ಮೂಲ ಸೌಲಧ್ಯಗಳಿಲ್ಲದೆ ಆತಂಕದಲ್ಲಿ ಪಟ್ಟಣ ವಾಸಿಗಳು
1 min readಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳದ್ದೆ ಸವಾಲು
ಮೂಲ ಸೌಲಧ್ಯಗಳಿಲ್ಲದೆ ಆತಂಕದಲ್ಲಿ ಪಟ್ಟಣ ವಾಸಿಗಳು
ಬಾಗೇಪಲ್ಲಿಯಲ್ಲಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಲ್ಲದೆ ಪಟ್ಟಣದ ನಿವಾಸಿಗಳು ಬಹಳಷ್ಟು ಸಮಸ್ಯೆಗಳ ಸುಳಿಯಲ್ಲಿ ದಿನದೂಡಿದ್ದಾರೆ. ಇತ್ತೀಚೆಗೆ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಅವರ ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ.
ಬಾಗೇಪಲ್ಲಿ ಪಟ್ಟಣದ 21, 23ನೇ ವಾರ್ಡ್ ಸೇರಿದಂತೆ ಹಲವು ವಾರ್ಡ್ ಗಳ ಮೂಲಕ ಹರಿಯುವ ಪ್ರಮುಖ ಯರ್ರಕಾಲುವೆ ಮಾನಸ ಆಸ್ಪತ್ರೆ ಮುಖ್ಯ ರಸ್ತೆಯಿಂದ ಸ್ಮಶಾನ ರಸ್ತೆಯವರೆಗೆ ಹಾದು ಹೋಗಿದೆ. ಈ ಕಾಲುವೆ ಸಂಪೂರ್ಣ ಗಿಡಗಂಟಿಗಳಿ0ದ ಆವೃತವಾಗಿದ್ದು, ಕೊಳಚೆ ನೀರು ಮಡುಗಟ್ಟಿದೆ. ಕಾಲುವೆಯ ತುಂಬೆಲ್ಲ ಪ್ಲಾಸ್ಟಿಕ್ ತ್ಯಾಜ್ಯ ತುಂಬಿದ್ದು, ಸಮರ್ಪಕವಾಗಿ ಚರಂಡಿಯ ನೀರು ಹರಿಯುತ್ತಿಲ್ಲ, ಅಲ್ಲಿನ ನಿವಾಸಿಗಳ ವಸತಿ ಪ್ರದೇಶಗಳಿಂದ ಬರುವ ತ್ಯಾಜ್ಯ ನೀರು, ದುರ್ನಾದಿಂದ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಪುರಸಭೆ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಮಾತನಾಡಿ, ಪುರಸಭೆ ನಿರ್ಲಕ್ಷಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಯರ್ರಕಾಲುವೆ ಸಮೀಪದಲ್ಲಿರುವ ಕೊಳವೆ ಬಾವಿಗೆ ಚರಂಡಿ ನೀರು ಸೇರುವ ಭೀತಿ ನಾಗರೀಕರು ಅನುಭವಿಸುತ್ತಿರುವ ನೋವಿನ ಬಗ್ಗೆ ತಿಳಿಸಿದರು.
ಅಲ್ಲದೆ ಪುರಸಭೆ ಅಧಿಕಾರಿಗಳು ಗಮನಹರಿಸಿ ಚರಂಡಿ, ಬೀದಿ ದೀಪ, ಕುಡಿಯುವ ನೀರಿನಂತಹ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದರು.