ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರ ಸರ್ಕಾರ
1 min readರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರ ಸರ್ಕಾರ
ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಪ್ರತಿಪಾದನೆ
ಬಡವರ ಬಳಿಗೆ ಆಡಳಿತ ಆಗಮಿಸಿ, ಸಮಸ್ಯೆ ಆಲಿಸಿ ಪರಿಹರಿಸುವ ಮೂಲಕ ಅವರ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರಕಾರ ಶ್ರಮಿಸುತ್ತಿದೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಹೇಳಿದರು. ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಸಮೀಪ ಆಯೋಜಿಸಿದ್ದ ಜನಸ್ಪಂದನಾ ಸ`ೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಮಹಿಳೆಯರ, ಬಡವರ ಪರ ವಂಚಿತ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ. ಇದರ ಭಾಗವಾಗಿ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಮೀನು ವಿವಾದಗಳನ್ನು ಪರಿಹರಿಸಲಾಗುತ್ತಿದೆ. ಈ ಮೂಲಕ ಪೋಡಿ ಮುಕ್ತ ಗ್ರಾಮ ಪಂಚಾಯತಿಯನ್ನಾಗಿಸಲಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಮನಿಷಾ ಮಹೇಶ್ ಎಸ್ ಪತ್ರಿ, ಜನಸ್ಪಂದನಾ ಕಾರ್ಯಕ್ರಮ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಉತ್ತಮ ಮಾರ್ಗವಾಗಿದೆ. ಜೊತೆಗೆ ನಾಗರೀಕರಿಗೆ ಎಲ್ಲ ಇಲಖೆಗಳಿಗೆ ಸಂಬ0ಧಪಟ್ಟ ಸಮಸ್ಯೆಗಳನ್ನು ಪರಿಹರಿಸಿ, ಸ್ಥಳದಲ್ಲೆ ಸರಕಾರದ ಸೌಲಭ್ಯ ದೊರೆಯುವಂತೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಡಿಪಿಒ ರಾಮಚಂದ್ರಪ್ಪ ನೇತೃತ್ವದಲ್ಲಿ 12 ಮಂದಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಹಮ್ಮಿಕೊಳ್ಳಲಾಯಿತು.ಈ ವೇಳೆ ತಹಶೀಲ್ದಾರ್ ಸೇರಿದಂತೆ ಹಲವಾರು ಮಂದಿ ಮಡಿಲು ತುಂಬಿದರು. 227 ಅರ್ಜಿ, ಒಂದೂವರೆ ಸಾವಿರಕ್ಕೂ ಹೆಚ್ಚುಲಾನುಭಾವಿಗಳಿಗೆ ಮಂಜುರಾತಿ ಮತ್ತಿತರ ಪ್ರಮಾಣಪತ್ರಗಳ ವಿತರಣೆ ಮಾಡಲಾಯಿತು. ಕಂದಾಯ ಇಲಾಖೆಗೆ ಸಂಬ0ಧಿಸಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಗೃಹಲಕ್ಷ್ಮೀ, ಅನ್ನಭಾಗ್ಯ ಪಡಿತರ ಕಾರ್ಡ್, ಜಮೀನು ಸಮಸ್ಯೆ, ಜಮೀನಿಗೆ ರಸ್ತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ 227 ಅರ್ಜಿಗಳು ಸಲ್ಲಿಕೆಯಾಗಿವೆ.
ಕಂದಾಯ ಇಲಾಖೆ ವ್ಯಾಪ್ತಿಯ 400 ಪೌತಿ ಖಾತೆ, ೪೫೦ ಪಿಂಚಣಿ ಸೇರಿದಂತೆ ಭಾಗ್ಯಲಕ್ಷ್ಮಿ ಬಾಂಡ್ , 90 ಮಂದಿಗೆ ಹಕ್ಕು ಪತ್ರ, ಮನೆ ಮಂಜುರಾತಿ ಕಾರ್ಯಾದೇಶ ಪತ್ರ, ಆಕಸ್ಮಿಕವಾಗಿ ಮರಣ ಹೊಂದಿದವರ ಕುಟುಂಬಸ್ಥರಿಗೆ ಪರಿಹಾರದ ಚೆಕ್, ತಾಲೂಕು ಪಂಚಾಯತಿಯಿ0ದ ನರೇಗಾ ಜಾಬ್ ಕಾರ್ಡ್, ಎನ್‌ಆರ್‌ಎಲ್‌ಎಮ್ ಯೋಜನೆ ಸೇರಿದಂತೆ ನಾನಾ ಯೋಜನೆಗಳ ೧,೫೦೦ ಕ್ಕೂ ಹೆಚ್ಚುಲಾನುಭಾವಿಗಳಿಗೆ ಸೌಲಭ್ಯಗಳ ಆದೇಶ ಪತ್ರ ವಿತರಿಸಲಾಯಿತು.
ಜಿಲ್ಲೆ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆ ವಿಕಲಚೇತನರ ಪುನರ್ವಸತಿ ಕೇಂದ್ರ ಸಹಯೋಗದೊಂದಿಗೆ ಅರ್ಹ ವಿಕಲಚೇತರಿಗೆ ವಾಕರ್, ವಿದ್ಯಾರ್ಥಿಗೆ ಮೊಬೈಲ್, ಶ್ರವಣಸಾಧನ , ಊರುಗೋಲು, ವೈಟ್ ಕ್ಯಾನ್ ಮತ್ತಿತರ ಸಾಧಾನ ಸಲಕರಣೆ ವಿತರಿಸಲಾಯಿತು. ಈ ವೇಳೆ ಜಿಪಂ ಮಾಜಿ ಸದಸ್ಯ ನರಸಿಂಹಪ್ಪ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಇಒ ಜಿ.ವಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್ ಸತ್ಯನಾರಾಯಣರೆಡ್ಡಿ, ಸಿಡಿಪಿಒ ರಾಮಚಂದ್ರ ಇದ್ದರು.