ಕಾಂಗ್ರೆಸ್ ಸೋಲಿಸಿದ ರಾಜಕಾರಣಿ ಅದೇ ಪಕ್ಷ ಸೇರಲು ತಯಾರಿ
1 min readಕಾಂಗ್ರೆಸ್ ಸೋಲಿಸಿದ ರಾಜಕಾರಣಿ ಅದೇ ಪಕ್ಷ ಸೇರಲು ತಯಾರಿ
ಕಾಂಗ್ರೆಸ್‌ಬಾಗಿಲ ಬಳಿ ನಿಂತಿರುವ ನಾಯ ಎಂದು ಕೆಂಪರಾಜು ವ್ಯಂಗ್ಯ
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಂದವರು ಇಂದು ಅದೇ ಪಕ್ಷದ ಬಾಗಿಲ ಬಳಿ ನಿಲ್ಲುತ್ತಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ರಾಜಕಾರಣ ಎತ್ತ ಸಾಗುತ್ತಿದೆ ಎಂದು ಮುಂದಿನ ದಿನಗಳಲ್ಲಿ ಜನ ಉತ್ತರ ಸಿಗಲಿದೆ ಎಂದು ಸಮಾಡಜಸೇವಕ ಕೆಂಪರಾಜು ಹೇಳಿದರು.
ಕಾರ್ತಿಕ ಸೋಮವಾರದ ಪ್ರಯುಕ್ತ ಹಲವು ದೇವಾಲಯಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದ ಸಮಾಜ ಸೇವಕ ಕೆಂಪರಾಜು ನಂತರ ಮಾತನಾಡಿ, ಶ್ರೀರಾಮಲಿಂಗಶ್ವೇರ ದೇವಾಲಯ ಪವಾಡ ಇರುವ ದೇವರು ತಾಲ್ಲೂಕಿನಲ್ಲಿ ಉಥ್ತಮ ಮಳೆ ಬೆಳೆ ಆಗಲಿ ಎಂದು ಹಾರೈಸಿದರು. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನನಗೆ ಇನ್ನಿಲ್ಲದ ತೊಂದರೆ ನೀಡಿದರು, ನಾನು ಜನರಿಗೆ ನೀಡಿದ ಕುಕ್ಕರ್ ಬ್ಲಾಸ್ಟ್ ಆಗಿ ಮಹಿಳೆಯರಿಗೆ ಅನಾಹುತ ಆಗಿದೆ ಎಂದು ಅಪಪ್ರಚಾರ ಮಾಡಿದರು. ಅವರಿಗೆ ಅ ದೇವರು ಒಳ್ಳೆಯದು ಮಾಡಲಿ ಎಂದು ಕುಟಕಿದರು.
ಇಂದು ಗೆದ್ದು ಬೀಗುತ್ತಿರುವ ಜನಪ್ರತಿನಿಧಿ ರೈತರಿಗೆ ನೀಡಿರುವ ಆಶ್ವಾಸನೆಗಳು ಮರೀಚಿಕೆ ಆಗಿದೆ ಎಂದು ವ್ಯಂಗ್ಯವಾಡಿದರು.
ಕಳೆದ ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ಸಕ್ರಿಯವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಜನ ಸೇವೆಗೆ ನನ್ನ ಜೀವನ ಮುಡುಪು ಎಂದರು, ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನಿಷ್ಥೆಯಿಂದ ಇರುವ ಕಾರ್ಯಕರ್ತರನ್ನು ಕಣಕ್ಕಿಳಿಸಿ ನಮ್ಮ ಬಣವನ್ನು ಮುಂಚೂಣಿಗೆ ತರುವುದಾಗಿ ತಿಳಿಸಿದರು. ಸುದ್ದಿಗೊಷ್ಥಿಯಲ್ಲಿ ಕೆಂಪರಾಜು ಬಣದ ಡಾ. ಆದಿಮೂರ್ತಿರೆಡ್ಡಿ, ಹೋಟಲ್ ರಂಗ, ರಾಮು ಇದ್ದರು.