ನದಿ ಹರಿದರೆ ತಾಲೂಕಿನ ರೈತರಿಗೆ ಅನುಕೂಲ ಎಂದ ಶಾಸಕ
1 min read
ಉತ್ತರ ಪಿನಾಕಿನಿ ನದಿಗೆ ಬಾಗಿನ ಅರ್ಪಿಸಿದ ಶಾಸಕ
ಪಿನಾಕಿನಿ ನದಿ ನೀರು ಕೆರೆಗಳಿಗೆ ಹರಿಸುವ ಚಿಂತನೆ
ನದಿ ಹರಿದರೆ ತಾಲೂಕಿನ ರೈತರಿಗೆ ಅನುಕೂಲ ಎಂದ ಶಾಸಕ
ಗೌರಿಬಿದನೂರು ನಗರದಲ್ಲಿ ಉತ್ತರ ಪಿನಾಕಿನಿ ನದಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಂಪ್ರದಾಯಕವಾಗಿ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಗಾ ಮಾತೆಗೆ ಬಾಗಿನ ಸಮರ್ಪಣೆ ಮಾಡಿದರು.
ಗೌರಿಬಿದನೂರು ನಗರ ಹೊರವಲಯದಲ್ಲಿ ಹರಿಯುತ್ತಿರುವ ಉತ್ತರ ಪಿನಾಕಿನಿ ನದಿಗೆ ಶಾಸಕ ಪುಟ್ಟಸ್ವಾಮಿಗೌಡರು ಬಾಗಿನ ಅರ್ಪಿಸಿ ಮಾತನಾಡಿ, ಕ್ಷೇತ್ರಕ್ಕೆ ಉತ್ತರ ಪಿನಾಕಿನಿ ನದಿ ಜೀವನಾದಾರವಾದ ನದಿಯಾಗಿದ್ದು, ವರ್ಷಕ್ಕೆ ಒಮ್ಮೆ ಹರಿದರೆ ಎರಡು ಮೂರು ವರ್ಷಗಳ ಕಾಲ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ, ಜೊತೆಗೆ ಅಕ್ಕ ಪಕ್ಕದ ಕೆರೆಗಳಿಗೆ ನೀರು ಹರಿಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಉತ್ತರ ಪಿನಾಕಿನಿ ನದಿ ನೀರು ವಿನಾಕಾರಣ ಪೋಲಾಗುವುದನ್ನು ತಪ್ಪಿಸಲು ಅಂದಿನ ಸಂಸದ ದಿ.ಆರ್.ಎಲ್.ಜಾಲಪ್ಪನವರು ದೂರದೃಷ್ಟಿಯಿಂದ ಭಗೀರತ ಪ್ರಯತ್ನ ಮಾಡಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದ್ದಾರೆ , ಉತ್ತರ ಪಿನಾಕಿನಿ ನದಿಯ ನೀರು ತಾಲೂಕಿನ ಮರಳೂರು, ಇಡಗೂರು,ಚಂದನದೂರು ಸೇರಿದಂತೆ ಪಕ್ಕ ಮಧುಗಿರಿ ತಾಲೂಕಿನ ಕೆರೆಗಳಿಗೂ ನೀರು ಹರಿಯುವಂತೆ ಮಾಡಿದ್ದಾರೆ ಎಂದರು,
ಈ ನಿಟ್ಟಿನಲ್ಲಿ ನೀರು ವಿನಾಕಾರಣ ಮುಂದೆ ಹರಿದು ಆಂಧ್ರ‍್ರಪ್ರದೇಶದ ಪಾಲಾಗದಂತೆ ನಮ್ಮ ನೀರು ನಮ್ಮ ಕೆರೆಗಳಿಗೆ ತುಂಬಿಸುವ ಕೆಲಸವನ್ನು ಬದ್ಧತೆಯಿಂದ ಮಾಡಬೇಕು. ಸಂಬAಧ ಪಟ್ಟ ಅಧಿಕಾರಿಗಳ ನಿರ್ಲಕ್ಷತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನಗರಸಭ ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಫರೀದ್, ಪೌರಾಯುಕ್ತೆ ಡಿ.ಎಂ.ಗೀತಾ, ಲಕ್ಷ್ಮೀನಾರಾಯಣ ರೆಡ್ಡಿ, ನಗರ ಸಭೆ ಸದಸ್ಯ ಗೋಪಾಲ್, ಸಪ್ತಗಿರಿ ಇದ್ದರು.