30ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಮುಷ್ಕರ ತರಗತಿಗಳಿಗೆ ಮರಳಿದರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ
1 min read30ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಮುಷ್ಕರ ಅನ್ನದಾನದ ಮೂಲಕ ವಿನೂತನ ಪ್ರತಿಭಟನೆ ಬೇಡಿಕೆ ಈಡೇರುವವರೆಗೂ ಮುಷ್ಕರ ವಾಪಸ್ಸಿಲ್ಲ
ತರಗತಿಗಳಿಗೆ ಮರಳಿದರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಂದೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೇವಾ ಕಾಯಮಾತಿ ಮಾಡಲು ಆಗ್ರಹಿಸಿ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸೇವಾ ಕಾಯಮಾತಿಗೆ ಆಗ್ರಹಿಸಿ ನ.23 ರಿಂದ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನೆ ಶುಕ್ರವಾರಕ್ಕೆ 30ನೇ ದಿನಕ್ಕೆ ಕಾಲಿಟ್ಟಿದೆ. ಸರಕಾರ ಮತು ಅತಿಥಿ ಉಪನ್ಶಾಸಕರ ನಡುವಿನ ಹಗ್ಗಜಗ್ಗಾಟ ನಾ ಕೊಡೆ ನೀ ಬಿಡೆ ಎಂಬತಾಗಿದೆ.
ರಾಜ್ಯದಲ್ಲಿರುವ 420 ಸರಕಾರಿ ಪದವಿ ಕಾಲೇಜುಗಳಲ್ಲಿ 11500 ಅತಿಥಿ ಉನ್ಯಾಸಕರು 2 ದಶಕಗಳ ಕಾಲ ಕನಿಷ್ಟ ಗೌರವಧನಕ್ಕೆ ಕೆಲಸ ಮಾಡುತ್ತಿದ್ದರೂ ಈವರೆಗೆ ಅವರನ್ನು ಸೇವೆಯಲ್ಲಿ ವಿಲೀನ ಮಾಡಲಾಗಿಲ್ಲ. ಹೊಸ ಸರಕಾರ ಬಂದಾಗಲೆಲ್ಲಾ ಪ್ರತಿಭಟನೆ ಮಾಡುವುದು ಕೆಲ ಬೇಡಿಕೆ ಈಡೇರಿಸಿಕೊಳ್ಳುವುದು ಬಿಟ್ಟರೆ ಖಾಯಂ ಮಾಡಬೇಕೆಂಬ ಮನಸ್ಸನ್ನೂ ಯಾರೂ ಮಾಡಿಲ್ಲ ಎಂದರು.
ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಕಾಯಮಾತಿ ಮಾಡುವ ಬಗ್ಗೆ ತಿಳಿಸಿತ್ತು. ಹೀಗಾಗಿಯೇ ಅಧಿಕಾರ ಬಂದಿದೆ ಕೂಡಲೇ ಕಾಯಂ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತಾಡಿದ ಜಿಲ್ಲಾಧ್ಯಕ್ಷ ಮುನಿರಾಜು, ಅತಿಥಿ ಉಪನ್ಯಾಸಕರಿಂದ ಸರಕಾರಕ್ಕೆ ಸಾಕಷ್ಟು ಲಾಭವಾಗಿದೆ. ಸೇವೆಯನ್ನು ಬಳಸಿಕೊಂಡಿರುವ ಸರಕಾರ ಬಿಡಿಗಾಸಿನ ಗೌರವಧನ ನೀಡಿ ನಮ್ಮ ಬದುಕುಗಳನ್ನೇ ನಾಶ ಮಾಡಿದೆ. ಈಗಲಾದರೂ ಕಾಯಂ ಮಾಡುವ ಮೂಲಕ 11500 ಅತಿಥಿ ಉಪನ್ಯಾಸಕರ ಬದುಕಲ್ಲಿ ಬೆಳಕು ಮೂಡುವಂತೆ ಮಾಡಲಿ ಎಂದು ಮನವಿ ಮಾಡಿದರು.
ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರೂ ಪ್ರತಿಕ್ರಿಯೆ ನೀಡಿದ್ದು, ಅತಿಥಿ ಉಪನ್ಯಾಸಕರು ತರಗತಿಗಳಿಗೆ ಮರಳಿದರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
https://youtube.com/@ctvnewschikkaballapura?si=C-CJWuVfM-65JQMa