ಕೇಂದ್ರದೊ0ದಿಗೆ ಸಂಘರ್ಷ ಬೇಡ ಎಂದ ಸಂಸದ
1 min readಕೇಂದ್ರದೊ0ದಿಗೆ ಸಂಘರ್ಷ ಬೇಡ ಎಂದ ಸಂಸದ
ಕೇ0ದ್ರ ಸರ್ಕಾರದೊಂದಿಗೆ ಉಥ್ತಮ ಸಂಬ0ಧದಿ0ದ ಅಭಿವೃದ್ಧಿ
ಬಾಗೇಪಲ್ಲಿಯಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಜಾಗೃತಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಘರ್ಷ ರಾಜಕಾರಣದಿಂದ ನಾಡಿನ ಜನತೆಗೆ ಅನ್ಯಾಯವಾಗುತ್ತಿದೆ ಹೊರತು ಯಾವುದೇ ಅಭಿವೃದ್ದಿ ಆಗುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದೊ0ದಿಗೆ ಬೆರೆತು ಸ್ನೇಹಮಯಿ ಸರ್ಕಾರ ನಡೆಸಿ ಜನರಿಗೆ ಒಳ್ಳೆಯ ಆಡಳಿತ ನೀಡಬೇಕೆಂದು ಸಂಸದ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಡಿಗ್ರಿ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲೀಡ್ ಬ್ಯಾಂಕ್ ಆಶ್ರಯದಲ್ಲಿ ಅಯೋಜಿಸಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಡಾ.ಕೆ. ಸುಧಾಕರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋಧಿ ಅವರನ್ನು ಭೇಟಿ ಮಾಡಿರುವುದು ಸಂತಸದ ವಿಚಾರವಾಗಿದೆ, ಅಭಿವೃದ್ದಿ ಬಯಸುವ ಯಾವುದೇ ಸರ್ಕಾರಗಳು ಸಂಘರ್ಷಕ್ಕೆ ಇಳಿದರೆ ನಷ್ಟ ಅನುಭವಿಸಬೇಕಾಗುತ್ತೆ. ಅಭಿವೃದ್ದಿ ಸಾಧಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಪ್ರಭಾನಿ ನರೇಂಧ್ರ ಮೋಧಿ ನೇತೃತ್ವದ ಕೇಂದ್ರ ಸರ್ಕಾರ ಗಿರಿ ಜನರಿಗೆ, ಅಲ್ಪ ಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ವೃತ್ತ ಪರ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳ ಮೂಲಕ ಸಹಾಯಧನ ಕೊಟ್ಟು ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ, ಅದರೆ ಗ್ರಾಮೀಣ ಪ್ರದೇಶದ ಜನತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ದೇಶದ ಯುವಪೀಳಿಗೆ ಪ್ರಮುಖ ಪಾತ್ರವಹಿಸಬೇಂದು ಜಾಗೃತಿ ಮೂಡಿಸುತ್ತಿದ್ದೇವೆ. ಈ ದೇಶದ ಯುವಕರ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶಿಕ್ಷಣ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ನಿಮಗೆ ತಲುಪಿಸವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ ಎಂದರು.
ನ್ಯಾಷನಲ್ ಕಾಲೇಜು ಆವರಣದಲ್ಲಿ ತೆರೆಯಲಾಗಿದ್ದ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಕೇಂದ್ರ ಸರ್ಕಾರದ 150 ಹೆಚ್ಚು ಯೋಜನೆಗಳ ಮಾಹಿತಿಯುಳ್ಳ ಕರಪತ್ರಗಳನ್ನು ವೀಕ್ಷೀಸಿ, ವಿವಿಧ ಬಗೆಯ ಕೌಶಲ್ಯ ತರಬೇತಿದಾರರು ಸಿದ್ದಪಡಿಸಿದ್ದ ಹಲವು ಅಂಗಡಿ ಮಳಿಗೆಗೆ ಭೇಟಿ ನೀಡಿ ತರಬೇತುದಾರರಿಂದ ಮಾಹಿತಿ ಪಡೆದ ಸಂಸದರು ಸಂವಾದ ನಡೆಸಿ ಕೇಂದ್ರ ಸರ್ಕಾರದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಎಷುಕೇಷನ್ ಸೊಸೈಟಿ ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ, ಪಿಯು ಕಾಲೇಜು ಆಡಳಿತ ಮಂಡಳಿ ಅದ್ಯಕ್ಷ ವೆಂಕಟಶಿವಾರೆಡ್ಡಿ, ಡಿಹೆಚ್‌ಒ ಮಹೇಶ್, ಟಿ. ಕೋನಪರೆಡ್ಡಿ, ಹರಿನಾಥರೆಡ್ಡಿ, ಮಮತ ನಾಗರಾಜುರೆಡ್ಡಿ, ಪುರಸಭೆ ಉಪಾಧ್ಯೆಕ್ಷೆ ಸುಜಾತ ನಾಯ್ಡು, ಕೇಂದ್ರ ಸಂವಹನ ಪ್ರಚಾರ ಅಧಿಕಾರಿ ಎಸ್ ಟಿ ಶ್ರುತಿ , ಕ್ಷೇತ್ರ ಪ್ರಚಾರ ಸಹಾಯಕ ಪಿ.ದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಪ್ರಾಂಶುಪಾಲ ಇಮ್ತಿಯಾಜ್ ಅಹಮದ್ ಮುಭೀನ್ ಇದ್ದರು.