ಸಿಎಂ, ಡಿ.ಸಿಎಂ ಹುದ್ದೆ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಶಾಸಕ
1 min readಸಿಎಂ, ಡಿ.ಸಿಎಂ ಹುದ್ದೆ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಶಾಸಕ
ವನ ಮಹೋತ್ಸವದಲ್ಲಿ ಗಿಡ ನೆಟ್ಟ ಶಾಸಕ ಸುಬ್ಬಾರೆಡ್ಡಿ
ಪರಿಸರ ರಕ್ಷಣೆಗೆ ಕೈಜೋಡಿಸುವಂತೆ ಕರೆ
ಸಿಎಂ ಮತ್ತು ಡಿ. ಸಿಎಂ ಹುದ್ದೆಯ ಯಾವುದೇ ಗೊಂದಲಗಲಿಲ್ಲ, ಪ್ರಸ್ತುತ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ, ಡಿಸಿಎಂ ಹುದ್ದೆಯಲ್ಲಿ ಡಿಕೆ ಶಿವಕುಮಾರ್ ಅವರು ಮುಂದುವರೆಯುತ್ತಾರೆ ಇದರಲ್ಲಿ ಯಾವುದೇ ಗೊಂದಲಗಲಿಲ್ಲ. ವಾಲ್ಮೀಕಿ ಹಣದ ಹಗರಣದ ತನಿಖೆ ನಡೆಯುತ್ತಿದೆ, ತನಿಖೆ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಬಾಗೇಪಲ್ಲಿ ಪ್ರವಾಸ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಶಾಸಕ ಸುಬ್ಬಾರೆಡ್ಡಿ, ರೇಷನ್ ಕಾರ್ಡ್ ಸರ್ವರ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದು ಎರಡು ದಿನಗಳ ಹಿಟದೆ ಗಮನಕ್ಕೆ ಬಂದಿದೆ. ಸಾರ್ವಜನಿಕರು ರೇಷನ್ ಕಾರ್ಡ್ ಮಾಡಿಸಲು ತೊಂದರೆ ಅನುಭವಿಸುತ್ತಿದ್ದಾರೆ, ಆದ್ದರಿಂದ ಇದರ ಬಗ್ಗೆ ಈಗ ನಡೆಯುವ ಅಧಿವೇಶನದಲ್ಲಿ ನಾನೇ ಪ್ರಸ್ತಾಪ ಮಾಡಿ ಇದನ್ನು ಪರಿಹರಿಸುತ್ತೇನೆ ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು. ಬಾಗೇಪಲ್ಲಿ ತಾಲೂಕಿನಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್ ಓಪನಿಂಗ್ ಮಾಡಲು ಸಿದ್ಧತೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಜೋತೆ ಚರ್ಚೆ ಮಾಡಿ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದರು.
ನoತರ ವನ ಮಹೋತ್ಸವದಲ್ಲಿ ಭಾಗವಹಿಸಿದ ಶಾಸಕ ಸುಬ್ಬಾರೆಡ್ಡಿ, ಪ್ರತಿಯೊಬ್ಬರು ಕನಿಷ್ಠ 5 ಸಸಿ ನೆಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು, ಪರಿಸರ ಇಲ್ಲದಿದ್ದರೆ ಮನುಷ್ಯನು ಬದುಕಲು ಸಾದ್ಯವಿಲ್ಲ ಎಂದು ಹೇಳಿದರು. ಶುಕ್ರವಾರ ಬಾಗೇಪಲ್ಲಿ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಉದ್ಟಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮನೆಗಳ ಆವರಣ ಮತ್ತು ಕೃಷಿಕರಾಗಿದ್ದರೆ ತಮ್ಮ ಜಮೀನುಗಳಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಣೆ ಮಾಡಬೇಕು. ಮರಗಿಡಗಳು ಚನ್ನಾಗಿದ್ದರೆ ಒಳ್ಳೆಯ ಗಾಳಿ, ನೀರು ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಮರಗಿಡಗಳ ನಾಶದಿಂದ ಮಳೆ ಅಭಾವ ಕಾಣಿಸಿಕೊಂಡು ಕುಡಿಯಲು ನೀರು ಸಿಗುವುದೇ ಕಷ್ಟವಾಗಿದೆ .ಒಂದು ವೇಳೆ ನೀರು ಸಿಕ್ಕರೂ ಫ್ಲೊರೈಡ್ ಅಂಶ ತುಂಬಿರುತ್ತದೆ. ಈ ನೀರು ಕುಡಿದ ಜನರು ನಾನಾ ರೋಗಗಳಿಗೆ ಬಲಿಯಾಗುತ್ತಾರೆ ಎದರು.
ಪ್ರತಿ ವನಮಹೋತ್ಸವ ದಿನ ಸಸಿ ನೆಟ್ಟು ಹೋಗುತ್ತಾರೆ, ಆದರೆ ಹೋದ ನಂತರ ಸಸಿ ಏನಾಗಿವೆ ಎಂದು ತಿರುಗಿ ನೋಡುವುದಿಲ್ಲ. ಕೊನೆಗೆ ಅವು ಬಿಸಿಲಿಗೆ ಒಣಗಿ ಹೋಗುತ್ತವೆ. ಯಾರೇ ಆದರೂ ಸಸಿ ನೆಟ್ಟ ಮೇಲೆ ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಿದರೆ ಮರವಾಗಿ ಬೆಳೆದು ಶುದ್ದ ಗಾಳಿ ನೀಡುತ್ತದೆ. ಮನುಷ್ಯರು ನಾನಾ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದಕ್ಕೆಲ್ಲ ಶುದ್ದ ಗಾಳಿ ಸಿಗದೆ ಇರುವುದರಿಂದ ನಾವು ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಪ್ರವಾಸಿ ಮಂದಿರದ ಆವರಣದಲ್ಲಿ ಸಸಿ ನೆಟ್ಟು ಪ್ರತಿವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರಶಾಂತ್ ಖಾನಗೌಡ ಪಾಟೀಲ, ತಾಪಂ ಇಒ ರಮೇಶ್, ಬಿಇಒ ತನುಜಾ, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ, ಸಾಮಾಜಿಕ ಅರಣ್ಯಾಧಿಕಾರಿ ರವಿಶಂಕರೆಡ್ಡಿ, ಉಪ ನೀರಿಕ್ಷಕ ಅಣ್ಣಪ್ಪ, ಸಿಬ್ಬಂದಿ ವೆಂಕಟೇಶ್, ಮಧುಕರ್ ಇದ್ದರು.