ಅಪಘಾತದಿಂದ ರಸ್ತೆ ಡಿವೈಡರ್‌ಗೆ ನುಗ್ಗಿದ ಮಿನಿ ಬಸ್
1 min readಖಾಸಗಿ ಮಿನಿ ಬಸ್ ಚಾಲಕನ ಅತಿ ವೇಗ ತಂದ ಆಪತ್ತು
ಅಪಘಾತದಿಂದ ರಸ್ತೆ ಡಿವೈಡರ್‌ಗೆ ನುಗ್ಗಿದ ಮಿನಿ ಬಸ್
ಕೂದಲೆಳೆ ಅಂತರದಲ್ಲಿ ಜೀವ ಉಳಿಕಿಸಿಕೊಂಡ ಅಯ್ಯಪ್ಪ ಸ್ವಾಮಿ ಭಕ್ತರು
ಹೊರ ರಾಜ್ಯ ಕೇರಳದಿಂದ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಊಟಿ ರಸ್ತೆಯ ಮಾರ್ಗವಾಗಿ ಚಲಿಸುತ್ತಿದ್ದ ಮಿನಿ ಬಸ್ ರಾಷ್ಟಿಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೂದಲೆ ಅಂತರದಲ್ಲಿ ಜೀವ ಬದುಕಿಸಿಕೊಂಡಿರುವ ಘಟನೆ ನಂಜನಗೂಡಿನ ಹೊಸಹಳ್ಳಿ ಗೇಟ್ ಬಳಿ ಇಂದು ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ಮೂಲದ ಕಾಮಾಕ್ಷಿಪಾಳ್ಯ ಬೊಮ್ಮ ಸಂದ್ರ ಮೂಲದ 20 ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ದರ್ಶನ ಮಾಡಲು ಖಾಸಗಿ ಮಿನಿ ಬಸ್ ನಲ್ಲಿ ಕೇರಳಕ್ಕೆ ತೆರಳಿದ್ದರು. ಶಬರಿ ಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಮರಳುತ್ತಿರುವಾಗ ಊಟಿ ಮೈಸೂರು ರಾಷ್ಟಿಯ ಹೆದ್ದಾರಿಯ ನಂಜನಗೂಡಿನ ಹೊಸಹಳ್ಳಿ ಗೇಟ್ ಬಳಿ ಅಯ್ಯಪ್ಪ ಸ್ವಾಮಿ ಭಕ್ತರು ತೆರಳುತ್ತಿದ ಮಿನಿ ಬಸ್ ಚಾಲಕನ ಅತಿ ವೇಗ ಮತ್ತು ನಿದ್ರೆಗೆ ಜಾರಿದ ಪರಿಣಾಮ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಸ್ಸಿನಲ್ಲಿದ್ದ 20 ಜನ ಅಯ್ಯಪ್ಪ ಸ್ವಾಮಿ ಭಕ್ತರು ಕೂದಲೆಳೆ ಅಂತರದಲ್ಲಿ ಜೀವ ಬದುಕಿಸಿಕೊಂಡು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಪ್ರಸ್ತುತ ಗಾಯಗೊಂಡ ಭಕ್ತರಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡು ಸಂಚಾರಿ ಪೊಲೀಸರು ಘಟನೆ ಸ್ಥಳಕ್ಕೆ ಭಾವಿಸಿ ಗಾಯಾಳುಗಳನ್ನು ಪೋಷಿಸಲು ಮುಂದಾಗಿದ್ದಾರೆ. ಖಾಸಗಿ ಮಿನಿ ಬಸ್ ಅಪಘಾತದಿಂದ ಬಿಡಿ ಭಾಗಗಳು ಛಿದ್ರ ವಾಗಿರುವ ದೃಶ್ಯ ನೋಡಿದ ಸಾರ್ವಜನಿಕರು ಬಸ್ಸಿನಲ್ಲಿ ಚಲಿಸುತ್ತಿದ್ದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪುನರ್ಜನ್ಮ ಎನ್ನುತ್ತಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ.