ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಗಾರರ ಸಿಡಿದ ಕಿಚ್ಚು
1 min readಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗರ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಗಾರರ ಸಿಡಿದ ಕಿಚ್ಚು
ಸುಪ್ರೀ0 ಕೋರ್ಟ್ ಆದೇಶ ಹೊರಡಿಸಿರುವ ಒಳಮೀಸಲಾತಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಲು ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿ, ತೆಲಂಗಾಣ ರಾಜ್ಯ ಒಳ ಮೀಸಲಾತಿ ಜಾರಿ ಮಾಡಿದರೂ ಅದೇ ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕದಲ್ಲಿ ಜಾರಿ ಮಾಡದೆ ಕಾಲಹರಣ ಮಾಡಲು ಕಾರಣವೇನು ಎಂದು ಪ್ರಶ್ನಿಸಿ ಇಂದು ದಲಿತ ಸಂಘಟನೆಗಳಿ0ದ ಜಿಲ್ಲಾಡಳಿತ `ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸುಪ್ರೀಂ ಕೋರ್ಟಿನ ಆದೇಶವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡದೆ ನಿರ್ಲಕ್ಷ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವ ತೆಲಂಗಾಣ ರಾಜ್ಯದಲ್ಲಿ ಮಾತ್ರ ಒಳಮೀಸಲಾತಿ ಜಾರಿ ಮಾಡಿದೆ. ಇವರೇಕೆ ಮಾಡುತ್ತಿಲ್ಲ ಯಾರಿಗೆ `ಭಯ ಬಿದ್ದು ಸುಮ್ಮನಿದ್ದಾರೆ ಗೃಹ ಸಚಿವರ ಕೈವಾಡ ಇದರಲ್ಲಿದೆಯಾ ಎಂದು ಮಾದಿಗ ಸಮುದಾಯದ ಮುಖಂಡರು ಪ್ರಶ್ನಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ಮಾಡಿ, ಮಳೆ, ಚಳಿ, ಪೊಲೀಸರ ಲಾಟಿಗೂ ಜಗ್ಗಲ್ಲ ಎಂದು ಘೋಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮುಖಂಡ ಮುನಿಕೃಷ್ಣ, ಶತಮಾನಗಳಿಂದ ಸಮುದಾಯ ಶೋಷಣೆಗೆ ಒಳಗಾಗಿದೆ. ಕೂಡಲೆ ಸುಪ್ರೀಂ ಕೋರ್ಟ್ ಆದೇಶ ಜಾರಿ ಮಾಡಬೇಕು, ಇನ್ನೂ ನಿರ್ಲಕ್ಷ ವಹಿಸಿದರೆ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಎಚ್ಚರಿಸಿದರು.
ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೆರಣೆ ಖಂಡಿಸಿದ ಪ್ರತಿಭಟನಾಕಾರರು ಮಾದಿಗರ ಮಾನವನ್ನ ಕೆಣಕಬೇಡಿ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿ ಮನೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಕೈವಾರ ಅಮರ್ ಎಚ್ಚರಿಕೆ ನೀಡಿದರು.