ಪ್ರತಿಭಾವಂತರ ಅನ್ವೇಷಣೆಯೇ ಪ್ರತಿಭಾ ಕಾರಂಜಿ
1 min readಪ್ರತಿಭಾವಂತರ ಅನ್ವೇಷಣೆಯೇ ಪ್ರತಿಭಾ ಕಾರಂಜಿ
ಶಿಡ್ಲಘಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ
ವಿಷಯಾದಾರಿತ ಶಿಕ್ಷಣದ ಮತ್ತೊಂದು ಭಗವಾದ ಪ್ರತಿಭಾವಂತ ಅನ್ವೇಷಣೆಯೇ ಪ್ರತಿಭಾ ಕಾರಂಜಿ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಅದನ್ನು ಹೊರತಂದು ಸೂಕ್ತ ಸಮಯದಲ್ಲಿ ಪ್ರೋತ್ಸಾಹ ನೀಡಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಶಿಕ್ಷಣ ಇಲಾಖೆಯ ಇಸಿಒ ಮಂಜುನಾಥ್ ತಿಳಿಸಿದರು.
ಶಿಡ್ಲಘಟ್ಟ ನಗರದ ವಾಸವಿ ವಿದ್ಯಾಸಂಸ್ಥೆಯ ಆವರಣದ ಲ್ಲಿ ಇಂದು ಏರ್ಪಡಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಇಸಿಒ ಮಂಜುನಾಥ್, ಇಂದಿನ ಪೀಳಿಗೆಯ ಮಕ್ಕಳು ಜನ್ಮತಃ ಪ್ರತಿಭೆ ಹೊಂದಿರುತ್ತಾರೆ. ಅದನ್ನು ಗುರ್ತಿಸುವ ಕೆಲಸವನ್ನು ಶಿಕ್ಷರು ಪ್ರಾಮಾಣಿಕ ವಾಗಿ ಮಾಡಿದಲ್ಲಿ ಅನೇಕ ಪ್ರತಿಭಾನ್ವಿತರನ್ನು ನಾಡಿಗೆ ಕೊಟ್ಟಂತಾಗುತ್ತದೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್ ಮಾತನಾಡಿ, ಪ್ರತಿಭೆ ಎನ್ನುವುದು ಸಾಧಾಕರ ಸ್ವತ್ತು, ಸತತವಾಗಿ ಶ್ರಮ ಪಟ್ಟಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ. ಶಿಕ್ಷಣ ಕೇವಲ ಪ್ರಶ್ನೆಗೆ ಉತ್ತರ, ಪಠ್ಯಕ್ಕೆ ಮಾತ್ರ ಸೀಮಿತ ಗೊಳಿಸದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮುವ ಕಾರ್ಯ ಆಗಬೇಕಾಗಿದೆ ಎಂದರು.
ಕಸಬಾ ಹೋಬಳಿಯ ೧೭ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮುಖ್ಯ ಶಿಕ್ಷಕಿ ಮುಮಿಯಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಯೋಕಿ ಪರಿಮಳ, ದೇವೆಂದ್ರ, ರವಿಚಂದ್ರಮೌಳೀ, ಶಿವಕುಮಾರ್, ಸಿಕೆ ರವಿ, ಮುನಿ ನಾರಾಯಣ ಸ್ವಾಮಿ, ಪ್ರತೀಶ್ ಇದ್ದರು.