಾಡಲು ಇದೇ ರಸ್ತೆಯಲ್ಲಿ ಬರಬೇಕು. ನಗರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಹೋಗಬೇಕಾದರೂ ಇದೇ ರಸ್ತೆ ಬಳಸಬೇಕು. ಇಂತಹ ಪ್ರಮುಖ ರಸ್ತೆಯಲ್ಲಿಯೇ ಬೀದಿ ದೀಪಗಳು ಉರಿಯುತ್ತಿಲ್ಲ. ಹಾಗಾದರೆ ಯಾವುದು ಆ ರಸ್ತೆ ಅಂತೀರಾ, ನೀವೇ ನೋಡಿ.

ವೀಕ್ಷಕರೇ, ಇದೊಂತರ ದೀಪದ ಕೆಳಗೆ ಕತ್ತಲು ಅಂತಾರಲ್ಲ, ಅದೇ ರೀತಿಯ ಸ್ಟೋರಿ. ಇನ್ನು ಜಿಲ್ಲೆಯ ಮುಖ್ಯಸ್ಥರಾದವರ ಮನೆಗಳ ಮುಂದೆಯೇ ಕಾರ್ಗತ್ತಲು ಆವರಿಸಿದ ಕತೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳ ನಿವಾಸಗಳೇ ಕತ್ತಲಲ್ಲಿ ಮುಳುಗಿದ ವಿಚಿತ್ರ ಸನ್ನಿವೇಶವೂ ಹೌದು. ಅಷ್ಟೇ ಅಲ್ಲ, ನಮ್ಮ ಆಡಳಿತ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ನಿದರ್ಶನವೂ ಆಗಿದೆ.

ಚಿಕ್ಕಬಳ್ಳಾಪುರಕ್ಕೆ ವಾಪಸಂದ್ರದ ಕಡೆಯಿಂದ ಬಂದು ಬಲಕ್ಕೆ ತಿರುಗಿದರೆ ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕಕ್ಕೆ ಹೋಗೋ ದಾರಿ ಇದೆಯಲ್ಲ, ಈ ದಾರಿಯಲ್ಲಿ ಕಳೆದ ಹಲವು ತಿಂಗಳುಗಳಿ0ದಲೂ ಬೀದಿ ದೀಪಗಳು ಉರಿಯುತ್ತಿಲ್ಲ. ನಗರದ ಯಾವ ಬೀದಿಯಲ್ಲಿ ಬೀದಿ ದೀಪ ಉರಿಯದಿದ್ದರೂ ಅದರ ಸಂಕಷ್ಟ ಕೇವಲ ನಾಗರಿಕರಿಗೆ ಮಾತ್ರ. ಆದರೆ ಈ ರಸ್ತೆಯಲ್ಲಿ ಬೀದಿ ದೀಪ ಉರಿಯದಿದ್ದರೆ, ಅದರ ಸಂಕಷ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ತಟ್ಟುತ್ತದೆ. ಯಾಕೆಂದರೆ ಜಿಲ್ಲಾಧಿಕಾರಿಯಾಗಿರುವ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿರುವ ಕುಶಲ್ ಚೌಕ್ಸೆ ಇಬ್ಬರೂ ಅಧಿಕಾರಿಗಳ ನಿವಾಸ ಇರೋದು ಇದೇ ರಸ್ತೆಯಲ್ಲಿಯೇ.

ಇಲ್ಲಿ ಕಾಣಿಸ್ತಾ ಇದೆಯಲ್ಲಾ ಪಿ.ಎನ್. ರವೀಂದ್ರ ಜಿಲ್ಲಾ ದಂಡಾಧಿಕಾರಿಗಳು ಅಂತ, ಇದೇ ನಿವಾಸದ ಮುಂದೆ ಕಳೆದ ಹಲವು ತಿಂಗಳುಗಳಿ0ದ ಬೀದಿ ದೀಪ ಉರಿಯುತ್ತಿಲ್ಲವಂತೆ. ಇದನ್ನೇ ಯಾಕೆ ತೋರಿಸುತ್ತಿದ್ದೇನೆ ಅಂತೀರಾ, ಅದಕ್ಕೂ ಕಾರಣ ಇದೆ. ಇದೇ ರವೀಂದ್ರ ಅವರು ಕಳೆದ ಒಂದೂವರೆ ವರ್ಷದಿಂದಲೂ ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತಾಧಿಕಾರಿಯಾಗಿದ್ದರು. ಕಾರಣ ಆಗ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರೇ ಇರಲಿಲ್ಲ. ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಾಗಿ, ತಮ್ಮದೇ ನಿವಾಸದ ಮುಂದೆ ಬೀದಿ ದೀಪ ಉರಿಸಲು ಪಾಪ ನಮ್ಮ ಜಿಲ್ಲಾಧಿಕಾರಿಗಳಿಗೂ ಸಾಧ್ಯವಾಗಿಲ್ಲ ಎಂದರೆ ನಗರಸಭೆಯಲ್ಲಿ ಬೀದಿ ದೀಪಗಳ ದುರಸ್ತಿಯ ಗುತ್ತಿಗದೆ ಪಡೆದಿರುವ ಗುತ್ತಿಗೆದಾರರ ಇನ್ನೆಷ್ಟು ಪ್ರಭಾವ ಶಾಲೆ ಎಂಬುದನ್ನು ನಾನು ಹೇಳುವುದು ಬೇಡ, ನೀವೇ ಯೋಚಿಸಿ.

ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಬೀದಿ ದೀಪ ಉರಿಸಲು ಸಾಧ್ಯವಾಗಿಲ್ಲ. ಆದರೆ ಈಗ ನಗರಸಭೆಗೆ ಆಡಳಿತ ಮಂಡಳಿ ಅಂತ ಬಂದಿದೆ. ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರ ಹಿಡಿದು ಆಗಲೇ ಎರಡು ತಿಂಗಳು ಸಮೀಪಿಸುತ್ತಿದೆ. ಆದರೂ ಈ ಉಭಯ ಅಧಿಕಾರಿಗಳ ನಿವಾಸ ಮುಂದೆ ಈವರೆಗೂ ಬೀದಿ ದೀಪ ಉರಿದಿಲ್ಲ. ಇದಕ್ಕೆ ಕಾರಣ ಏನು ಅನ್ನೋದು ಪಾಪ ನಗರಸಭಾ ಸದಸ್ಯರಿಗೇ ಗೊತ್ತಿಲ್ಲ. ಆದರೆ ಪ್ರತಿ ತಿಂಗಳು ಬೀದಿ ದೀಪ ದುರಸ್ತಿ ಮಾಡಲು ಗುತ್ತಿಗೆ ಪಡೆದಿದ್ದಾನಲ್ಲ, ಗುತ್ತಿಗೆದಾರ. ಆತನ ಖಾತೆಗೆ ಮಾತ್ರ ಲಕ್ಷಾಂತರ ರುಪಾಯಿಯನ್ನು ವರ್ಗಾವಣೆ ಮಾಡಲಾಗುತತಿದೆಯಂತೆ. ಇದನ್ನೂ ನಾನು ಹೇಳುತ್ತಿಲ್ಲ. ನಗರದ ೨೦ನೇ ವಾರ್ಡಿನ ನಗರಸಭಾ ಸದಸ್ಯರಿದ್ದಾರಲ್ಲ, ನರಸಿಂಹಮೂರ್ತಿ, ಅವರೇ ಹೇಳಿದ್ದಾರೆ ಕೇಳಿ.

ಕೇಳಿದ್ರಲ್ಲಾ, ನಗರಸಭಾ ಸದಸ್ಯರು ಹೇಳಿದ ವಿಚಾರವನ್ನ. ಅಲ್ಲಾ ಕಣ್ರೀ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸಗಳ ಮುಂದೆ ಕೆಟ್ಟುಹೋದ ಬೀದಿ ದೀಪಗಳನ್ನು ತಿಂಗಳುಗಳೇ ಕಳೆದರೂ ದುರಸ್ತಿ ಮಾಡದ ಗುತ್ತಿಗೆದಾರ, ನಗರದ ಕೊಳಚೆ ಪ್ರದೇಶಗಳು, ಸಾಮಾನ್ಯ ಜನರು ವಾಸಿಸೋ ಪ್ರದೇಶದಲ್ಲಿ ಹದಗೆಟ್ಟ ಬೀದಿ ದೀಪಗಳ ಗುರಸ್ತಿ ಮಾಡುತ್ತಾನೆಯೇ, ಇದು ಎಲ್ಲರನ್ನೂ ಕಾಡೋ ಪ್ರಶ್ನೆ. ನಗರಸಭೆ ಅಧ್ಯಕ್ಷರು ತುಂಬಾ ಉತ್ಸಾಹಿಗಳಾಗಿದ್ದಾರೆ. ಪ್ರತಿ ವಿಚಾರಕ್ಕೂ ಪ್ರಿತ್ಕಿರೆ ನೀಡ್ತಾರೆ, ಹಾಗಾಗಿ ಅಧ್ಯಕ್ಷರೇ, ನಗರದ ಇತರೆ ಪ್ರದೇಶಗಳ ಕತೆ ಇರಲಿ, ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ಬೀದಿ ದೀಪ ದುರಸ್ತಿ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಿರಾ.

ತಿಂಗಳಾನುಗಟ್ಟಲೆ ಬೀದಿ ದೀಪಗಳನ್ನು ದುರಸ್ತಿ ಮಾಡದೆ, ನಾಗರಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಅಷ್ಟೇ ಅಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವಿರಷ್ಠಾಧಿಕಾರಿಗಳ ನಿವಾಸದ ಮುಂದೆ ಹದಗೆಟ್ಟಿರುವ ಬೀದಿದಿಗಳ ದುರಸ್ತಿ ಸಮರೋಪಾದಿಯಲ್ಲಿ ನಡೆಸಬೇಕಿದೆ. ಇನ್ನು ಹದಗೆಟ್ಟ ಬೀದಿ ದೀಪಗಳನ್ನು ಸಕಾಲಕ್ಕೆ ದುರಸ್ತಿ ಮಾಡದೆ, ಗುತ್ತಿಗೆ ಹಣ ಪಡೆಯುತ್ತಿರೋ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಜರಿಗಿಸಲು ನಗರಸಭೆ ಅಧ್ಯಕ್ಷರು ಮುಂದಾಗಲಿದ್ದಾರಾ ಕಾದು ನೋಡೋಣ.

About The Author

Leave a Reply

Your email address will not be published. Required fields are marked *