ರೇಣುಕಾಸ್ವಾಮಿಯ ಮರಣೋತ್ತರ ವರದಿ ತಿರುಚಲು ಹಣದ ಆಮಿಷವೊಡ್ಡಿದ್ದು ನನಗೆ ಗೊತ್ತಿಲ್ಲ : ಗುಂಡೂರಾವ್
1 min read ರೇಣುಕಾಸ್ವಾಮಿಯ ಮರಣೋತ್ತರ ವರದಿ ತಿರುಚಲು ಹಣದ ಆಮಿಷವೊಡ್ಡಿದ್ದರು ಎನ್ನಲಾದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಂತಹದ್ದೇನಾದರೂ ಇದ್ದರೆ ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿಯನ್ನು ಹೀನಾಯವಾಗಿ ಕೊಲೆ ಮಾಡಲಾಗಿದೆ.
ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ.
ತಪಿತಸ್ಥರಿಗೆ ಶಿಕ್ಷೆಯಾಗಬೇಕು, ಯಾವುದೇ ಆಗಲಿ ಅತಿರೇಕಕ್ಕೆ ಹೋದಾಗ ಅಸಹಿಷ್ಣತೆ ಉಂಟಾಗುತ್ತದೆ. ನಾನು ಎಂಬ ಅಹಂ ಬಿಡಬೇಕು. ನಮ್ಮಿಂದಲೇ ಎಲ್ಲಾ ಎಂಬ ಮನೋಭಾವನೆ ಬದಲಾಗಬೇಕು ಎಂದರು.ಈ ಪ್ರಕರಣದಲ್ಲಿ ನಾವ್ಯಾರು ಮಧ್ಯಪ್ರವೇಶ ಮಾಡುವುದಿಲ್ಲ. ಪೊಲೀಸರು ಕೂಲಂಕುಶವಾಗಿ ಸಾಕ್ಷಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ ಎಂದರು.
ರೇಣುಕಾಸ್ವಾಮಿ ಅವರು ಚಿತ್ರಹಿಂಸೆ, ರಕ್ತಸ್ರಾವದಿಂದ ಆಘಾತಗೊಳಗಾಗಿ ಮೃತಪಟ್ಟಿದ್ದಾರೆಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ರೇಣುಕಾಸ್ವಾಮಿಯವರ ದೇಹದ ಮೇಲೆ 15ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಅವರ ತಲೆ, ಹೊಟ್ಟೆ, ಎದೆ ಇತರ ಭಾಗಗಳಲ್ಲಿ ದೊಣ್ಣೆ, ಚರ್ಮದ ಬೆಲ್್ಟ ಹಾಗೂ ಹಗ್ಗದಿಂದ ಹೊಡೆದಿರುವ ಗುರುತುಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತವಾಗಿ ಪೊಲೀಸರು ಹಗಲಿರುಳು ತನಿಖೆ ನಡೆಸುತ್ತಿದ್ದಾರೆಂದು ಪ್ರತಿಕ್ರಿಯಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕಡಿಮೆ ಇದೆ. ಕೇಂದ್ರ ಸರ್ಕಾರ ತನಗೆ ಬರುವ ತೆರಿಗೆ ಸುಂಕವನ್ನ ಇಳಿಸದೆ ಕೇವಲ ನಮ್ಮನ್ನ ಮಾತ್ರ ತೆರಿಗೆ ಇಳಿಸಿ ಎಂದರೆ ಹೇಗೆ.
ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಅನಿವಾರ್ಯವಾಗಿದೆ. ಅದಕ್ಕಾಗಿ ಸಂಪನ್ಮೂಲ ಕ್ರೂಢೀಕರಣ ಮಾಡುತ್ತಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಗ್ಯಾರಂಟಿಗಳಿಗಾಗಿ ಬೆಲೆ ಏರಿಸಿದ್ದೇವೆ ಎಂಬುವುದು ಸುಳ್ಳು. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ, ಪರಿಷ್ಕರಣೆ ಮಾಡುವುದಾಗಲೀ ಇಲ್ಲ. ಅಧ್ಯಯನ ನಡೆಸಿ ಕೆಲ ಬದಲಾವಣೆ ಮಾಡಬಹುದು ಎಂದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಽಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇದಕ್ಕೆ ಸಾಕಷ್ಟು ಕಡಿವಾಣ ಹಾಕಲಾಗಿದೆ. ಹೆಣ್ಣು ಭ್ರೂಣ ಹತ್ಯೆ ಸಂಪೂರ್ಣ ನಿಂತಿದೆ ಎಂದು ಹೇಳುವುದಿಲ್ಲ. ನಮ್ಮ ಅಽಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಬೆಳಗಾವಿ, ಮಂಡ್ಯ ಸೇರಿದಂತೆ ಹಲವಡೆ ದಾಳಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸುತ್ತೇನೆ. ಮೈಸೂರಿನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.