ಮಳೆಗಾಗಿ ಹಳೇ ಸಂಪ್ರದಾಯದ ಮೊರೆ ಹೋದ ಗ್ರಾಮಸ್ಥರು
1 min readಮಳೆಗಾಗಿ ಹಳೇ ಸಂಪ್ರದಾಯದ ಮೊರೆ ಹೋದ ಗ್ರಾಮಸ್ಥರು
ಮಕ್ಕಳ ಮದುವೆ ಮಾಡಿ ಮಳೆಗಾಗಿ ರೈತರ ಪ್ರಾರ್ಥನೆ
ಶಾಪಗ್ರಸ್ಥ ಜಿಲ್ಲೆಯಲ್ಲಿ ಮತ್ತೆ ವಕ್ಕರಿಸಿದ ಬರ
ಅದು ಸತತ ಬರಕ್ಕೆ ತುತ್ತಾಗೋ ಶಾಪಗ್ರಸ್ಥ ಜಿಲ್ಲೆ. ಬಹುತೇಕ ಬರದಲ್ಲೆ ಕಾಲ ಕಳೆಯೋ ಇಲ್ಲಿನ ಜನ ಬಿತ್ತಿದ ಬೆಳೆ ಮಳೆಯಿಲ್ಲದೆ ಒಣಗುತ್ತಿರುವುದನ್ನು ಕಂಡು ತಡೆಯಲಾರದೆ ಮಳೆಗಾಗಿ ಹಳೇ ಸಂಪ್ರದಾಯಕ್ಕೆ ಮೊರೆ ಹೋಗಿದ್ದಾರೆ. ಸಾಂಪ್ರಾಯಿಕವಾಗಿ ಮಕ್ಕಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಘಟನೆ ಬೆರಗು ಮೂಡಿಸುವಂತಿತ್ತು. ಹಾಗಾದರೆ ಈ ವಿಚಿತ್ರ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ, ಈ ಸ್ಟೋರಿ ನೋಡಿ.
ಶಾಶ್ವತ ನೀರಾವರಿ ವಿಚಾರದಲ್ಲಿ ಚಿಕ್ಕಬಳ್ಳಾಪುರ ಸದಾ ಶಾಪಕ್ಕೆ ಗುರಿಯಾಗಿದೆ. ಹನಿ ನೀರಿಗಾಗಿ ಸಾವಿರಾರು ಅಡಿ ಆಳ ಕೊರೆದರೂ ಶುದ್ಧ ನೀರು ಸಿಗೋದೇ ಕಷ್ಟ.. ಇಂತಹ ಸ್ಥಿತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಬರ ಕಾಡುತ್ತಿದೆ. ಮುಂಗಾರಿನಲ್ಲಿ ಚುರುಕಿನಿಂದ ಸುರಿದ ಮಳೆ ಬಿತ್ತನೆ ನಂತರ ಕಾಣೆಯಾಗಿದೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಆಕಾಶದ ಕಡೆ ಮುಖ ಮಾಡುವಂತಾಗಿದೆ.
ಶ್ರಮಜೀವಗಳ ನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿದ್ದರೆ ಸಮೃದ್ಧ ಬೆಳೆ ಬೆಳೆಯುವಲ್ಲಿ ಇಲ್ಲಿನ ರೈತರು ನಿಸ್ಸೀಮರು. ಆದರೆ ಈ ಭಾರಿ ಮಳೆ ಕೈಕೊಟ್ಡ ಕಾರಣ, ಭೂಮಿಗೆ ಹಾಕಿದ ಬೆಳೆ ಕೈ ಸೇರೋ ಭರವಸೆ ಇಂಗಿದೆ. ಇದರಿಂದ ಮತ್ತೆ ಸಾಲದ ಹೊರೆ ಹೆಗಲೇರಲಿದೆ ಎಂಬ ಆತಂಕದಲ್ಲಿ ರೈತರಿದ್ದು, ಮಳೆರಾಯನಿಗಾಗಿ ನಾನಾ ವಿಧದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಎಲೆಹಳ್ಳಿಯಲ್ಲಿ ಹಳೆ ಪದ್ದತಿಯಂತೆ ಮಕ್ಕಳ ಮದುವೆ ಮಾಡಿರುವ ಘಟನೆ ಎಲ್ಲರ ಗಮನ ಸೆಳೆಯುತ್ತಿದೆ.
ರೂಢಿಯಂತೆ ಮಳೆ ಬರದ ವೇಳೆ ಎಲೆಹಳ್ಳಿ ಗ್ರಾಮಸ್ಥರು ಸಗಣಿಯಲ್ಲಿ ಮಳೆರಾಯನ ಆಕೃತಿ ಮಾಡಿ, ಅದಕ್ಕೆ 21 ದಿನ ಪೂಜೆ ಮಾಡಿ ೨೧ನೇ ದಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಹೆಣ್ಣು-ಗಂಡಿನ ವೇಶ ಹಾಕಿ, ಅವರಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡುತ್ತಾರೆ. ಅಷ್ಟೇ ಅಲ್ಲ, ಊಟೋಪಚಾರವನ್ನೂ ಶಾಸ್ತೊಕ್ತವಾಗಿ ನಡೆಸಲಾಗುತ್ತದೆ. ಹೀಗೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ ಗ್ರಾಮಸ್ಥರದು. ಎಲೆಹಳ್ಳಿ ಗ್ರಾಮಸ್ಥರು ಮಳೆ ಬರದ ಸಮಯದಲ್ಲಿ ಮಕ್ಕಳ ಮದುವೆ ಮಾಡಿದಾಗಲೆಲ್ಲ ಮಳೆ ಬಂದಿದೆಯ0ತೆ. ಭೂಮಿಯನ್ನೇ ನಂಬಿ ಬೆಳೆ ಬೆಳೆದು ಬದುಕುತ್ತಿರುವ ರೈತರಿಗೆ ಮಳೆ ಅಸರೆಯಾಗಲಿ ಎಂಬುದು ಶ್ರಮಜೀವಿಗಳ ಪ್ರಾರ್ಥನೆಯಾಗಿದೆ.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ0ತೆ ಪೂರ್ವಿಕರಿಂದ ರೂಢಿಸಿಕೊಂಡು ಬಂದ ಆಚರಣೆಗಳನ್ನ ಚಾಚು ತಪ್ಪದೆ ಮಾಡಿದರೆ ಫಲ ಗ್ಯಾರಂಟಿ ಎಂಬ0ತೆ ಎಲೆಹಳ್ಳಿ ಗ್ರಾಮಸ್ಥರು ಹಳೇ ಸಂಪ್ರದಾಯಕ್ಕೆ ಮೊರೆ ಹೋಗಿದ್ದಾರೆ. ಅವರ ಭರವಸೆ ಈಡೇರಲಿ, ವರುಣ ಕುಣಿಸಲಿ, ಆ ಮೂಲಕ ರೈತರು ಸಂತುಷ್ಟವಾಗಿರಲಿ ಎಂದು ಹಾರೈಸೋಣ ಅಲ್ಲವೇ.