ದೇವನಹಳ್ಳಿ ತಾಲೂಕಿನಲ್ಲಿವೆ 55 ಶಿಥಿಲಾವಸ್ಥೆಯ ಸರ್ಕಾರಿ ಶಾಲೆಗಳು
1 min readಸೋರುತ್ತಿದೆ ಸರ್ಕಾರಿ ಶಾಲಾ ಮೇಲ್ಚಾವಣೆ!
ಆಹಾರ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸೂರಿಲ್ಲ
ದೇವನಹಳ್ಳಿ ತಾಲೂಕಿನಲ್ಲಿವೆ 55 ಶಿಥಿಲಾವಸ್ಥೆಯ ಸರ್ಕಾರಿ ಶಾಲೆಗಳು
ಶಿಕ್ಷಣಕ್ಕೆ ಒತ್ತು ನೀಡದ ಸರ್ಕಾರದ ಬಗ್ಗೆ ಸಾರ್ವಜನಿಕರ ಆಕ್ರೋಶ
ಮಳೆ ಬಂದರೆ ಸೋರುವ ಮೇಲಪ್ಚಾವಣಿ, ಒಡೆದು ಹೋಗಿರುವ ಚಾವಣಿಯ ಶೀಟ್‌ಗಳ ನಡುವೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಮಕ್ಕಳಿಗೆ ಸೂಕ್ತ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿಲ್ಲ. ದೇವನಹಳ್ಳಿ ತಾಲೂಕಿನಾದ್ಯಂತ ಇಂತಹ ಶಿಥಿಲಾವಸ್ಥೆಯಲ್ಲಿರುವ 55 ಶಾಲೆಗಳಿದ್ದು, ವಿಜಯಪುರ ಹೋಬಳಿಯ ಅನೇಕ ಶಾಲೆಗಳು ಸೋರವ ಸ್ಥಿತಿಯಲ್ಲಿಯೇ ಇವೆ.
ಮಳೆ ಬಂದರೆ ಸೋರುವ ಮೇಲಪ್ಚಾವಣಿ, ಒಡೆದು ಹೋಗಿರುವ ಚಾವಣಿಯ ಶೀಟ್‌ಗಳ ನಡುವೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಮಕ್ಕಳಿಗೆ ಸೂಕ್ತ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿಲ್ಲ. ದೇವನಹಳ್ಳಿ ತಾಲೂಕಿನಾದ್ಯಂತ ಇಂತಹ ಶಿಥಿಲಾವಸ್ಥೆಯಲ್ಲಿರುವ 55 ಶಾಲೆಗಳಿದ್ದು, ವಿಜಯಪುರ ಹೋಬಳಿಯ ಅನೇಕ ಶಾಲೆಗಳು ಸೋರವ ಸ್ಥಿತಿಯಲ್ಲಿಯೇ ಇವೆ. ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿದ್ದರೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತವಾದ ಕಟ್ಟಡವಿಲ್ಲ.
ಹಿಂದೆ ನೂರಾರು ಮಂದಿ ವಿದ್ಯಾರ್ಥಿಗಳು ಓದುತ್ತಿದ್ದ ಬಿಜ್ಜವಾರ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 56 ಮಂದಿ ವಿದ್ಯಾರ್ಥಿಗಳಿದ್ದಾರೆ. ದಿನೇ ದಿನೇ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದೆ. ಮೂವರು ಶಿಕ್ಷಕರಿದ್ದಾರೆ. ಇಲ್ಲಿರುವ 7 ಕೊಠಡಿಗಳ ಪೈಕಿ 4 ಕೊಠಡಿಗಳಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಕಲಿಯುತ್ತಿರುವ ಕೊಠಡಿಗಳ ಪೈಕಿ 2 ಕೊಠಡಿಗಳು ಸೋರುತ್ತಿವೆ. ಉಳಿದ ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲ.
1974 ರಲ್ಲಿ ನಿರ್ಮಾಣವಾಗಿರುವ ಈ ಶಾಲೆಯ ಕಟ್ಟಡ ಶಿಥಿಲಾವಸ್ತೆ ತಲುಪಿದೆ. ಹಳೆಯ ಕಟ್ಟಡವನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಎಷ್ಟು ಮನವಿಗಳು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯ ರಾಮಸ್ವಾಮಿ ದೂರಿದ್ದಾರೆ. ವಿಜಯಪುರ ಹೋಬಳಿಯ ಪಿ ರಂಗನಾಥಪುರ, ಏ ರಂಗನಾಥಪುರ ಹಾಗೂ ಚಿನುವಂಡನಹಳ್ಳಿ ಸರ್ಕಾರಿ ಶಾಲೆಗಳು ಸೋರುತ್ತಿರುವ ಶಾಲೆಗಳಾಗಿವೆ.
ಇಲ್ಲಿ ಶಾಲಾ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದ್ದು, ಸುಸ್ಸಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟರೆ ದಾಖಲಾತಿಗಳು ಹೆಚ್ಚಿಸಬಹುದೆಂದು ಶಿಕ್ಷಕರು ಮತ್ತು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ತಾಲೂಕು ಶಿಕ್ಷಣಾಧಿಕಾರಿ. ಸುಮಾ ದೇವಿ ಮಾತನಾಡಿ, ಶಾಲೆಗಳಿಗೆ ವಾರ್ಷಿಕವಾಗಿ 25 ಸಾವಿರ ಹಣ ನೀಡಲಾಗಿದೆ. ರಿಪೇರಿ ಖರ್ಚಿಗೆ ಶಾಲಾ ಖರ್ಚಿಗೆ ಬಳಸಿಕೊಳ್ಳಬಹುದು. ಮೇಲಾಧಿಕಾರಿಗಳಿಗೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದೇವೆ, ಪಂಚಾಯಿತಿ ಮುಖಾಂತರ ರಿಪೇರಿ ಮಾಡಿಸಿಕೊಳ್ಳಲು ಹೇಳಲಾಗಿದೆ ಎಂದರು. ಕಳೆದ ಸಾಲಿನಲ್ಲಿ ೨೫ ಶಾಲೆಗಳನ್ನು ರಿಪೇರಿ ಮಾಡಿಸಲಾಗಿದೆ. ಇನ್ನುಳಿದ ಶಾಲೆಗಳನ್ನು ಈ ವರ್ಷದಲ್ಲಿ ರಿಪೇರಿ ಮಾಡಿಸಲಾಗುವುದು ಎಂದರು.